
ಹೊನ್ನಾವರ: ಉತ್ತರಕನ್ನಡ ಬ್ರಹ್ಮಶ್ರೀ ನಾರಾಯಣ ಗುರುಗಳ ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಸ. 7ರಂದು ಮಧ್ಯಾಹ್ನ 3 ಗಂಟೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ನಾರಾಯಣ ಗುರುಗಳ ತತ್ವದ ಬಗ್ಗೆ ಉಪನ್ಯಾಸ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ನಾಮಧಾರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷರು ನ್ಯಾಯವಾಧಿ ವಿಕ್ರಂ ನಾಯ್ಕ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಸಣ್ಣ ಸಣ್ಣ ಸಮಾಜದವರೆಲ್ಲರೂ ಸೇರಿ ತಾಲೂಕಿನಲ್ಲಿ ನಾರಾಯಣಗುರು ಜಯಂತಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಸಮಾಜದ ಉನ್ನತಿಗಾಗಿ ನಾರಾಯಣ ಗುರುಗಳು ನೀಡಿದ ಕೊಡುಗೆಯನ್ನು ಮತ್ತು ಅವರ ಸಾಧನೆಯನ್ನುಮುಂದಿನ ತಲೆಮಾರಿನವರಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಕ್ಷೇತ್ರ ಸಿಗಂಧೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿಗಳಾದ ಡಾ.ರಾಮಪ್ಪನವರು ನೇರವೇರಿಸಲಿದ್ದು, ನಾಮಧಾರಿ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ವಿಕ್ರಮ್ ಆರ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ನೀಲಗೋಡ ಶ್ರೀ ಯಕ್ಷಚೌಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಆಗಮಿಸಲಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಬಗ್ಗೆ ಖ್ಯಾತ ವಕೀಲರಾದ ನಾಗರಾಜ ನಾಯಕ ಉಪನ್ಯಾಸ ನೀಡಲಿದ್ದಾರೆ.
ವೇದಿಕೆಯಲ್ಲಿ ಭಟ್ಕಳ ವೆಂಕ್ರಟಮಣ ದೇವಸ್ಥಾನ ಅಧ್ಯಕ್ಷರಾದ ಅರುಣ ನಾಯ್ಕ, ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಶಿರಾಲಿ ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ, ಭಟ್ಕಳ ನಾಮಧಾರಿ ಸೇವಾ ಸಮಿತಿ ಅಧ್ಯಕ್ಷ ಭವಾನಿ ಶಂಕರ್, ಮಂಗಳೂರು ವಿಶ್ವವಿದ್ಯಾಲಯದ ಪ್ರಾಚಾರ್ಯ ಡಾ. ಗಣಪತಿ ಎಸ್ ಗೌಡ, ಬೆಂಗಳೂರು ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಬಾಬು ಗಿರಿಯ ಗೌಡ, ನಿವೃತ್ತ ಬಿಇಓ ದೇವಿದಾಸ ಮೊಗೇರ, ಮಂಕಿ ಗೋಲ್ ಇಂಟರ್ ನ್ಯಾಷನಲ್ ಸಂಸ್ಥೆ ಅಧ್ಯಕ್ಷ ಅಣ್ಣಪ್ಪ ನಾಯ್ಕ, ನಾರಾಯಣಗುರು ಸಮಿತಿ ಭಟ್ಕಳ ಸಂಚಾಲಕ ಸತೀಶ ನಾಯ್ಕ, ಭಟ್ಕಳ ತಾಲೂಕ ದೇವಾಡಿಗ ಸಂಘಟನೆ ಕಾರ್ಯದರ್ಶಿ ಸುರೇಶ ದೇವಾಡಿಗ, ನಾಮಧಾರಿ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷ ಅಜಿತ್ ನಾಯ್ಕ, ಬೆಳಕೊಂಡ ಮೀನುಗಾರ ಸೊಸೈಟಿ ಅಧ್ಯಕ್ಷ ಉಮೇಶ ಮೇಸ್ತ, ಪರಿಶಿಷ್ಟ ಜಾತಿ ಪಂಗಡದ ತಾಲೂಕ ಅಧ್ಯಕ್ಷ ನಾರಾಯಣ ಶಿವ ಮುಕ್ರಿ, ಬಿ.ಎನ್.ಎಸ್ ಡಿ.ಪಿ ಜಿಲ್ಲಾಧ್ಯಕ್ಷ ದಿವಾಕರ ನಾಯ್ಕ, ತಾಲೂಕ ಅಧ್ಯಕ್ಷ ಧನಂಜಯ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿರುವರು.
ಪತ್ರಿಕಾಗೊಷ್ಠಿಯಲ್ಲಿ ಎಂ.ಜಿ.ನಾಯ್ಕ, ಉಮೇಶ ಮೇಸ್ತ, ಮಂಜುನಾಥ ನಾಯ್ಕ, ಅಜಿತ್ ನಾಯ್ಕ, ಶ್ರೀಪಾದ ನಾಯ್ಕ, ಗಣಪತಿ ಮೇಸ್ತ, ಧನಂಜಯ ನಾಯ್ಕ, ನಾಗೇಂದ್ರ ನಾಯ್ಕ ಚಿತ್ತಾರ, ಹರಿಶ್ಚಂದ್ರ ನಾಯ್ಕ, ಶ್ರೀನಿವಾಸ ನಾಯ್ಕ, ವಿನಾಯಕ ನಾಯ್ಕ ಮತ್ತಿತರಿದ್ದರು.
ವರದಿ: ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
“ವಿಶ್ವ ಜನಸಂಖ್ಯಾ ದಿನಾಚರಣೆ” ಮತ್ತು “ವಿಶ್ವ ಸ್ಕಿಜೋಪ್ರೇನಿಯಾ ದಿನ” ದ ಜನಜಾಗೃತಿ ಕಾರ್ಯಕ್ರಮ
ಶ್ರೀ ಭಾರತಿ ಕವಲಕ್ಕಿ ಯ ವಿದ್ಯಾರ್ಥಿಯ ಸಾಧನೆ
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆರ್ ಎನ್ ಎಸ್ ಸಾಧನೆ