September 4, 2025

ಶ್ರೀ ಜ್ಞಾನೇಶ್ವರಿ ಮಹಿಳಾ ಮಂಡಳಿಯಿAದ ಯಶಸ್ವಿಯಾಗಿ ನಡೆದ ಮುದ್ದುರಾಧೆ ಮುದ್ದು ಕೃಷ್ಣ ಸ್ಪರ್ಧೆ.

ಭಟ್ಕಳ: ಶ್ರೀ ಜ್ಞಾನೇಶ್ವರಿ ಮಹಿಳಾ ಮಂಡಳಿಯಿAದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಗೌರಿ ಗಣೇಶದ ಹಬ್ಬದ ಅಂಗವಾಗಿ ಮುದ್ದುಕೃಷ್ಣ ಮದ್ದುರಾದೆ, ಭಗವದ್ಗೀತೆ ಪಠಣ ಹಾಗೂ ಮಹಿಳೆಯರಿಗಾಗಿ ಯಶೋಧಕೃಷ್ಣ ಮತ್ತು ಗಣೇಶನಿಗೆ ಇಷ್ಟವಾಗಿರುವಂತಹ ತಿಂಡಿ ತಿನಿಸುಗಳ ಸ್ಪರ್ಧೆಯು ಇಲ್ಲಿನ ಸೋನಾರಕೇರಿಯ ದೈವಜ್ಞ ಸಭಾಭಾವನದಲ್ಲಿ ಯಶಸ್ವಿಯಾಗಿ ಜರುಗಿತು.


ದೈವಜ್ಞ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸುಧಾಕರ್ ಶೇಟ್ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರೀಧರ್ ಶೇಟ್ ಶಿರಾಲಿ, ಜಯಶ್ರೀ ಆಚಾರ್ಯ, ಚಿದಾನಂದ ಪಟಗಾರ ಪಾಲ್ಗೊಂಡು ನಿರ್ಣಯವನ್ನು ನೀಡಿದರು. ಕಾರ್ಯಕ್ರಮದಲ್ಲಿ ಸುವರ್ಣಕಾರರ ಸಂಘದ ಅಧ್ಯಕ್ಷ ಸತ್ಯನಾರಾಯಣ ರತ್ನಾಕರ್ ಶೇಟ್, ದೈವಜ್ಞ ಸೊಸೈಟಿಯ ಅಧ್ಯಕ್ಷ ಬಾಲಕೃಷ್ಣ ಮಂಜುನಾಥ್ ಶೇಟ್ ಯುವಕ ಮಂಡಳಿಯ ಅಧ್ಯಕ್ಷ ಅಣ್ಣಪ್ಪ ಕೊಗ್ಗ ಶೇಟ್, ಸದಾನಂದ ರಾಯ್ಕರ್, ಸುನಿಲ್ ಶೇಟ್ ಹಾಗೂ ಜ್ಞಾನೇಶ್ವರಿ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಮಹಿಳೆಯರ ಯಶೋಧ ಕೃಷ್ಣ ಸ್ಪರ್ಧೆಯಲ್ಲಿ ಸುಷ್ಮ ವಿನಾಯಕ್ ಶೇಟ್ ಪ್ರಥಮ, ನಾಗರತ್ನ ನಿತೇಶ್ ಶೇಟ್ ದ್ವಿತೀಯ, ಅನನ್ಯ ಅನಿಲ್ ಶೇಟ್ ತೃತೀಯ ಬಹುಮಾನ ಪಡೆದರೆ,ತಿಂಡಿ ತಿನಿಸುಗಳ ಸ್ಪರ್ಧೆಯಲ್ಲಿ ಗೀತಾ ಚಂದ್ರಕಾAತ ಶೇಟ್ ಪ್ರಥಮ, ಜಯಲಕ್ಷ್ಮಿ ಮಂಜುನಾಥ್ ದ್ವಿತೀಯ,ಪ್ರಭಾ ಅಣ್ಣಪ್ಪ ಶೇಟ್ ತೃತೀಯ ಹಾಗೂ ಸುನಿತಾ ಪ್ರಶಾಂತ್ ಶೇಟ್ ಶಾಲಿನಿ ಮಧುಕರ್ ಶೇಟ್ ಇವರು ವಿಶೇಷ ಬಹುಮಾನವನ್ನು ಪಡೆದುಕೊಂಡರು. ಜ್ಞಾನೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಪರಿಮಳ ರಾಜಶೇಖರ್ ಶೇಟ್ ಸರ್ವರನ್ನು ಸ್ವಾಗತಿಸಿದರೆ ವಿನಯಾ ಸುನಿಲ್ ಶೆಟ್ ವಂದಿಸಿದರು. ಶಿಕ್ಷಕಿ ಸವಿತಾ ಶೇಟ್ ಹಾಗೂ ರಚನಾ ರಾಯ್ಕರ್ ಕಾರ್ಯಕ್ರಮವನ್ನು ನಿರ್ವಹಿಸಿದರು.

About The Author

error: Content is protected !!