
ಭಟ್ಕಳ: ಗಣಪತಿ ಹಬ್ಬದ ಸಂಭ್ರಮದಲ್ಲಿ ಭಟ್ಕಳ ನಗರ ಠಾಣೆಯ ಪೊಲೀಸರು ಈ ಬಾರಿ ವಿಶಿಷ್ಟ ಉಡುಗೆ ತೊಟ್ಟಿದ್ದಾರೆ. ಸಾಮಾನ್ಯವಾಗಿ ಖಾಕಿ ಉಡುಗೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ, ಸಿಪಿಐ ದಿವಾಕರ ಪಿ.ಎಂ. ಅವರ ನೇತೃತ್ವದಲ್ಲಿ, ಸಾಂಪ್ರದಾಯಿಕ ಉಡುಗೆಯಲ್ಲಿ ದೇವರ ಪೂಜಾಕಾರ್ಯದಲ್ಲಿ ಪಾಲ್ಗೊಂಡು ಭಕ್ತರ ಮನಸೆಳೆದರು.
ನಗರ ಠಾಣೆ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಗೆ ನಾಲ್ಕನೇ ದಿನದ ಮಹಾಪೂಜೆಯ ವೇಳೆ, ಪುರುಷ ಪೊಲೀಸರು ಪಂಚೆ ಶಾಲು ತೊಟ್ಟು, ಮಹಿಳಾ ಪೊಲೀಸ್ ಸಿಬ್ಬಂದಿ ಪರಂಪರೆಯ ಸೀರೆಯ ಉಡುಗೆಯಲ್ಲಿ ಹಾಜರಾದರು. ಪೊಲೀಸರ ಬದಲಾದ ಉಡುಗೆಯನ್ನು ಕಂಡ ಭಕ್ತರು ಆಶ್ಚರ್ಯ ವ್ಯಕ್ತಪಡಿಸಿ ಪೊಲೀಸರು ಕೂಡ ನಮ್ಮಂತೆಯೇ ಹಬ್ಬದ ಪಾಲುಗಾರರಾಗಿದ್ದಾರೆ ಎಂದು ಹರ್ಷಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಮಹೇಶ್ ಎಂ.ಕೆ. ಭಕ್ತರಿಗೆ ಹಾಗೂ ಸಿಬ್ಬಂದಿಗಳಿಗೆ ತಿಂಡಿ ಪ್ರಸಾದ ವಿತರಿಸಿದರು. ಈ ಬಾರಿ ಪೊಲೀಸರ ಬದಲಾದ ಉಡುಪು ಭಟ್ಕಳದಲ್ಲಿ ಗಣಪತಿ ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡಿದೆ.
More Stories
“ವಿಶ್ವ ಜನಸಂಖ್ಯಾ ದಿನಾಚರಣೆ” ಮತ್ತು “ವಿಶ್ವ ಸ್ಕಿಜೋಪ್ರೇನಿಯಾ ದಿನ” ದ ಜನಜಾಗೃತಿ ಕಾರ್ಯಕ್ರಮ
ಶ್ರೀ ಭಾರತಿ ಕವಲಕ್ಕಿ ಯ ವಿದ್ಯಾರ್ಥಿಯ ಸಾಧನೆ
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆರ್ ಎನ್ ಎಸ್ ಸಾಧನೆ