November 18, 2025

ಭಟ್ಕಳ ಪುರಾತನ ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ವ್ಯಾಪಾರಿಗಳ ಬಿಸಿ ಎಚ್ಚರಿಕೆ!

ಭಟ್ಕಳ ಪುರಾತನ ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ವ್ಯಾಪಾರಿಗಳ ಬಿಸಿ ಎಚ್ಚರಿಕೆ!ಮಾರುಕಟ್ಟೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಬಲವಂತ ಮಾಡಿದ್ರೆ ಆತ್ಮಹತ್ಯೆಗೂ ಸಿದ್ಧ!

ಭಟ್ಕಳ: ಶತಮಾನಗಳಿಂದ ಜೀವಂತವಾಗಿರುವ ಭಟ್ಕಳ ನಗರ ರಾಜಾಂಗಣದ (ಹಳೆಯ ಬಸ್ ನಿಲ್ದಾಣ) ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸುವ ಪುರಸಭೆಯ ಯತ್ನಕ್ಕೆ ಮೀನು ವ್ಯಾಪಾರಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

ತಹಶೀಲ್ದಾರ್ ಕಚೇರಿಗೆ ಬಂದು ತಾಲೂಕು ಮೀನುಗಾರರು ಮತ್ತು ಮೀನು ಮಾರಾಟಗಾರರ ಸಂಘ (ರಿ.) ಮನವಿ ಸಲ್ಲಿಸಿದ್ದು, ಸೆಪ್ಟೆಂಬರ್ 1ರಿಂದ ಹಳೆಯ ಬಸ್ ನಿಲ್ದಾಣದ ಮಾರುಕಟ್ಟೆ ಬಂದ್ ಮಾಡುವ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಮಾರುಕಟ್ಟೆಯಲ್ಲಿ 150-200 ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದು, ಅದನ್ನು ಅವಲಂಬಿಸಿ ನೂರಾರು ಅಂಗಡಿಕಾರರು, ರಿಕ್ಷಾ ಚಾಲಕರು ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಸ ಮಾರುಕಟ್ಟೆಗೆ ಬಲವಂತವಾಗಿ ಸ್ಥಳಾಂತರಿಸುವುದು ದುರುದ್ದೇಶಪೂರ್ವಕ ನಿರ್ಧಾರ ಎಂದು ಮೀನು ವ್ಯಾಪಾರಿಗಳು ಆರೋಪಿಸಿದ್ದಾರೆ.

ಈ ವೇಳೆ ಮಾತನಾಡಿದ ಮೀನು ಮಾರಾಟ ಮಹಿಳೆ ಕಲ್ಯಾಣಿ ಕಣ್ಣೀರು ಹಾಕುತ್ತಾ ಯಾರಾದರೂ ಮಾರುಕಟ್ಟೆ ಸ್ಥಳಾಂತರಕ್ಕೆ ಬಂದ್ರೆ ನಾವು ಚೂರಿ ಹಿಡಿಯುತ್ತೇವೆ, ಆತ್ಮಹತ್ಯೆಗೂ ಸಿದ್ದ! ಗ್ರಾಹಕರ ಕೈ ಹಿಡಿದು ಅಣ್ಣ ಅಪ್ಪಾ ಎಂದು ಬದುಕು ಸಾಗಿಸುತ್ತೇವೆ. ಮಾರುಕಟ್ಟೆ ಬಿಟ್ಟುಕೊಡುವುದಿಲ್ಲ! ಎಂದು ಬಿಸಿ ಎಚ್ಚರಿಕೆ ನೀಡಿದ್ದಾರೆ.

About The Author

error: Content is protected !!