January 14, 2026

“ಛಾತ್ರಮುಖಿ” – ಸಂಸ್ಕೃತ ಅಭ್ಯಾಸ ಪುಸ್ತಕದ ಲೋಕಾರ್ಪಣೆ

ಕುಮಟಾ ಡಯಟಿನಿಂದ ಬರ್ಗಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಟ್ಟದ ಸಂಸ್ಕೃತ ಕಾರ್ಯಾಧಾರ

ಕುಮಟಾ : ಇಲ್ಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜ. 12 ರ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯಂದು ಪೂರ್ವ ಅನ್ನ 10 ಗಂಟೆಗೆ ” ಉತ್ತರ ಕನ್ನಡ ಜಿಲ್ಲಾ ಮಟ್ಟದ ಸಂಸ್ಕೃತ ವಿಷಯ ಶಿಕ್ಷಕರ ಕಾರ್ಯಾಗಾರ”ವನ್ನು ಹಮ್ಮಿಕೊಳ್ಳಲಾಗಿದೆ.


ಇದೇ ಸಂದರ್ಭದಲ್ಲಿ ಹೆಸರಾಂತ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿಯವರ ಜೊತೆಯಲ್ಲಿ ಐ ವಿ ಭಟ್ ಮತ್ತು ಗೀತಾ ಈಶ್ವರ ಭಟ್ಟರವರು ರಚಿಸಿರುವ ಎಸ್. ಎಸ್.ಎಲ್.ಸಿ.ಯಲ್ಲಿ ತೃತೀಯ ಭಾಷೆಯಾಗಿ ಸಂಸ್ಕೃತವನ್ನು ಅಬ್ಬೆಸಿಸುತ್ತಿರುವ ವಿದ್ಯಾರ್ಥಿಗಳಿಗೆ ಉಪಯುಕ್ತವಾದ “ಛಾತ್ರಮುಖಿ” ಶೀರ್ಷಿಕೆಯಲ್ಲಿನ ಅಭ್ಯಾಸ ಪುಸ್ತಕವು ಬೆಳಕುಗೊಳ್ಳಲಿದೆ.


ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿನ ಪ್ರೌಢ ಶಾಲೆಗಳಲ್ಲಿ ತೃತೀಯ ಭಾಷೆ ಸಂಸ್ಕೃತ ವಿಷಯವನ್ನು ಬೋಧಿಸುತ್ತಿರುವ ಎಲ್ಲ ಸಂಸ್ಕೃತ ಶಿಕ್ಷಕರು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಪ್ರಾಚಾರ್ಯರಾದ ಎನ್. ಆರ್. ಹೆಗಡೆಯವರು ಕೋರಿದ್ದಾರೆ.

About The Author

error: Content is protected !!