November 19, 2025

ಗುಣವಂತೆಯಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ –

ಹೊನ್ನಾವರ : ಹಿರಿಯರ ದಿನಾಚರಣೆ ಅಂಗವಾಗಿ ಗುಣವಂತೆಯ ಒಕ್ಕಲಿಗರ ಸಭಾಭವನದಲ್ಲಿ ದಿನಾಂಕ 24.08.2025 ರವಿವಾರ ಲಯನ್ಸ್ ಕ್ಲಬ್ ಹೊನ್ನಾವರ, ಆರ್ಟ್ ಆಫ್ ಲಿವಿಂಗ್ ಬೆಂಗಳೂರು, ಸಮರ್ಪಣಾ ವೇದಿಕೆ ಗುಣವಂತೆ, ಕನ್ನಡ ಸಾಹಿತ್ಯ ಪರಿಷತ್, ಹೊನ್ನಾವರ ಮತ್ತು ಶ್ರೀ ಸದ್ಗುರು ಸೇವಾ ಅಭಿವೃದ್ಧಿ ಟ್ರಸ್ಟ್ ನೀಲಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಬೆಳಿಗ್ಗೆ 9 ಗಂಟೆಯಿAದಲೇ ಆರಂಭಗೊಳ್ಳುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದಯ, ಕಣ್ಣು, ದಂತ, ಮಧುಮೇಹ, ಮಕ್ಕಳ ಆರೋಗ್ಯ ಮತ್ತು ಲೆಪ್ರೋಸ್ಕೊಪಿಗೆ ಸಂಬAಧಪಟ್ಟ ವೈದ್ಯರು ತಪಾಸಣೆ ಮಾಡಿ ಯೋಗ್ಯ ಆರೋಗ್ಯ ಸಲಹೆ ಸೂಚನೆ ನೀಡಲಿದ್ದಾರೆ. ಹೊನ್ನಾವರದ ಖ್ಯಾತ ವೈದ್ಯರಾದ ಡಾ ಚಂದ್ರಶೇಖರ್ ಶೆಟ್ಟಿ, ಪ್ರಕಾಶ್ ನಾಯಕ,ಡಾ. ಪ್ರಮೋದ ಫಾಯ್ದೆ, ಡಾ.ನಾಗರಾಜ ಬೋಸ್ಕಿ ,ಡಾ. ವಿನಾಯಕ ರಾಯ್ಕರ್, ಡಾ. ಮಲ್ಲಿಕಾರ್ಜುನ ಮುಂತಾದ ವೈದ್ಯರು ತಪಾಸಣಾ ಶಿಬಿರದಲ್ಲಿ ಉಪಸ್ಥಿತರಿದ್ದು, ಆಗಮಿಸಿದ ಶಿಬಿರಾರ್ಥಿಗಳಿಗೆ ಆರೋಗ್ಯ ಸಲಹೆ ನೀಡಲಿದ್ದಾರೆ.

 ಗುಣವಂತೆಯ ಸುತ್ತಮುತ್ತಲಿನ ಎಲ್ಲಾ ಹಳ್ಳಿಯ ಜನರು ಈ ಬೃಹತ್ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆಯಬೇಕೆಂದು ಸಂಘಟಕರು ಕೇಳಿಕೊಂಡಿದ್ದಾರೆ.

About The Author

error: Content is protected !!