ಕೃಷ್ಣರಾಜಪೇಟೆ : ವಸ್ತು ಪ್ರದರ್ಶನಕ್ಕೆ ಶಾಲೆಯ ಸಂಸ್ಥಾಪರಾದ ಶ್ರೀಮತಿ ಇಂದಿರಾ ಬಾಬು ಚಾಲನೆ ನೀಡಿ ಮಾತನಾಡಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಹಸಿರು ಯೋಜನೆ, ಆಹಾರ ಪದ್ದತಿ, ಆಧುನಿಕ ಮನುಷ್ಯರ ಜೀವನ ಶೈಲಿ, ಯಂತ್ರಗಳ ಬಳಕೆ ಸೇರಿದಂತೆ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಮಾದರಿಗಳಿಗೆ ಪೋಷಕರು ಮತ್ತು ಶಿಕ್ಷಕರ ಪರಿಶ್ರಮ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲೆ ಸಮಾಜ ವಿಜ್ಞಾನ ಬಗ್ಗೆ ಹೆಚ್ಚು ವಿಜ್ಞಾನ ವಿಷಯವಾಗಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ವಸ್ತು ಪ್ರದರ್ಶನ ಕಣ್ತುಂಬಿಕೊಂಡ ಪೋಷಕರು ಹಾಗೂ ಸಾರ್ವಜನಿಕರು ಮಕ್ಕಳ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೇಂಬ್ರಿಡ್ಜ್ ಶಾಲೆಯ ಸಂಸ್ಥಾಪಕರಾದ ಶ್ರೀಮತಿ ಇಂದಿರಾ ಬಾಬು, ಮುಖ್ಯ ಶಿಕ್ಷಕರಾದ ಶ್ರೀಮತಿ ದೀಪಾ, ಸಹಾ ಶಿಕ್ಷಕರಾದ ಅನಸೂಯ, ಯಮುನಾ, ರಾಣಿ, ರಕ್ಷಿತಾ, ಕೋಮಲ, ಶುಭ, ಜಯಂತಿ, ಸುಧಾ, ಜ್ಯೋತಿ, ಸವಿತಾ, ಭವ್ಯ, , ಸವಿತಾ, ಅಕ್ಷತಾ, ಸ್ವಾತಿ , ಶೇಕ್ ಶಾವಲ್ಲಿ, ಪ್ರಶಾಂತ್, ರಕ್ಷಿತ್, ಕಾವ್ಯ, ರಕ್ಷಿತಾ, ಮಮತಾ, ಅರ್ಪಿತಾ, ಅರ್ಷಿತಾ, ಮಹದೇವ್, ಸೇರಿದಂತೆ ಶಾಲೆಯ ಮಕ್ಕಳು, ಪೋಷಕರು, ಸೇರಿದಂತೆ ಮತ್ತಿತ್ತರರು ಇದ್ದರು..
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

More Stories
ಸೊಳ್ಳೇಪುರ ಹಾಲು ಉತ್ಪಾದಕ ಸಹಕಾರ ಸಂಘ ಕಾಂಗ್ರೆಸ್ ವಷಕ್ಕೆ
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ ಉತ್ಸವ-2026
ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ನೂತನ ದೇವಸ್ಥಾನ ಲೋಕಾರ್ಪಣೆ