September 5, 2025

ವಿಶ್ವಹಿಂದೂ ಪರಿಷತ್ ಗಣಪತಿ ಶರಾವತಿ ನದಿಯಲ್ಲಿ ವಿರ್ಸಜನೆ

ಹೊನ್ನಾವರ: ತಾಲೂಕಿನ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವ ಎಂದು ಪ್ರಸಿದ್ದತೆ ಪಡೆದಿರುವ ಹೊನ್ನಾವರ ಪಟ್ಟಣದ ಟಪ್ಪರ್ ಹಾಲ್‌ನಲ್ಲಿನ ವಿಶ್ವಹಿಂದೂ ಪರಿಷತ್ ಗಣಪತಿ ಸೇರಿದಂತೆ ಕೆಬಿಇ , ಹೈವೆ ಸರ್ಕಲ್, ತಾರಿಬಾಗಿಲ, ಕಮಟೆಹಿತ್ತಲ್, ಮಾಸ್ತಿಕಟ್ಟೆಯಲ್ಲಿ ಪ್ರತಿಷ್ಟಾಪಿಸಿದ ಗಣಪತಿಯನ್ನು ಭವ್ಯ ಶೋಭಯಾತ್ರೆ ಮೂಲಕ ಸಾಗಿ ಶರಾವತಿ ನದಿಯಲ್ಲಿ ವಿರ್ಸಜಿಸಲಾಯಿತು.

 ಹೊನ್ನಾವರ ತಾಲೂಕಿನಲ್ಲೆ ಅತ್ಯಂತ ಅದ್ಧೂರಿ ಮೆರವಣಿಗೆ ಎಂದು ಕರೆಸಿಕೊಳ್ಳುವ ವಿಶ್ವಹಿಂದೂ ಪರಿಷತ್ ಗಣಪತಿಯ ಭವ್ಯ ಶೋಭಾಯಾತ್ರೆಯಲ್ಲಿ ಆಕರ್ಷಕ ಸ್ತಬ್ದಚಿತ್ರ, ವಿವಿಧ ನೃತ್ಯ ಪ್ರಕಾರ ಹಾಗೂ ಭರ್ಜರಿ ಡಿಜೆ ಕುಣಿತವು ಈ ಬಾರಿಯ ವಿಶೇಷವಾಗಿತ್ತು.  ಪಟ್ಟಣದ ಬೀದಿಗಳಲ್ಲಿ ಮೆರವಣೆಗೆ ಸಾಗುವಾಗ  ಕೇಸರಿಯ ಸಮವಸ್ತ್ರ ತೊಟ್ಟ ಸಾವಿರಾರು ಹಿಂದೂ ಕಾರ್ಯಕರ್ತರು, ಕೇಸರಿ ಬಾವುಟ ಸಮೇತ ಗಣಪತಿ ಬಪ್ಪಾ ಮೋರಯಾ ಎಂದು ಘೋಷಣೆಯ ಜೋತೆ ಡಿಜೆ ಹಾಡಿಗೆ ಮಳೆಯನ್ನು ಲೆಕ್ಕಿಸದೆ ಕುಣಿದು ಕುಪ್ಪಳಿಸಿದರು. 

ಪಟ್ಟಣದ ಬೀದಿಗಳಲ್ಲಿ ಸಾಗುವಾಗ ಅಪಾರ ಪ್ರಮಾಣದಲ್ಲಿ ಮಹಿಳೆಯರೂ ಪಾಲ್ಗೊಂಡು ಅವರೊಂದಿಗೆ ಹೆಜ್ಜೆಹಾಕಿರುವುದು ಇನ್ನೊಂದು ವಿಶೇಷವಾಗಿತ್ತು.  ಯುವಕರಂತೂ ಭಗವಾದ್ವಜವನ್ನು ತಿರುಗಿಸುತ್ತಾ ಜೈ ಶ್ರೀರಾಮ ಘೋಷಣೆಯೊಂದಿಗೆ ಕುಣಿದು ಕುಪ್ಪಳಿಸಿದರು. ಶರಾವತಿ ವೃತ್ತದಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಸಾಗಿ ಶರಾವತಿ ನದಿಯಲ್ಲಿ ಮಂಗಲಮೂರ್ತಿಯನ್ನು ವಿಸರ್ಜಿಸಲಾಯಿತು. ಹೆದ್ದಾರಿಯಲ್ಲಿ ಸಾಗುವಾಗ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಳಿಸಿದರು. ನೂರಾರು ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳು ಶಾಂತಿ ಸುವವ್ಯವಸ್ತೆಗಾಗಿ ಬಿಗಿ ಪೋಲಿಸ್ ಬಂದವಸ್ತ ಕೈಗೊಂಡಿದ್ದರು

About The Author

error: Content is protected !!