ಹೊನ್ನಾವರ: ತಾಲೂಕಿನ ಹಳದೀಪುರ ಜೋಗ್ನಿಕಟ್ಟೆಯ ಮಹಾಲಕ್ಷ್ಮೀ ದಾಮೋದರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಶಿಲಾಮಯ ಕಟ್ಟಡದ ” ಶಿಲಾಪರಿಗ್ರಹ” ಕಾರ್ಯಕ್ರಮ ಫೆ. 5ರಂದು ಸೊಂದಾ ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನೇರವೇರಿಸಲಿದ್ದಾರೆ.
ಫೆಬ್ರವರಿ 5 ರಂದು ಮುಂಜಾನೆ ಗಣಹೋಮ, ಶ್ರೀ ಗುರುಗಳ ಪಾದಪೂಜೆ, ಶಿಲಾಮಯ ಕಟ್ಟಡದ ಶಿಲಾ ಪರಿಗ್ರಹದ ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆರ್ಶಿವಚನ ನೀಡಲಿದ್ದಾರೆ. ಅತಿಥಿಗಳಾಗಿ ರಾಜ್ಯಮ ಮೀನುಗಾರಿಕೆ ಬಂದರು, ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ವೈದ್ಯ, ಶಾಸಕ ದಿನಕರ ಶೆಟ್ಟಿ, ಆಡಳಿತ ಮಂಡಳಿ ಮೊಕ್ತೆಸರಾದ ಗಂಗಾಧರ ನಾಯ್ಕ, ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ ನಾಯ್ಕ, ಸುರೇಶ ನಾಯ್ಕ, ಸತೀಶ ಶೇರುಗಾರ, ಗಿರೀಶ ಶರ್ಮಾ, ಎಮ್.ಉದಯ, ಮಹೇಶ ನಾಯ್ಕ, ಪರಮೇಶ್ವರ ನಾಯ್ಕ, ಸೀತಾರಾಮ ನಾಯ್ಕ ಆಗಮಿಸಲಿದ್ದಾರೆ, ಸಭಾ ಕಾರ್ಯಕ್ರಮದ ನಂತರ ಗುರುಬಿಕ್ಷಾ ಅನ್ನಸಂತರ್ಪಣೆ ಜರುಗಲಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

More Stories
ಮಕ್ಕಳ ಕಲಿಕೆಯಲ್ಲಿ ಹಾಡಿಗೆ ತುಂಬಾ ಮಹತ್ವವಿದೆ.
ಸಮ್ಮೇಳದ ಸರ್ವಾಧ್ಯಕ್ಷರಾದ ಸಾಹಿತಿ ಸುರೇಶ ನಾಯ್ಕ ಅವರಿಗೆ ಆಮಂತ್ರಣ
ಸಿಂಧೂರ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಹೊನ್ನಾವರ (ಉತ್ತರ ಕನ್ನಡ) ಉದ್ಘಾಟನಾ ಸಮಾರಂಭ