August 29, 2025

ಶ್ರೀ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ವತಿಯಿಂದ ಜಮದಗ್ನಿ ಶೀನ ನಾಯ್ಕ್ ಅವರನ್ನು ಯಕ್ಷಗಾನ ಸೇವೆಗಾಗಿ ಸನ್ಮಾನ

ಶ್ರೀ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವತಿಯಿಂದ ನೀಡಲಾಗುತ್ತಿದ್ದ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದ ಶ್ರೀ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ ಶ್ರೀ ಕ್ಷೇತ್ರದಿಂದ ಶ್ರೀ ರಾಮಚಂದ್ರ ಭಟ್ ಅವರ ಆಶಯದಂತೆ ಪ್ರತಿ ವರ್ಷ ಅಶಕ್ತರಿಗೆ, ಅವಶ್ಯಕತೆ ಇರುವವರಿಗೆ ದೇವಸ್ಥಾನದ ವತಿಯಿಂದ ನೀಡಲಾಗುತ್ತಿದ್ದ ಪ್ರಸಾದ ರೂಪದ ಸಹಾಯಧನ ವಿತರಿಸುತ್ತಿದ್ದೇವೆ ಎಂದರು.

ಹಾಲಾಡಿ ಕೃಷ್ಣ ನಾಯ್ಕ ಇವರನ್ನು ಯಕ್ಷಗಾನಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು, ಸನ್ಮಾನ ಸ್ವೀಕರಿಸಿದ ಹಾಲಾಡಿ ಕೃಷ್ಣ ನಾಯ್ಕ ಹಾಗೂ ಜಮದಗ್ನಿ ಶೀನ ನಾಯ್ಕ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಾಸಕ ಗುರುರಾಜ ಗಂಟಿಹೊಳೆ ಅವರು ಅಶಕ್ತರಿಗೆ ಸಹಾಯಧನ ವಿತರಿಸಿ ಮಾತನಾಡುತ್ತಾ ಹಟ್ಟಿಯಂಗಡಿ ಶಾಲೆ ರಾಜ್ಯದಲ್ಲಿಯೇ ಒಂದು ಉತ್ತಮ ಶಾಲೆ ಯಾಗಿದೆ ಹಲವಾರು ದೂರವಾಣಿ ಮಾಡಿ ನನಗೆ ಹೇಳುತ್ತಿರುತ್ತಾರೆ , ಯಕ್ಷಗಾನ ಸಂಸ್ಕೃತಿಗೆ ಒಂದು ಉತ್ತಮ ಕೊಡುಗೆ ನೀಡಿದೆ ಯಕ್ಷಗಾನ ಮನೆ ಮನೆಗೆ ತಲುಪಿಸುವವರನ್ನು ಗೌರವಿಸುವುದು ಒಂದು ಉತ್ತಮ ಎಂದ ಅಚರು ಹಟ್ಟಿಯಂಗಡಿ ದೇವಸ್ಥಾನ ಹಾಗೂ ಇಲ್ಲಿನ ಶಾಲೆ ರಾಜ್ಯದಲ್ಲಿಯೇ ಒಂದು ಉತ್ತಮ ಶಾಲೆ ಎನ್ನುವುದನ್ನು ಪುನರ್ ಉಚ್ಚರಿಸಿದರು. ಹಟ್ಟಿಯಂಗಡಿ ಕ್ಷೇತ್ರದಿಂದ ಅನೇಕ ಉತ್ತಮ ಕಾರ್ಯಗಳಾಗುತ್ತಿದ್ದು ಅದಕ್ಕೆ ಸದಾ ನನ್ನ ಬೆಂಬಲ ಇದೆ ಎಂದರು.

28 ವರ್ಷದಿಂದ ಪ್ರೌಡ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಏರ್ಪಡಿಸುವ ಸ್ಪರ್ಧೆಗಳಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗುರುಕುಲ ಪಬ್ಲಿಕ್ ಶಾಲೆ ವಕ್ವಾಡಿ ಇವರಿಗೆ ವಿತರಣೆ ಮಾಡಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಗುರುರಾಜ ಗಂಟಿಹೊಳೆ ಅವರು ಒಬ್ಬ ಪ್ರಾಮಾಣಿಕ ರಾಜಕಾರಣಿಯಾಗಿದ್ದಾರೆ. ಭಾರತ ಸದೃಢವಾಗಿ ನಿಲ್ಲಲು ಪ್ರಾಮಾಣಿಕ ರಾಜಕಾರಣಿಗಳು ಅಗತ್ಯವಿದೆ ಎಂದು ಕರೆ ನೀಡಿದರು. ದೇವಸ್ಥಾನಗಳಿಗೆ ಅಶಕ್ತರಿಗೆ ನೀಡಿದ ಸಹಾಯಧನ ಪ್ರಸಾದ ರೂಪದಲ್ಲಿ ನೀಡಿದ್ದಾರೆ ಅದರಿಂದ ಎಲ್ಲರಿಗೂ ಒಳ್ಳೆಯದಾಗಲಿ ಹಾರೈಕೆ. ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಉಪ ಪ್ರಾಂಶುಪಾಲ ರಾಮದೇವಾಡಿಗ ನಿರ್ವಹಿಸಿದರು. ಶಿಕ್ಷಕ ಗಣೇಶ ದೇವಾಡಿಗ ವಂದಿಸಿದರು. ಶ್ರೀಮತಿ ನೇತ್ರಾವತಿ ಬಾಲಚಂದ್ರ ಭಟ್ಟ ಹಾಗೂ ಶ್ರೀಮತಿ ವಿದ್ಯಾ ಭಟ್ಟ ಪ್ರಾರ್ಥನೆ ಹಾಡಿದರು.

About The Author