ಹೊನ್ನಾವರ : ಶ್ರೀನಿಧಿ ಪೌಂಡೇಷನ್ ಕರ್ನಾಟಕ, ಪ್ರತಿಫಲ ಪೌಂಡೇಷನ್ ಧಾರವಾಡ ಇವರು ನೀಡುವ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿಗೆ ತಾಲೂಕಿನ ನಾಜಗಾರಿನ ಮಂಜುನಾಥ ಗೌಡ ಇವರಿಗೆ ಲಭಿಸಿದೆ.
ಕನ್ನಡ, ನಾಡು, ನುಡಿ, ನೆಲ, ಜಲ, ಭಾಷೆ, ಸಂಸ್ಕೃತಿ, ಸಂಗೀತ, ಸಾಹಿತ್ಯ, ಕೃಷಿ, ಮಾಧ್ಯಮ, ಶಿಕ್ಷಣ, ಕಲೆ ಮುಂತಾದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದರಿಗೆ ಪ್ರಶಸ್ತಿ ನೀಡಲಾಗುತಿದ್ದು, ಸಮಾಜ ಸೇವಾ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಗಣನಿಯ ಸೇವೆ ಮಾಡಿರುವ ಮಂಜುನಾಥ ಗೌಡರಿಗೆ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಇದೆ ಬರುವ ಫೆ. 1 ರಂದು ಕರ್ನಾಟಕ ವಾಣಿಜ್ಯೋಧಮ ಸಂಸ್ಥೆ ಹುಬ್ಬಳ್ಳಿಯಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷರಾಗಿರುವ ಇವರು ಎಲ್ಲಿ ಏನೇ ಅನ್ಯಾಯ ನಡೆದರು ಗಟ್ಟಿ ದ್ವನಿ ಎತ್ತುವುದರ ಮೂಲಕ ತಾಲೂಕಿನ ಗಟ್ಟಿ ದ್ವನಿಯಾಗಿ ಗುರುತಿಸಿಕೊಂಡಿದ್ದಾರೆ. ಗ್ರಾಮಮಟ್ಟದಿಂದ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ವರೆಗೂ ಹೋರಾಟದಲ್ಲಿ ಭಾಗವಹಿಸಿದ ಇವರು ಚಂದನ ಸ್ಪೋರ್ಟ್ಸ್ ಕ್ಲಬ್ ನಾಜಗಾರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಇನ್ನಿತರ ಸಂಘ ಸಂಸ್ಥೆಯ ಸದಸ್ಯರಾಗಿ ಅನೇಕ ಜನರ ಕಾರ್ಯಕ್ರಮ ಆಯೋಜನೆ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಅನಾರೋಗ್ಯ ಪೀಡಿತರಿಗೆ ಸಹಾಯ, ರಕ್ತದಾನ, ಕೋವಿಡ್ ನಲ್ಲಿ ತುರ್ತು ಸಮಯದಲ್ಲಿ ಸಹಾಯ, ದಿನಸಿ ಕಿಟ್ ವಿತರಣೆ, ಸರಕಾರಿ ಕಚೇರಿಯಲ್ಲಿ ಆಗಬೇಕಿರುವ ಕೆಲಸವನ್ನು ಮುಂದೆನಿಂತು ಮಾಡಿಕೊಡುತ್ತಿದ್ದಾರೆ. ತಾಲೂಕಿನ ಕನ್ನಡ ವಿರೋಧಿ ಚಟುವಟಿಕೆ ಕಂಡು ಬಂದಲ್ಲಿ ಮುಲಾಜಿಲ್ಲದೆ ಆಕ್ಷೇಪ ವ್ಯಕ್ತ ಪಡಿಸಿ, ಸ್ಥಳದಲ್ಲೆ ಹೋರಾಟಕ್ಕೆ ಇಳಿಯುತ್ತಾರೆ. ಕನ್ನಡ ನಾಮಫಲಕ, ಕನ್ನಡ ಭಾಷೆ ಬಳಸುವಲ್ಲಿ ವ್ಯತ್ಯಾಸ ಕಂಡು ಬಂದರೆ ಇವರ ಹೋರಾಟದ ಬಿಸಿ ಅಧಿಕಾರಿಗಳಿಗೆ ತಲುಪುವ ತನಕ ವಿರಾಮಹಿಸುವುದಿಲ್ಲ.
ಇವರ ಸಾಮಾಜಿಕ ಕಳಕಳಿ ಗುರುತಿಸಿ ಸ್ವಾಮಿ ವಿವೇಕಾನಂದ ಪ್ರಶಸ್ತಿ, ಗಣರಾಜ್ಯೋತ್ಸದಲ್ಲಿ ಸನ್ಮಾನ ಸೇರಿ ಅನೇಕ ಸಂಘ ಸಂಸ್ಥೆಯವರು ಗುರುತಿಸಿ ಸನ್ಮಾನ ಮಾಡಿ ಗೌರವಿಸಿದ್ದಾರೆ. ಇವರ ಸಾಮಾಜಿಕ ಹೋರಾಟಕ್ಕೆ, ಸಾಮಾಜಿಕ ಕಳಕಳಿಕೆ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ಅರಸಿಕೊಂಡು ಬಂದಿದೆ.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ