ಹೊನ್ನಾವರ : ತಾಲೂಕಿನ ಗುಣವಂತೆಯ ಶಂಭುಲಿAಗೇಶ್ವರನ ಸನ್ನಿಧಿಯಲ್ಲಿ ಮುಂಜಾನೆಯಿAದಲೇ ಸಾವಿರಾರು ಭಕ್ತರು ಸರತಿ ಸಾರಿನಲ್ಲಿ ನಿಂತು ದೇವರ ದರ್ಶನವನ್ನು ಪಡೆದು ಪುನೀತರಾದರು. ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶ್ರೀ ಎಂ ಎಸ್ ಹೆಗಡೆ ಗುಣವಂತೆಯವರು ಮಾತನಾಡಿ ದೇವಾಲಯದ ಮಹಿಮೆ ಹಿರಿಮೆಯನ್ನು ತಿಳಿಸುತ್ತಾ ಖ್ಯಾತ ಉದ್ಯಮಿ ಮುರುಡೇಶ್ವರದ ಶ್ರೀ ಸುನಿಲ್ ಶೆಟ್ಟಿಯವರು ಈ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದ್ದು ಇದೇ ಬರುವ ಏಪ್ರಿಲ್ 12ರಂದು ಅಷ್ಟಬಂಧ, ಬ್ರಹ್ಮಕಲಶೋತ್ಸವ ಹಾಗೂ 18ರಂದು ಜಾತ್ರಾ ಮಹೋತ್ಸವ ಜರುಗಲಿದ್ದು ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ ಎಂದರು.
ಆಡಳಿತ ಮಂಡಳಿಯ ಅಧ್ಯಕ್ಷ ಡಾ ನರಸಿಂಹ ಪಂಡಿತ ನಿಲೇಕೇರಿ, ಉಪಾಧ್ಯಕ್ಷರಾದ ಎಂ ವಿ ಹೆಗಡೆ ಕೆರೆಮನೆ,ಶಿವಾನಂದ ಗೌಡ ಅಡಿಮನೆ, ಕೋಶಾಧಿಕಾರಿ ಗೋವಿಂದ ಗೌಡ, ಧರ್ಮ ನಾಯ್ಕ, ನಾಗರಾಜ ಭಂಡಾರಿ ಮೊದಲಾದವರು ಉಪಸ್ಥಿತರಿದ್ದು ದೇವರ ಸುಗಮ ದರ್ಶನಕ್ಕೆ ಅನುವು ಮಾಡಿಕೊಟ್ಟರು.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ