September 10, 2025

ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ರವರಿಂದ ಬೆಳೆಹಾನಿ ಸಮೀಕ್ಷೆ

ಹೊನ್ನಾವರ ; ಬಿಜೆಪಿ ಉತ್ತರ ಕನ್ನಡ ರೈತ ಮೋರ್ಚಾ ನೇತ್ರತ್ವದಲ್ಲಿ ಹೊನ್ನಾವರ ತಾಲೂಕಿನಲ್ಲಿ ಅತಿವ್ರಷ್ಟಿ ಮತ್ತು ನೆರೆಹಾವಳಿಯಿಂದ ಉಂಟಾದ ಬೆಳೆಹಾನಿಯ ಬಗ್ಗೆ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಡಾ.ನವೀನ್ ರವರು ಸಮೀಕ್ಷೆ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್ ಎಸ್ ಹೆಗಡೆಯವರು,ಮಾಜಿ ಸಚಿವರಾದ ಶಿವಾನಂದ ನಾಯ್ಕ ಮತ್ತು ಮಾಜಿ ಶಾಸಕರಾದ ಸುನಿಲ್ ನಾಯ್ಕರವರು ನೇತ್ರತ್ವ ವಹಿಸಿದ್ದರು.
ನಂತರ ತಹಶಿಲ್ದಾರರೊಂದಿಗೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದು, ಈ ವರ್ಷ ರೈತರು ಅತೀ ಹೆಚ್ಚು ಹಾನಿಗೊಳಗಾಗಿದ್ದು ತಕ್ಷಣವೇ ಪ್ರತಿಯೊಬ್ಬ ರೈತನಿಗೂ ಯೋಗ್ಯ ರೀತಿಯಲ್ಲಿ ಪರಿಹಾರ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿ ಮನವಿ ನೀಡಿದರು.
ತಾಲೂಕಿನ ಮೂಡ್ಕಣಿ ಹಾಗು ಸುತ್ತಮುತ್ತಲಿನ ಅಡಿಕೆ ತೋಟಗಳ ವೀಕ್ಷಣೆ ಮಾಡಿ,ರೈತರಿಗೆ ಅಡಿಕೆ ಬೆಳೆಗೆ ಕೊಳೆ ರೋಗದಿಂದ ಈ ವರ್ಷ ಅತೀ ಹಾನಿಯಾಗಿದ್ದು ಸರಕಾರ ವಿಶೇಷ ಅನುದಾನ ನೀಡಿ ರೈತರನ್ನು ರಕ್ಷಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ತಾಲೂಕಾ ಅಧ್ಯಕ್ಷ ಮಂಜುನಾಥ ನಾಯ್ಕ,ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ,ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ,ಪ್ರಧಾನ ಕಾರ್ಯದರ್ಶಿ ಮೂರ್ತಿ ಹೆಗಡೆ,ನಿಕಟಪೂರ್ವ ತಾಲೂಕಾಧ್ಯಕ್ಷ ರಾಜೇಶ ಬಂಡಾರಿ,ರೈತ ಮೋರ್ಚಾ ತಾಲೂಕಾ ಅಧ್ಯಕ್ಷ ಗಜಾನನ ಹೆಗಡೆ, ಭಟ್ಕಳ ತಾಲೂಕಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ,ತಾಲೂಕಾ ಪ್ರಧಾನ ಕಾರ್ಯದರ್ಶಿ ಗಣಪತಿ ಗೌಡ ಚಿತ್ತಾರ,ಯೋಗೇಶ ಮೇಸ್ತ ಹಾಗೂ ಬಾಲು ಗೌಡ,ವಿನಾಯಕ ನಾಯ್ಕ,ಶ್ರೀಕಾಂತ ನಾಯ್ಕ,ಜಯಂತ ಪೈ,ಸುರೇಶ ಹೊನ್ನಾವರ,ಉಲ್ಲಾಸ ನಾಯ್ಕ,ಜಗದೀಶ ನಾಯ್ಕ,ಕ್ರಷ್ಣ ನಾಯ್ಕ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ವರದಿ : ವಿಶ್ವನಾಥ ಸಾಲಕೋಡ್ ಹೊನ್ನಾವರ

About The Author

error: Content is protected !!