ದಾಂಡೇಲಿಯ ಪ್ರಯಾಣಿಕ ರೈಲನ್ನು ಪ್ರಾರಂಭಿಸಲು ಕಳೆದ ಎರಡು ವರ್ಷದಿಂದ ಸತತವಾಗಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿ ತಿಯ ನೇತೃತ್ವದಲ್ಲಿ ಅನೇಕ ಬಾರಿ ಮನವಿ ಸಲ್ಲಿಸಿ ಸಂಬಂಧ ಪಟ್ಟ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ರೈಲ್ವೆ ಸಚಿವರಿಗೆ. ಸಂಸದರಿಗೆ.ಶಾಸಕರಿಗೆ ಒತ್ತಾಯ ಮಾಡುತ್ತಾ ಬಂದಿದ್ದು ಶನಿವಾರ ಏಳನೇ ತಾರೀಕಿನಿಂದ
ಪ್ರಯಾಣಿಕ ರೈಲು ಪ್ರಾರಂಭವಾಗುವ ಸೂಚನೆಯೂ ನೀಡಲಾಗಿದೆ ಆದ್ದರಿಂದ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯು ದಾಂಡೇಲಿಯ ಪ್ರಯಾಣಿಕ ರೈಲನ್ನು ಪ್ರಾರಂಭವಾಗುವ ಸುದ್ದಿಯನ್ನು ತಿಳಿದು ಇಂದು ರೈಲ್ವೇ ನಿಲ್ದಾಣದಲ್ಲಿ ಸಭೆ ಮಾಡಿ ಸ್ವಾಗತಿಸಲಾಯಿತು.
ಈ ಹಿಂದೆ ಸಂಪೂರ್ಣವಾಗಿ ರೈಲನ್ನು ನಿಲ್ಲಿಸಿದ್ದನ್ನು ಈ ಹಿಂದೆ ಇದ್ದ ದಿವಂಗತ ರೈಲ್ವೆ ಸಚಿವರಾದ ಸುರೇಶ ಅಂಗಡಿಯವರಿಗೂ ಸಹ ಹೋರಾಟ ಸಮಿತಿಯವರು ಅನೇಕ ಬಾರಿ ಭೇಟಿಯಾಗಿ ಪ್ರಯಾಣಿಕ ರೈಲು ಪ್ರಾರಂಭಿಸಿತ್ತು ಆದರೆ ಕರೋನ ವೈರಸ್ ಪ್ರಾರಂಭವಾಗಿ ದ್ದರಿಂದ ಇಡೀ ದೇಶದಲ್ಲಿಯೇ ಪ್ರಯಾಣಿಕ ರೈಲನ್ನು ಸಂಪೂರ್ಣ ವಾಗಿ ನಿಲ್ಲಿಸಲಾಗಿತ್ತು ಆದರೆ ಈ ಹಿಂದೆಯೇ ಬೇರೆ ಕಡೆಯಲ್ಲ ರೈಲು ಗಳನ್ನು ಪುನಃ
ಪ್ರಾರಂಭವಾಗಿದ್ದರೂ
ದಾಂಡೇಲಿಯಲ್ಲಿ ಮಾತ್ರ ಪ್ರಾರಂಭಿಸಿದ್ದಿಲ್ಲ ಆದ್ದರಿಂದ ಹೋರಾಟ ಸಮಿತಿಯು ಮತ್ತು ವಿವಿಧ ಸಂಘಟನೆಗಳು ಸೇರಿ ಪ್ರಯಾಣಿಕ ರೈಲನ್ನು ಪ್ರಾರಂಭಿಸಲು ಒತ್ತಾಯ
ಮಾಡಿದ್ದರಿಂದ ಈಗಾಗಲೇ ಪ್ರಯಾಣಿಕ ರೈಲು ಪ್ರಾರಂಭಿಸುವ ತೀರ್ಮಾನವು ಕೈ ಗೊಂಡಿದೆ.
ಪ್ರಾರಂಭಿಸಲು ಮುತುವರ್ಜಿ
ವಹಿಸಿದ ರೈಲ್ವೆ ಸಚಿವರಾದ.ವಿ. ಸೋಮಣ್ಣ. ಪ್ರಹ್ಲಾದ್ ಜೋಶಿ. ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ. ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ. ಇವರೆಲ್ಲರಿಗೂ ಹೋರಾಟ ಸಮಿತಿ ಯಿಂದ ಅಭಿನಂದಿಸಲಾಯಿತು ಹೋರಾಟ ಸಮಿತಿಯ ಅಧ್ಯಕ್ಷ ರಾದ ಅಕ್ರಂ ಖಾನ್. ಉಪಾಧ್ಯಕ್ಷರಾದ ಅಶೋಕ್ ಪಾಟೀಲ್. ಮಾಜಿ ನಗರಸಭೆ ಅಧ್ಯಕ್ಷರಾದ ಬಲವಂತ ಬೊಮ್ಮನಹಳ್ಳಿ. ಸಮಿತಿಯ ಪದಾಧಿಕಾರಿಗಳಾದ ಮಹಮ್ಮದ್ ಗೌಸ್ ಬೆಟಗೇರಿ.ದತ್ತಾತ್ರೆಯ
ಹೆಗಡೆಕರ್.
ಶಾಮ ಬೆಂಗಳೂರು.
ಶಹೆಜಾದಿ ಕುಲಶಾಪುರ.ವಿನೋದ್ ಪೊರೆ. ಶಮಿಮ ಕೋರ್ಪಾಲಿ. ಫಾರೂಕ್ ಶೇಕ. ಶಬ್ಬೀರ್ ಪಾನ್ ವಾಲೆ. ಗೌಸ್ ಪಟೇಲ್. ಮದಾರ್ಸಾಬ್. ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

More Stories
ಭಸ್ಮ ಎರಚಿ ಸುಲಿಗೆ ಮಾಡುವ ಮಹಾರಾಷ್ಟ್ರದ ಖಾವಿಧಾರಿಗಳ ವಿಡಿಯೋ ವೈರಲ್