ಹೊನ್ನಾವರ: ಸಮುದಾಯ ಒಪ್ಪುವ ರೀತಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ಮಕ್ಕಳಿಗೆ ಮೌಲ್ಯಯುತ ಹಾಗೂ ಜೀವನ ನಿರ್ವಹಣೆಯ ಶಿಕ್ಷಣ ನೀಡುತ್ತಿದ್ದು, ಇದಕ್ಕೆ,ಪಾಲಕ, ಪೋಷಕರ ಸಹಕಾರವು ಮುಖ್ಯವಾಗಿದೆ ಎಂದು ಪಟ್ಟಣ ಪಂಚಾಯತ ನೂತನ ಸದಸ್ಯೆ ಜ್ಯೋತಿ ಖಾರ್ವಿ ಹೇಳಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಕಿಮಡಿಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಮಂಕಿ ಪಟ್ಟಣ ಪಂಚಾಯತದಿಂದ ಸಿಗುವ ಸೌಲಭ್ಯಗಳನ್ನು ಮಂಕಿ ಮಡಿ ಶಾಲೆಗೆ ನನ್ನ ಪರಿಮಿತಿಯಲ್ಲಿ ಪ್ರಾಮಾಣಿಕವಾಗಿ ನೀಡಲು ನಾನು ಸಿದ್ದನೇದ್ದೇನೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿನಾಯಕ ಅವಧಾನಿ ‘ಮಾಣಿಕ್ಯ’ ಮಕ್ಕಳ ಕೈಬರಹ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿ ಮಂಕಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅತಿ ಹೆಚ್ಚು ಮಕ್ಕಳ ಸಂಖ್ಯೆ ಇರುವ ಮಂಕಿಮಡಿ ಶಾಲೆಯು ಸದಾ ವಿನೂತನ ಚಟುವಟಿಕೆಗಳ ಮೂಲಕ ಇಲಾಖೆಯ ಆಶಯ ಪೂರೈಸುತ್ತಿದೆ. ಇಲ್ಲಿಯ ಶಿಕ್ಷಣ ಪ್ರೇಮಿಗಳ ಹಾಗೂ ಶಿಕ್ಷಕರ ಪ್ರಯತ್ನಕ್ಕೆ ಇಲಾಖೆಯಿಂದ ಅಭಿನಂದಿಸುತ್ತೇನೆ ಎಂದರು.
ಸಾಹಿತಿ ಸುರೇಶ ನಾಯ್ಕ ಮಾತನಾಡಿ ಶಾಲೆಯಲ್ಲಿರುವ ಗ್ರಂಥಾಲಯದ ಪ್ರಯೋಜನ ಪಡೆದು ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರಾಥಮಿಕ ಹಂತದಿಂದಲೇ ಪ್ರೇರಿತರಾಗಬೇಕು ಎಂದರು.
ಶಿಕ್ಷಣ ಪ್ರೇಮಿ ಹೇಮಂತ ಭಟ್ ರವರು ಮಾತನಾಡಿ ನಮ್ಮೂರಿನ ಎಲ್ಲಾ ಪಾಲಕರು ತಮ್ಮ ಮಕ್ಕಳನ್ನು ಇದೇ ಶಾಲೆಗೆ ದಾಖಲಿಸುವ ಮೂಲಕ ಶಾಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ ಜಿ ನಾಯ್ಕ, ಜಿಲ್ಲಾ ಸಂಘದ ಗೌರವಾಧ್ಯಕ್ಷರಾದ ಸುದೀಶ್ ನಾಯ್ಕ, ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ,ಜಿಲ್ಲಾ ಸಂಘದ ಪ್ರತಿನಿಧಿ ಶಂಕರ ನಾಯ್ಕ, ಸಿಆರ್ಪಿ ಬಣಸಾಲೆ ಸಿ ಆರ್ ಪಿ ಉಮೇಶ್ ನಾಯ್ಕ, ರವಿ ನಾಯ್ಕ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಂಗಾಧರ ನಾಯ್ಕ, ಉಪಾಧ್ಯಕ್ಷೆ ರಾಧಾ ಖಾರ್ವಿ, ಕರಾವಳಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ನಾಗೇಶ ಖಾರ್ವಿ ಹಾಗೂ ಎಸ್ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.
ಸಹಶಿಕ್ಷಕಿ ಭಾಗೀರಥಿ ನಾಯ್ಕ ಸ್ವಾಗತಿಸಿದರು. ಮುಖ್ಯಾಧ್ಯಾಪಕ ಉದಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕಿ ಸುಮಿತ್ರಾ ನಾಯ್ಕ ವರದಿ ವಾಚನ ಮಾಡಿದರು. ಶಿಕ್ಷಕ ಕಿರಣ ನಾಯ್ಕ ಹಾಗೂ ಭಾರತಿ ಮೊಗೆರ ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ಸಹ ಶಿಕ್ಷಕಿ ಅನ್ನಪೂರ್ಣ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಸುಜಾತಾ ಟಿ.ಜಿ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಅಂಗನವಾಡಿ, ಶಾಲಾ ವಿದ್ಯಾರ್ಥಿಗಳು ಹಾಗೂ ಪೂರ್ವ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆಯಿತು.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ