August 30, 2025

ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಸ್ಕೃತಿ ಅನಾವರಣ ಕಾರ್ಯಕ್ರಮ

ಮುರ್ಡೇಶ್ವರ : ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರೊ. ಕೃಷ್ಣ ಹೆಗಡೆ ಉಪನ್ಯಾಸಕರು ಆರ್ ಎಂ ಎಸ್ ರೂರಲ್ ಪಾಲಿಟೆಕ್ನಿಕ್ ಮುರುಡೇಶ್ವರ ರವರು ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಇಂದಿನ ತಂತ್ರಜ್ಞಾನ ಯುಗದಲ್ಲಿಯೂ, ನಮ್ಮ ಸಂಸ್ಕೃತಿಯು ನಮಗೆ ನೈತಿಕತೆ, ಕುಟುಂಬದ ಮಹತ್ವ, ಸಮಾಜದ ಕಳಕಳಿಯನ್ನು ಬೋಧಿಸುತ್ತದೆ. ಇದನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ನಾವೆಲ್ಲರೂ ನಮ್ಮ ಸಂಸ್ಕೃತಿಯನ್ನು ಗೌರವಿಸಿ, ಮುಂದಿನ ಪೀಳಿಗೆಗೆ ಪಾಠವಾಗಿ ಕಲಿಸೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಡಾ. ಶಾಂತ ಶ್ರೀ ಹರಿದಾಸ ರವರು ಮಾತನಾಡಿ ಸಂಸ್ಕೃತಿ ಎಂದರೆ ಕೇವಲ ನಮ್ಮ ಹಬ್ಬಗಳು, ಆಚರಣೆಗಳು ಮಾತ್ರವಲ್ಲ. ಅದು ನಮ್ಮ ಮಾತು, ನಡತೆ, ಬೋಧನೆ, ಜೀವನಮೌಲ್ಯಗಳ ಪ್ರತಿಬಿಂಬ. ಭಾರತವು ವಿವಿಧ ಭಾಷೆ, ಧರ್ಮ, ಜನಾಂಗಗಳಿAದ ಕೂಡಿದ ದೇಶವಾದರೂ, ನಮ್ಮ ಸಂಸ್ಕೃತಿಯ ಮೂಲತತ್ತ್ವವೇ ಏಕತೆ, ಸಹಿಷ್ಣುತೆ ಮತ್ತು ಪರಸ್ಪರ ಗೌರವ ಎಂದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಂಚಾಲಕರಾದ ಪ್ರೊ. ಗಣಪತಿ ಕಾಯ್ಕಿಣಿ ಪ್ರಾಸ್ತಾವಿಕ ಮಾತನಾಡಿ ಸಂಸ್ಕೃತಿ ನಮಗೆ ವ್ಯಕ್ತಿತ್ವ ವಿಕಾಸಕ್ಕೆ ಸಹಾಯ ಮಾಡುತ್ತದೆ. ವಿದ್ಯಾರ್ಥಿಯು ಸಂಸ್ಕೃತಿಯನ್ನು ಅರ್ಥಮಾಡಿಕೊಂಡಾಗ, ಅವನು ಸಮಾಜದ ಬಗ್ಗೆ ಜವಾಬ್ದಾರಿಯುತ ವ್ಯಕ್ತಿಯಾಗುತ್ತಾನೆ. ಎಂದು ತಿಳಿಸಿದರು.

ಕುಮಾರಿ ಅರ್ಚನಾ ನಾಯ್ಕ ಸ್ವಾಗತಿಸಿ, ಕುಮಾರಿ ವೇದ ಆಚಾರ್ಯ ಎಲ್ಲರನ್ನ ಹೊಂದಿಸಿ, ಕುಮಾರಿ ರಕ್ಷಿತಾ ಕುಂಬಾರ ಕಾರ್ಯಕ್ರಮದ ನಿರೂಪಣೆ ಗೈದರು, ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಹ ಸಂಚಾಲಕರಾದ ಪ್ರೊ.ಮಮತಾ ಮರಾಠಿ, ಪ್ರೊ ಸ್ವಾತಿ ಶೆಟ್ಟಿ, ಪ್ರೊ ನಾಗಶ್ರೀ ನಾಯ್ಕ್ ಹಾಜರಿದ್ದರು.

About The Author