November 19, 2025

ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದ ಹೆಸರನ್ನು ಹಾಳು ಮಾಡುವ ಅಪಪ್ರಚಾರದ ವಿರುದ್ದ ಭಕ್ತರಿಂದ ರಾಜ್ಯಪಾಲರಿಗೆ ಮನವಿ

ಭಟ್ಕಳ: ಅನಾದಿ ಕಾಲದಿಂದ ಹಿಂದೂ ಭಕ್ತರ ಶ್ರದ್ಧಾಕೇಂದ್ರವಾಗಿರುವ ಶ್ರೀ ಮಂಜುನಾಥ ಸ್ವಾಮಿ ಧರ್ಮಸ್ಥಳದ ಬಗ್ಗೆ ಕೆಲವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಹರಡುತ್ತಿರುವ ಬಗ್ಗೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಶಿಲ್ದಾರ ನಾಗೇಂದ್ರ ಕೋಳಶೆಟ್ಟಿ ಮೂಲಕ ಭಕ್ತ ವೃಂದ, ದೈವ ಪಾತ್ರಿಗಳು ಮತ್ತು ದಾಸರು ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಕ್ಷೇತ್ರದ ಹೆಸರನ್ನು ಹಾಳು ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮನವಿಯಲ್ಲಿ ವಿವರಿಸಲಾಯಿತು, ಶ್ರೀ ಕ್ಷೇತ್ರವು ಹಲವು ತಲೆಮಾರುಗಳಿಂದ ಭಕ್ತರ ಸೇವೆಯಲ್ಲಿ ನಿರತವಾಗಿದ್ದು, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತಿದೆ. ಯಾವುದೇ ಸತ್ಯಾಂಶವಿಲ್ಲದ ಆರೋಪಗಳನ್ನು ಹೊರಡಿಸುವುದರಿಂದ ಕ್ಷೇತ್ರದ ಗೌರವಕ್ಕೆ ಹೊಂಚು ತಗುಲಿದೆ. ಭಕ್ತರು, ಈ ರೀತಿಯ ಅಪಪ್ರಚಾರ ಮುಂದುವರಿದರೆ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಂಜುನಾಥ ಗಣಪತಿ ನಾಯ್ಕ ಸೋಡಿಗದ್ದೆ, ಶ್ರೀಧರ ನಾಯ್ಕ ವೆಂಕ್ಟಾಪುರ, ಮಂಜುನಾಥ ನಾಗಪ್ಪ ಗೊಂಡ ಜಾಲಿ, ರಾಜು ಕೆ. ಮೊಗೇರ ಹೆರ್ತಾರ, ಭರತ ಮೊಗೇರ ಬೆಳ್ನಿ ಮತ್ತಿತರರು ಹಾಜರಿದ್ದರು.

About The Author

error: Content is protected !!