March 4, 2026

ಬೈಂದೂರು : ಅನಿರ್ಧಿಷ್ಟಾವಧಿ ಧರಣಿ 104ನೇ ದಿನಕ್ಕೆ .      ಗೆರಟೆ ಹಿಡಿದು ವಿಶೇಷ ಪ್ರತಿಭಟನೆ

ಬೈಂದೂರು : ಈಗಿರುವ ಪಟ್ಟಣ ಪಂಚಾಯತಿನಿಂದ ಗ್ರಾಮೀಣ ಪ್ರದೇಶಗಳನ್ನು ಬೇರ್ಪಡಿಸಿ ಗ್ರಾಮ ಪಂಚಾಯತಿ ರಚನೆ ಮಾಡಬೇಕೆಂದು ಆಗ್ರಹಿಸಿ ರೈತ ಸಂಘ ಬೈಂದೂರು ಇದರ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ 104ನೇ ದಿನಕ್ಕೆ ಕಾಲಿಟ್ಟಿದ್ದು ಶುಕ್ರವಾರ ಸಂಜೆ ಬೈಂದೂರು ಮಿನಿ ವಿಧಾನ ಸೌಧ ಮುಂದೆ ಗೆರಟೆ ಹಿಡಿದು ವಿಶೇಷ ಪ್ರತಿಭಟನೆ ನಡೆಯಿತು.

ರೈತ ಸಂಘ ಬೈಂದೂರು ಇದರ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ನಾವು ಕಳೆದ 103 ದಿನಗಳಿಂದ ಅನಿರ್ಧಿಷ್ಟಾವಧಿ ಧರಣಿ ಇಂದು 104 ನಡೆಯುತ್ತಿದೆ. ನಮ್ಮ ಧರಣಿ ವೇದಿಕೆ ಉಡುಪಿ ಜಿಲ್ಲಾಧಿಕಾರಿಯವರು ಬಂದಿಲ್ಲ, ನಮಗೆ ನ್ಯಾಯ ನೀಡುತ್ತಿಲ್ಲ, ಇದೊಂದು ನಮ್ಮ ಗ್ರಾಮೀಣ ಭಾಗದ ರೈತರಿಗೆ ಅನ್ಯಾಯವಾಗಿದೆ. ಬೆಂಗಳೂರು ಹಾಗೂ ಬೆಳಗಾವಿ ಅಧಿವೇಶನದಲ್ಲಿ ಸಚಿವರು, ಶಾಸಕರು, ಮಾಜಿ ಶಾಸಕರು ಈ ಪ್ರತಿಭಟನೆ ಬಗ್ಗೆ ಪ್ರಸ್ತಾವನೆ ಮಾಡಿದರು, ಜಿಲ್ಲಾಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಇದು ರೈತರಿಗೆ ದೊಡ್ದ ಮಟ್ಟದ ಅನ್ಯಾಯ. ಜನವರಿ 14 ರಿಂದ 20ರ ವರೆಗೆ ನಮಗೆ ನ್ಯಾಯ ಸಿಕ್ಕಿಲ್ಲ ಅಂದ್ರೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಅರುಣ್ ಕುಮಾರ್ ಶಿರೂರು, ವೀರಭದ್ರ ಗಾಣಿಗ, ಕೇಶವ ಅಂತ್ರರ್, ಪದ್ಮಕ್ಷ ಗೊಳಿಬೇರು, ಬೈಂದೂರು ಬ್ಲಾಕ್ಕಾಂ ಗ್ರೆಸ್ ಮಹಿಳಾ ಸಮಿತಿ ಅಧ್ಯಕ್ಷೆ ಸೂರ್ಯಕಾಂತಿ, ಹಾಗೂ ಗ್ರಾಮೀಣ ಭಾಗದ ರೈತರ ವಿಶೇಷ ಪ್ರತಿಭಟನೆಯಲ್ಲಿ ಇದ್ದರು.

ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು

About The Author

error: Content is protected !!