August 29, 2025

ಪ್ರವಾದಿ ಮುಹಮ್ಮದ್ (ಸ) ಕ್ವಿಜ್ ಸ್ಪರ್ಧೆ

ಭಟ್ಕಳ: ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ಶಿಕ್ಷಣಗಳನ್ನು ಜನರಿಗೆ ತಿಳಿಸಲು ಇನ್‌ಸ್ಟಿಟ್ಯೂಟ್ ಆಫ್ ಟೀಚಿಂಗ್ಸ್ ಆಫ್ ಪ್ರೋಫೆಟ್ ಮುಹಮ್ಮದ್ (ಸ) ಆನ್‌ಲೈನ್ ಸೀರತ್ ಕ್ವಿಜ್ ಸ್ಪರ್ಧೆ ಯನ್ನು ಆಯೋಜಿಸಿದೆ. ಈ ಸ್ಪರ್ಧೆ ಸೆಪ್ಟೆಂಬರ್ 1, 2025 ರಿಂದ ಆರಂಭವಾಗಲಿದೆ.

ಯಾರಾದರೂ ಭಾಗವಹಿಸಬಹುದು, ಯಾವುದೇ ನೋಂದಣಿ ಅಥವಾ ಶುಲ್ಕ ಇಲ್ಲ. ಪ್ರತಿದಿನ 10 ಪ್ರಶ್ನೆಗಳು (5 ಬಹು(ಮಲ್ಟಿಪಲ್) ಆಯ್ಕೆ, 5 ಮುಕ್ತ) ಗೂಗಲ್ ಫಾರ್ಮ್ ಮೂಲಕ ಬರಲಿದೆ. ಉತ್ತರಗಳ ವಿವರಣೆಗೆ ಲಿಂಕ್ ಕೊಡಲಾಗುವುದು. ಸ್ಪರ್ಧೆಯು ಜ್ಞಾನವನ್ನು ಹೆಚ್ಚಿಸಲು ಮತ್ತು ಸೀರತ್‌ನ ಬಗ್ಗೆ ತಿಳಿಯಲು ಸಹಾಯಕವಾಗಿದೆ. ಉತ್ತಮ ಪ್ರದರ್ಶನಕ್ಕೆ 35,000 ರೂ. ಬಹುಮಾನ ಇದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವಾಟ್ಸಾಪ್ (ನಂ 7795040474) ಚಾನೆಲ್‌ಗೆ ಸೇರಿ ಪಡೆಯಬಹುದಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author