November 19, 2025

ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ

ಭಟ್ಕಳ: ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯ 32ನೇ ವರ್ಷದ ಕಾರ್ಯಕ್ರಮದಲ್ಲಿ ವಿಶಿಷ್ಟ ಕ್ಷಣ, ಸತತ ಮೂರು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ವೆಂಕಟರಮಣ ನಾರಾಯಣ ನಾಯ್ಕ ಅವರನ್ನು ಆಡಳಿತ ಕಮಿಟಿ ಸದಸ್ಯರು ಹಾಗೂ ಊರಿನ ಜನತೆ ಭರ್ಜರಿಯಾಗಿ ಸನ್ಮಾನಿಸಿದರು.

ಸಮಿತಿಯ ಚಟುವಟಿಕೆಗಳಿಗೆ ತೊಡಗಿಸಿಕೊಂಡು ಹಬ್ಬದ ಯಶಸ್ವಿ ಆಯೋಜನೆಗೆ ಕೈಜೋಡಿಸಿದ ವೆಂಕಟರಮಣ ನಾಯ್ಕರ ಪರಿಶ್ರಮಕ್ಕೆ ಹೃದಯಂಗಮ ಗೌರವ ಸಲ್ಲಿಸಿದ ಗ್ರಾಮಸ್ಥರು, ಅವರ ನಾಯಕತ್ವದಿಂದ ಗಣೇಶೋತ್ಸವ ಮತ್ತಷ್ಟು ವೈಭವ ಪಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಾರಾಯಣ ನಾಯ್ಕ,ಶ್ರೀಧರ್ ನಾಯ್ಕ,ಸುರೇಶ್ ನಾಯ್ಕ, ವೆಂಕಟೇಶ ನಾಯ್ಕ, ದೇವರಾಜ್ ನಾಯ್ಕ,ಯೋಗೆಶ ದೇವಡಿಗ್,ಶಂಕರ್ ನಾಯ್ಕ ಇದ್ದರು.

About The Author

error: Content is protected !!