March 2, 2026

ಬೆಂಕಿಗೆ ತಗುಲಿ ಇರ್ವರು ಮೃತಪಟ್ಟ ಪ್ರಕರಣದ ತನಿಖೆ ನಡೆಸಿ ಪ್ರಕರಣ ಭೇದಿಸಿದ ಹೊನ್ನಾವರ ಪೊಲೀಸರು

ಹೊನ್ನಾವರ : ಸಿದ್ದಾಪುರ ಮೂಲದ ಸಹೋದರರಿರ್ವರು ಚಲಾಯಿಸುತ್ತಿದ್ದ ವಾಹನ ಬೆಂಕಿಗೆ ತಗುಲಿ ಇರ್ವರು ಮೃತಪಟ್ಟ ಪ್ರಕರಣದ ತನಿಖೆ ನಡೆಸಿ ಪ್ರಕರಣ ಭೇದಿಸಿದ ಹೊನ್ನಾವರ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶ್ವಸಿಯಾಗಿದ್ದಾರೆ.


ಸಿದ್ದಾಪುರದಿಂದ ಗೇರುಸೊಪ್ಪಾ ಮಾರ್ಗವಾಗಿ ಹೊನ್ನಾವರ ಬರುವ ಮೊದಲು ವಾಹನ ಅಪಘಾತ ನಡೆದು, ಸಹೋದರಿರ್ವರು ಕಾರಿನಲ್ಲಿ ಸುಟ್ಟು ಕರಕಲಾಗಿದ್ದ ಘಟನೆ ವರದಿಯಾಗಿತ್ತು. ಸಿದ್ದಾಪುರದ ಪ್ರಮೋದ ನಾಯ್ಕ ಎಂಬ ವ್ಯಕ್ತಿ ಸಹೋದರರನ್ನು ಕೊಲೆ ಮಾಡಿದ್ದಾನೆ ಎಂದು ಮೃತ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಾರಂಭದಲ್ಲಿ ಮೃತ ದೇಹದ ಗುರುತು ಪತ್ತೆ, ಮರಣೊತ್ತರ ಪರೀಕ್ಷೆ ವರದಿ ಜೊತೆ ಇನ್ನಿತರ ಎಲ್ಲಾ ಪರಿಶೀಲನೆ ನಂತರ ಅನುಮಾನ ಎಂದು ಹೆಸರಿಸಲಾದವರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.


ಆರೋಪಿಗಳ ಪತ್ತೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಶಿವಮೊಗ್ಗದಲ್ಲಿ ಅಡಗಿ ಕುಳಿತಿದ್ದ ಪ್ರಮೋದ ನಾಯ್ಕ ಮತ್ತು ಅವನ ಜೊತೆ ಇರುವ ಇರ್ವರನ್ನು ವಶಕ್ಕೆ ಪಡೆದ ಬಳಿಕ ಆರೋಪಿತರು ತಪ್ಪೊಪ್ಪಿಕೊಂಡಿದ್ದಾರೆ.


ಹಣಕಾಸಿನ ವಿಚಾರದಲ್ಲಿ ಮಂಜುನಾಥ ಹಸಗಲರ್ ಹಾಗೂ ಚಂದ್ರಶೇಖರ ಹಸ್ಲರ್ ಅವರೊಂದಿಗೆ ಸ್ನೇಹಿತನಾಗಿದ್ದ ಚಂದ್ರಘಟ್ಟಗಿ ಗ್ರಾಮದ ಪ್ರಮೋದ ಗಣಪತಿ ನಾಯ್ಕ ಇರ್ವರು ಸಹೋದರರನ್ನು ಕರೆದುಕೊಂಡು ಮದ್ಯದಲ್ಲಿ ಕ್ರಿಮಿನಾಶಕ ನೀಡಿ ಕಾರಿನಲ್ಲಿ ಕುಡಿಸಿ ಸಾಯಿಸಿ ನಂತರ ಶವಗಳನ್ನು ಆರೋಪಿ ಪ್ರಮೋದನ ಸ್ನೇಹಿತರಾದ ಹೇಮಂತ ಗಣಪತಿ ನಾಯ್ಕ ಸನ್ಯ ನಾಯ್ಕ, ಇವರ ಸಹಾಯ ಪಡೆದು ಮಾವಿನಗುಂಡಿಯ ಬಳಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಖರೀದಿಸಿ ಮೃತರ ಕಾರನ್ನು ಹೊನ್ನಾವರ ತಾಲೂಕಿನ ಸುಳಿಮುರ್ಕಿವರೆಗೆ ಆರೋಪಿ ಪ್ರಮೋದ ಓಡಿಸಿಕೊಂಡು ಬಂದು ಕಾರನ್ನು ಹೇಮಂತ ನಾಯ್ಕ ಮತ್ತು ಸನ್ಯ ನಾಯ್ಕ ಇವರ ಸಹಾಯದಿಂದ ರಸ್ತೆ ಪಕ್ಕ ಹಳ್ಳಕ್ಕೆ ತಳ್ಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹೋಗಿದ್ದು ಬೆಂಕಿ ಹಚ್ಚುವಾಗ ಆರೋಪಿಗೂ ಸುಟ್ಟ ಗಾಯವಾಗಿರುತ್ತದೆ. ಮೂವರನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.
ಹಿರಿಯ ಅಧಿಅರಿಗಳಮಾರ್ಗದರ್ಶನದ ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಪಿ ಐ ಸಿದ್ದರಾಮೇಶ್ವರ, ಪಿಎಸ್ಐ ಮಂಜುನಾಥ್ , ಎಎಸ್ ಐ ಮಾರುತಿ ನಾಯ್ಕ, ಎಚ್ ಸಿ ಹಮೀದ್, ರಮಾನಂದ ನಾಯ್ಕ, ಗಜಾನನ ನಾಯ್ಕ, ಪ್ರಶಾಂತ ನಾಯ್ಕ, ರವಿ ನಾಯ್ಕ,ವಿಠ್ಠಲ್ ಗೌಡ , ಮನೋಜ್ ನಾಯ್ಕ, ಶಿವಾನಂದ್ ಅಂಗಡಿ, ಕಿರಣ ವಾಹನ ಚಾಲಕರಾದ ಚಂದ್ರಶೇಖರ್ ನಾಯ್ಕ ಸಂತೋಷ್ ನಾಯ್ಕ ಕಾರ್ಯಚರಣೆಯಲ್ಲಿದ್ದರು.

About The Author

error: Content is protected !!