ಹೊನ್ನಾವರ: ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮವು ಈಗ ವಿವಾದದ ಕೇಂದ್ರಬಿಂದುವಾಗಿದೆ. ಸಮಿತಿಯು ಅರ್ಹ ಸಾಧಕರನ್ನು ಕಡೆಗಣಿಸಿ, ಕೇವಲ ತಮಗೆ ಬೇಕಾದವರಿಗೆ ಮತ್ತು ಆಪ್ತರಿಗೆ ಮಾತ್ರ ಗೌರವ ಸಮರ್ಪಿಸಿದೆ ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊನ್ನಾವರ ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ನೂರಾರು ಸಾಧಕರಿದ್ದಾರೆ. ಆದರೆ ಸಮಿತಿಯು ಅಂತಹವರನ್ನು ಗುರುತಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸನ್ಮಾನಿತರ ಪಟ್ಟಿಯಲ್ಲಿ ಕೇವಲ ಸಮಿತಿಯೊಂದಿಗೆ ಅಥವಾ ಪ್ರಭಾವಿಗಳೊಂದಿಗೆ ‘ಹೊಂದಾಣಿಕೆ’ ಮಾಡಿಕೊಂಡವರಿಗೆ ಮಾತ್ರ ಸ್ಥಾನ ಸಿಕ್ಕಿದೆ. ಇದು ಪ್ರಶಸ್ತಿಯ ಘನತೆಯನ್ನು ಕುಂದಿಸಿದೆ ಎಂದು ವಿನಾಯಕ ಆಚಾರಿ ದೂರಿದ್ದಾರೆ. “ರಾಷ್ಟ್ರೀಯ ಹಬ್ಬಗಳಂತಹ ಪವಿತ್ರ ವೇದಿಕೆಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ ನಿಜವಾದ ಸಾಧಕರಿಗೆ ಗೌರವ ಸಿಗಬೇಕಿತ್ತು.
“ಸನ್ಮಾನ ಎನ್ನುವುದು ಸಾಧನೆಗೆ ನೀಡುವ ಗೌರವವೇ ಹೊರತು, ಸ್ನೇಹ ಅಥವಾ ಪ್ರಭಾವಕ್ಕೆ ನೀಡುವ ಕಾಣಿಕೆಯಲ್ಲ. ಸಮಿತಿಯ ಈ ಧೋರಣೆಯನ್ನು ನಾವು ಖಂಡಿಸುತ್ತೇವೆ.” ಎಂದು ವಿನಾಯಕ ಆಚಾರಿ ದೂರಿದ್ದಾರೆ.

More Stories
ಮಕ್ಕಳ ಕಲಿಕೆಯಲ್ಲಿ ಹಾಡಿಗೆ ತುಂಬಾ ಮಹತ್ವವಿದೆ.
ಸಮ್ಮೇಳದ ಸರ್ವಾಧ್ಯಕ್ಷರಾದ ಸಾಹಿತಿ ಸುರೇಶ ನಾಯ್ಕ ಅವರಿಗೆ ಆಮಂತ್ರಣ
ಸಿಂಧೂರ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಹೊನ್ನಾವರ (ಉತ್ತರ ಕನ್ನಡ) ಉದ್ಘಾಟನಾ ಸಮಾರಂಭ