August 30, 2025

ಶಾಲಾ ಮಕ್ಕಳಿಗೆ ಉಪಯೋಗಕ್ಕೆ ಬಾರದ ಶೌಚಾಲಯ

ಕೃಷ್ಣರಾಜಪೇಟೆ : ತಾಲ್ಲೂಕಿನ ಚಿಕ್ಕಮಂದಗರೆ ಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಥಮಿಕ ಶಾಲೆಯ ನಿರ್ಮಿಸಿರುವ ಶೌಚಾಲಯವು ನಾಲ್ಕು ವರ್ಷವಾದರು ಶಾಲಾ ಮಕ್ಕಳಿಗೆ ಬಳಕೆಗೆ ಬಾರದಂತಾಗಿದೆ ಎಂದು ಶಾಲ ಮಕ್ಕಳು ತಿಳಿಸಿದರು,


ಮಂದಗರೆ ಗ್ರಾಮ ಪಂಚಾಯಿತಿ ಇಂದ ಶಾಶ್ವತ ಶೌಚಾಲಯ ನಿರ್ಮಾಣ ಕಾಮಗಾರಿಗೆ ಲಕ್ಷಾಂತರ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಹೊರಗೆ ಮಾತ್ರ ಕಟ್ಟಡ ಇರುವಂತೆ ತೋರಿಸಿಕೊಂಡು ಒಳಗಿನ ಮೂಲಭೂತ ಸೌಲಭ್ಯಗಳಿಲ್ಲ, ನೀರಿನ ಟ್ಯಾಂಕ್ ಸಹ ಅಳವಿಡಿಸಿಲ್ಲ ಬಾಗಿಲುಗಳು ಇಲ್ಲದ ಸ್ಥಿತಿ, ಒಳಗಡೆ ನೀರಿನ ಸಂಪರ್ಕವಿಲ್ಲ, ವಾಸನೆ ತೀವ್ರವಾಗಿ ಹರಡಿರುವುದು, ಪೈಪ್ ಲೈನ್ ಕಾರ್ಯನಿರ್ವಹಿಸದಿರುವುದಿಲ್ಲ ಇವೆಲ್ಲವೂ ಇದನ್ನು ಉಪಯೋಗಕ್ಕೆ ಅಸಾಧ್ಯಗೊಳಿಸಿದೆ ಆದ್ರೆ ಕಾಮಗಾರಿ ಬಿಲ್ ಮಾತ್ರ ಪಡೆದುಕೊಂಡಿದ್ದಾರೆ..

ಶಿಕ್ಷಕರ ಮತ್ತು ಮಕ್ಕಳ ಬೇಸರ
ನೆಪ ಮಾತ್ರಕ್ಕೆ ಶೌಚಾಲಯ ಇದೆ, ಆದರೆ ಉಪಯೋಗಕ್ಕೆ ಬರುವಂತಿಲ್ಲ. ಕಾಮಗಾರಿ ಮಾಡಿದವರು ನಿಗದಿತ ಗುಣಮಟ್ಟ ಪಾಲಿಸಿಲ್ಲ. ಇಂತಹ ಸ್ಥಿತಿಯಿಂದ ಮಕ್ಕಳ ಶಿಕ್ಷಣಕ್ಕೂ ಭಂಗ ಉಂಟಾಗಿದೆ, ಎಂದು ಶಾಲಾ ಸಿಬ್ಬಂದಿಯೊಬ್ಬರು ಹೇಳಿದರು. ಮತ್ತು ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಇದರ ಬಗ್ಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯಿತಿ ಮತ್ತು ಕ್ಷೇತ್ರದ ಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸಮಸ್ಯೆಗೆ ಯಾವತ್ತೂ ಪರಿಹಾರ ಸಿಕ್ಕಿಲ್ಲ. ಶೌಚಾಲಯ ಬಳಸಲು ಅನುಕೂಲವಾಗುವಂತೆ ತುರ್ತು ನವೀಕರಣ ಹಾಗೂ ನೀರು, ಪೈಪ್ ಸಂಪರ್ಕ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು.

ಈ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಶೌಚಾಲಯವನ್ನು ಶೀಘ್ರ ಉಪಯೋಗಕ್ಕೆ ಯೋಗ್ಯ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ವರದಿ : ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

About The Author