

ಹೊನ್ನಾವರ : ನ್ಯೂ ಇಂಗ್ಲೀಷ್ ಸ್ಕೂಲ್ ನಲ್ಲಿ ಪ್ರತಿಷ್ಠಾಪಿಸಿದ ಗಣಪತಿಯನ್ನು ಶಾಲೆಯ ವಿದ್ಯಾರ್ಥಿಗಳು ವಾದ್ಯದೊಂದಿಗೆ ಆಗಮಿಸಿ ವಿಸರ್ಜಿಸಿದರು. ದುರ್ಗಾಕೇರಿ, ತುಳಸಿನಗರ, ಗಾಂಧಿನಗರ, ಉದ್ಯಮನಗರ, ಕೆ.ಎಚ್.ಬಿ ಕಾಲೋನಿ, ಕೆಳಗಿನಪಾಳ್ಯ, ಕಮಟೆಹಿತ್ತಲ್, ಶೆಟ್ಟಿಕೆರೆ, ಬಂದರ್, ಚಂದ್ರಾಣೆ, ತಾಲೂಕಿನಲ್ಲಿ 62 ಕಡೆಯಲ್ಲಿ ಪ್ರತಿಷ್ಠಾಪಿಸಿದ ಗಣಪತಿ ವಿರ್ಸಜನಾ ಕಾರ್ಯವು ಜರುಗಿದವು. ವಿವಿಧ ಗಣೇಶೋತ್ಸವ ಸಮಿತಿಯವರು ಗಣ ವೇಷದ ಮೂಲಕ ಆಗಮಿಸಿರುವುದು ವಿಶೇಷವಾಗಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ಯುವಕರು, ಯುವತಿಯರು, ಮಹಿಳೆಯರು ಸಹ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿರುವುದು ಕಂಡುಬ0ತು.

ಹಲವು ಮನೆಗಳ ಗಣಪತಿ ಸೇರಿದಂತೆ ಪಟ್ಟಣದ ಸಾರ್ವಜನಿಕ ಸ್ಥಳದ 12ಕ್ಕೂ ಅಧಿಕ ಗಣಪತಿಯನ್ನು ಶರಾವತಿ ನದಿಯಲ್ಲಿ ವಿಸರ್ಜನೆ ಜರುಗಿದವು. ಎಲ್ಲಡೆ ಡಿಜೆ ಸೌಂಡ್ ಅಬ್ಬರ ಜೋರಾಗಿತ್ತು. ಪಟ್ಟಣ ಪಂಚಾಯತ ವತಿಯಿಂದ ಗಣಪತಿ ವಿಸರ್ಜನೆಗೆ ಕ್ರೇನ್ ವ್ಯವಸ್ಥೆ, ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದರು. ಯಾವುದೇ ಅವಘಡ ಸಂಭವಿಸಿದAತೆ ಪೊಲೀಸ್ ಬಿಗಿ ಬಂದೊಬಸ್ತ್ ಕಲ್ಪಿಸಲಾಗಿತ್ತು.

ಪಟ್ಟಣದ ದುರ್ಗಾಕೇರಿ ಸಮಿತಿಯವರು ಸಮವಸ್ತಧಾರಿಯಾಗಿ ಆಗಮಿಸುವ ಜೊತೆ ಯುವತಿಯರ ಭಜನಾ ನೃತ್ಯ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಇತ್ತಿಚೀಗೆ ರಾಜ್ಯದೆಲ್ಲಡೆ ಸದ್ದು ಮಾಡಿದ್ದ ಬುರುಡೆ ಗ್ಯಾಂಗ್ ವೇಷಧಾರಿಯು ಮನೊರಂಜನೆ ನೀಡಿತು. ಅರಣ್ಯ ಇಲಾಖೆಯವರ ಗಣಪತಿ ವಿಸರ್ಜನಾ ಮೆರವಣೆಗೆಯಲ್ಲಿ ಡಿಎಫ್ ಓ ಯೊಗೀಶ ಜೊತೆ ಆರ್.ಎಫ್.ಓ ಸವಿತಾ ದೇವಾಡಿಗ, ಕಾರ್ತಿಕ, ಶರತ್ ಶೆಟ್ಟಿ ತಮ್ಮ ಇಲಾಖೆಯ ಸಿಬ್ಬಂದಿಯೊAದಿಗೆ ಬೆರೆತು ಡಾನ್ಸ್ ಮಾಡುವ ಮೂಲಕ ಜೋಶ್ ತುಂಬಿದರು ಇದು ಎಲ್ಲರ ಗಮನ ಸೆಳೆಯಿತು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 17ನೇ ಪಟ್ಟಾಭಿಷೇಕ ವರ್ಧಂತಿ ಉತ್ಸವ ಸೆ.3 ರಂದು
ತಾಲೂಕ ಮಟ್ಟದ ದಸರಾ ಕ್ರೀಡಾಕೂಟ
ಭಟ್ಕಳದಲ್ಲಿ ಅನಾಥ ಭಿಕ್ಷುಕನ ಸಾವು, ವಿವರ ಪತ್ತೆಗೆ ಪೊಲೀಸ್ ಮನವಿ