
ಹೊನ್ನಾವರ: ಅಕೇಶಿಯಾ ಬದಲು ಸ್ವಾಭಾವಿಕ ಕಾಡುಗಳನ್ನು ಬೆಳೆಸಿದರೆ ಭೂಮಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವ ಜೊತೆಗೆ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ.ಕಾಮಕೋಡ ದೇವರ ಕಾಡು ಸ್ವಾಭಾವಿಕ ಅರಣ್ಯವನ್ನು ಹೇಗೆ ಉಳಿಸಿ ಬೆಳೆಸಬಹುದು ಎನ್ನುವುದಕ್ಕೆ ಉತ್ತಮ ನಿದರ್ಶನವಾಗಿದೆ’ ಎಂದು ಹೈಕೋರ್ಟ್ ಹಿರಿಯನ್ಯಾಯವಾದಿ ವಿಘ್ನೇಶ್ವರ ಶಾಸ್ತಿç ಅಭಿಪ್ರಾಯಪಟ್ಟರು.
ಕಾಮಕೋಡ ದುರ್ಗಮ್ಮ ದೇವಸ್ಥಾನ,ಅರಣ್ಯ ಇಲಾಖೆ ಹಾಗೂ ಕಾಮಕೋಡ ಪರಿಸರ ಕೂಟ ಇವುಗಳ ಸಹಯೋಗದಲ್ಲಿ ಹೆರಾವಲಿ ಗ್ರಾಮದ ಹಾಚಲಮಕ್ಕಿಯ ಕಾಮಕೋಡ ದೇವರಕಾಡಿನಲ್ಲಿ ಸೋಮವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ಮಾತನಾಡಿ,ಅರಣ್ಯೀಕರಣ ಅರಣ್ಯ ಜಾಗದ ಅತಿಕ್ರಮಣ ತಡೆಯಲು ಉತ್ತಮ ಮಾರ್ಗವಾಗಿದೆ.ಅರಣ್ಯ ಇಲಾಖೆ ಸ್ವಾಭಾವಿಕ ಅರಣ್ಯ ಬೆಳೆಸಲು ಹೆಚ್ಚಿನ ಆದ್ಯತೆ ನೀಡುತ್ತಿದೆ.ಕಾಮಕೋಡ ದೇವರಕಾಡಿನಲ್ಲಿ ದೇವಸ್ಥಾನದ ಭಕ್ತರಿಗಾಗಿ ಸಭಾಭವನ ಸೇರಿದಂತೆ ಕೆಲವು ಮೂಲಭೂತ ಸೌಕರ್ಯಗಳನ್ನು ಅರಣ್ಯ ಇಲಾಖೆ ಒದಗಿಸಿದ್ದು ದೇವಸ್ಥಾನದ ಊಟದ ಕೋಣೆ ಕಟ್ಟಡ ನವೀಕರಣಕ್ಕೆ 3 ಲಕ್ಷ ರೂ.ನೀಡಲಾಗುವುದು’ ಎಂದು ತಿಳಿಸಿದರು.
ಉಪ ವಲಯ ಅರಣ್ಯಾಧಿಕಾರಿ ವಿಶಾಲ ಡಿ.,ದೇವಸ್ಥಾನ ಸಮಿತಿಯ ಅಧ್ಯಕ್ಷ ನೀಲಕಂಠ ನಾಯ್ಕ,ಉಪಾಧ್ಯಕ್ಷ ಗಂಗಾಧರ ನಾಯ್ಕ ಭಾಗವಹಿಸಿದ್ದರು.
ದೇವರಕಾಡಿನಲ್ಲಿ ಗಿಡಗಳನ್ನು ನೆಡಲಾಯಿತು.ತಾಲ್ಲೂಕಿನ ಅರೆಅಂಗಡಿ ಸಮೀಪ ಇತ್ತೀಚೆಗೆ ಹೈಕೋರ್ಟ್ ಹಾಗೂ ಲೋಕಾಯುಕ್ತ ನ್ಯಾಯಮೂರ್ತಿಗಳ ಪಾಲ್ಗೊಳ್ಳುವಿಕೆಯಲ್ಲಿ ‘ಸಹಸ್ರಾರು ವೃಕ್ಷಾರೋಪಣ’ ಕಾರ್ಯಕ್ರಮ ಸಂಘನೆಯ ರೂವಾರಿಯಾಗಿ ಕಾರ್ಯನಿರ್ವಹಿಸಿದ್ದ ಕಾರಣಕ್ಕೆ ಕಾಮಕೋಡ ಪರಿಸರ ಕೂಟದ ವತಿಯಿಂದ ವಕೀಲ ವಿಘ್ನೇಶ್ವರ ಶಾಸ್ತಿç ಅವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕ ನಾಗರಾಜ ಹೆಗಡೆ ಅಪಗಾಲ ಕಾಮಕೋಡ ಪರಿಸರ ಕೂಟದ ಅಧ್ಯಕ್ಷ ಡಾ.ಎಂ.ಜಿ.ಹೆಗಡೆ ಉಪಸ್ಥಿತರಿದ್ದರು
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ