ಭಟ್ಕಳ: ನಗರದ ಮುಗಳಿಕೋಣೆ ಶ್ರೀ ಗೋಪಾಲಕೃಷ್ಣ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವ ಜ.೨೭ ಹಾಗೂ ೨೮ರಂದು ಜರುಗಲಿರುವುದು ಎಂದು ಮುಗಳಿಕೋಣೆ ಶ್ರೀ ಗೋಪಾಲಕೃಷ್ಣ, ಮಣ್ಕುಳಿ ಶ್ರೀ ಲಕ್ಷ್ಮೀನಾರಾಯಣ ಹಾಗೂ ಶ್ರೀ ಹನುಮಂತ ದೇವಸ್ಥಾನ ಸೇವಾ ಟ್ರಸ್ಟಿನ ಅಧ್ಯಕ್ಷ ನಾರಾಯಣ ಎಂ. ಶೆಟ್ಟಿ ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಜ.೨೭ರಂದು ಬೆಳಿಗ್ಗೆ ಗಣೇಶ ಪೂಜಾ, ಪುಣ್ಯಾಹ, ನಾಂದಿ, ಕೌತುಕ ಪೂಜಾ, ಋತ್ವಿಕ್ ವರ್ಣನೆ, ಅಷ್ಠಮೂರ್ತಿ ಪ್ರಾರ್ಥನೆ, ಧ್ವಜಶುದ್ಧಿ, ಧ್ವಜಾರೋಹಣ, ಗಣಹೋಮ, ಮಹಾಪೂಜೆ ಹಾಗೂ ಸಂಜೆ ರಾಕ್ಷೆÆÃಘ್ನ ಹೋಮ, ವಾಸ್ತು ಹೋಮ, ಕುಂಡ ಮಂಟಪ ಸಂಸ್ಕಾರ, ಭೇರಿ ತಾಡನ, ಬಲಿ, ಪಲ್ಲಕ್ಕಿ ಉತ್ಸವ ಇತ್ಯಾದಿ ನಡೆಯಲಿದೆ. ಜ.೨೮ರಂದು ಬೆಳಿಗ್ಗೆ ಸಾಮೂಹಿಕ ಉಪನಯನ ಕಾರ್ಯಕ್ರಮ ನಡೆಯಲಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಬೆಳಿಗ್ಗೆ ೮ ಗಂಟೆಯಿಂದ ಅಗ್ರೋದಕ, ಗಣೇಶ ಪೂಜಾ, ಪುಣ್ಯಾಹ, ಗೃಹ ಮೃತ್ಯುಂಜಯ, ಸ್ಥಾನಶುದ್ಧಿ, ಬಿಂಬಿಶುದ್ಧಿ, ಅಧಿವಾಸ, ಪಂಚಬ್ರಹ್ಮಶಕ್ತಿ, ತತ್ವಕಲಾ ಪ್ರಾಣ ಪ್ರತಿಷ್ಠೆ, ಪ್ರಾಯಶ್ಚಿತ್ತ ಶಾಂತಿ, ಪುರುಷಸೂಕ್ತ, ಶ್ರೀಸೂಕ್ತ ಹವನ, ಪೂರ್ಣಾಹುತಿ, ಕಲಾಭಿಷೇಕ, ಮಹಾಪೂಜೆ, ಬಲಿ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ರಂಗಪೂಜೆ, ಬಲಿ, ಅಷ್ಠಾವಧಾನ ಸೇವೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆಯೂ ಕೋರಿದ್ದಾರೆ.

More Stories
ಭಟ್ಕಳದಲ್ಲಿ ಶಾಲಾ ಮಕ್ಕಳನ್ನ ಸಾಗಿಸುತ್ತಿದ್ದ ವಾಹನ ಪಲ್ಟಿ: 13 ವಿದ್ಯಾರ್ಥಿಗಳಿಗೆ ಸಣ್ಣ ಗಾಯ
ಭಟ್ಕಳದಲ್ಲಿ ಸಂಭ್ರಮದ ಹೋಳಿ ಹಬ್ಬ
ಬ್ಯಾಂಕ್ ದಾಖಲೆ ಪಡೆದು ವಂಚನೆ: ಠಾಣೆಯಲ್ಲಿ ಪ್ರಕರಣ