ಭಟ್ಕಳ : ಶ್ರೀ ತಿಮ್ಮಯ್ಯ ದಾಸರಿಂದ ಸಂಸ್ಥಾಪಿಲ್ಪಟ್ಟ ಶ್ರೀ ವೀರಮಾತಾ ಪದ್ಮಾವತಿ ದೇವಿಯ ಪಲ್ಲಕ್ಕಿ ಉತ್ಸವ ಇದೇ ಬರುವ ಜನವರಿ 24ನೇ ತಾರೀಖಿನ ಶನಿವಾರ ನಡೆಯಲಿದೆ ಮುಂಜಾನೆ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಮಧ್ಯಾಹ್ನ 12:30 ಕ್ಕೆ ಮಹಾಪೂಜೆ, ಒಂದು ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4:30ಕ್ಕೆ ಶ್ರೀದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ದೇವಾಲಯದ ಹೊರಟು ರಘುನಾಥರಸ್ತೆಯ ಮಾರ್ಗವಾಗಿ ಪುಷ್ಪಾoಜಲಿ ಚಿತ್ರಮಂದಿರದವರೆಗೆ ತಲುಪಿ ಅಲ್ಲಿಂದ ಹಿಂದಿರುಗಿ ಮಣಕುಳಿ ಮೂಲಕ ಸಾಗಿ ಬಂದು ವಡೆಯರ ಮಠ ರಸ್ತೆ ಮೂಲಕ ಹೂವಿನ ಚೌಕ,ಮಾರಿಕಟ್ಟೆ ಮಾರ್ಗವಾಗಿ ಸಾಗಿ ಬಂದು ಜಟ್ಟಪ್ಪ ನಾಯಕ ಬಸದಿ ಎದುರಿನ ರಸ್ತೆಯ ಮೂಲಕ ಆಸರಕೇರಿ ಪ್ರವೇಶಿಸಿ ನಿಚ್ಚಲಮಕ್ಕೆ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆಯನ್ನು ಸ್ವೀಕರಿಸಿ ಸೋನಾರ ಕೇರಿಯ ಮಾರ್ಗವಾಗಿ ಸಾಗಿ ಶಹರ ಪೊಲೀಸ್ ಠಾಣೆಯನ್ನು ತಲುಪಿ ಅಲ್ಲಿಂದ ಮುಖ್ಯ ರಸ್ತೆಯ ಮೂಲಕ ರಾಜಾಂಗಣ ತಲುಪಿ ಕಳಿ ಹನುಮಂತ ದೇವಸ್ಥಾನದ ಮೂಲಕ ಸಾಗಿ ಬಂದು ದೇವಾಲಯಕ್ಕೆ ಹಿಂದಿರುಗಲಿದೆ. ಈ ಉತ್ಸವ ಕಾರ್ಯಕ್ರಮಕ್ಕೆ ಎಲ್ಲ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ದೇವಾಲಯದ ಧರ್ಮದರ್ಶಿಗಳಾದ ಶ್ರೀಮತಿ ಪದ್ಮಾವತಿ ರಾಮ ನಾಯ್ಕ ಕೋರಿದ್ದಾರೆ.

More Stories
ಗಾಂಜಾ ಸೇವನೆ ದೃಢ; ಮೂವರು ಯುವಕರ ವಿರುದ್ಧ ಪೊಲೀಸ್ ಪ್ರಕರಣ ದಾಖಲು
ಕಾಲೇಜು ಶುಲ್ಕದ ಹಣ ವಾಪಸ್ ಸಿಗದೆ ಮನನೊಂದ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ
ಯುಜಿಡಿ ಸೋರಿಕೆಯಿಂದ 50ಕ್ಕೂ ಹೆಚ್ಚು ಬಾವಿ ನೀರು ಕಲುಷಿತ; ಜೂನ್ 15ಕ್ಕೆ ಹೆದ್ದಾರಿ ತಡೆ ಎಚ್ಚರಿಕೆ