ಹೊನ್ನಾವರ: ಶಿವನ ಆರಾಧನೆಯ ದಿನವಾಗಿ ಗುರುತಿಸಲ್ಪಟ್ಟಿರುವ ಮಾಘಮಾಸದ ಬಹುಳ ಚತುರ್ದಶಿಯಂದು ಆಚರಿಸುವ ಮಹಾಶಿವರಾತ್ರಿಯನ್ನು ತಾಲೂಕಿನೆಲ್ಲಡೆ ಸಡಗರ ಸಂಭ್ರಮದಿAದ ನೇರವೇರಿತು. ಪಂಚಕ್ಷೇತ್ರಗಳಲ್ಲೊAದೆನಿಸಿರುವ ಗುಣವಂತೆಯ ಶಂಭುಲಿAಗೇಶ್ವರನ ಸನ್ನಿಧಿ ಶಿವರಾತ್ರಿ ಆಚರಣೆಗೆ ತಾಲೂಕಿನಲ್ಲೆ ಪ್ರಸಿದ್ಧವೆನಿಸಿದೆ. ದೇವಾಲಯದ ಮುಂಭಾಗದಲ್ಲಿರುವ ಕೆರೆಯಲ್ಲಿ ಸ್ನಾನ ಮಾಡಿದರೆ ಚರ್ಮ ರೋಗ ನಿವಾರಣೆಯಾಗಲಿದೆ ಎನ್ನುವ ಪ್ರತಿತಿಯು ಇದೆ. ಶಿವರಾತ್ರಿಯ ನಿಮಿತ್ತ ಬೆಳಿಗ್ಗೆಯಿಂದಲೇ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೀರಾಭೀಷೇಕ, ರುದ್ರಾಭೀಷೇಕ, ಜಲಾಭೀಷೇಕ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೇರವೇರಿದವು ಮುಂಜಾನೆ 4 ಗಂಟೇಯಿAದ ರಾತ್ರಿ 9ರವರೆಗೂ ಸರತಿ ಸಾಲಿನಲ್ಲಿ ನಿಂತು ದರ್ಶನ ಮಾಡಿದರು.
ಪಟ್ಟಣದ ಮೂಡಗಣಪತಿ ದೇವಾಲಯ, ಚಂದ್ರಮೂಳೇಶ್ವರ, ರಾಮತೀರ್ಥದ ರಾಮೇಶ್ವರ, ಗ್ರಾಮೀಣ ಭಾಗದ ಮಾಳಕೋಡ ಶ್ರೀ ಕ್ಷೇತ್ರಪಾಲೇಶ್ವರ, ಖರ್ವಾ ಹಸಿಮನೆಯ ಶ್ರೀ ಕೋದಂಡೇಶ್ವರ, ಮೂಡ್ಕಣಿಯ ಶ್ರೀ ಶಂಭುಲಿAಗೇಶ್ವರ, ಬಾಳೆಗದ್ದೆಯ ಭೈರವೈಶ್ವರ, ಉಪ್ಲೆಯ ಶ್ರೀ ಮಹಾಲಿಂಗೇಶ್ವರ, ದಿಬ್ಬಣಗಲ್ ಶ್ರೀ ಗಣಪತಿ ಈಶ್ವರ, ಶ್ರೀ ಶಂಭುಲಿAಗೇಶ್ವರ ದೇವಾಲಯ ಹಡಿನಬಾಳ, ಕೊಡಾಣಿಯ ಶ್ರೀ ಕಾಮೇಶ್ವರ, ಕರ್ಕಿಯ ಸರ್ಪಕರ್ಣೇಶ್ವರ, ಶಿರೂರಿನ ಭೈರವೇಶ್ವರ, ಚಂದಾವರದ ಕೋನೇಶ್ವರ ಸಾಲ್ಕೋಡ ಬೊಂಡಕಾರೇಶ್ವರ, ದರ್ಬೆಜಡ್ಡಿ ಸೋಮೇಶ್ವರ ಮಂಕಿ ಕೋಕ್ಕೇಶ್ವರ, ಹೊಸಾಕುಳಿಯ ಉಮಾಮಹೇಶ್ವರ, ಸೇರಿದಂತೆ ವಿವಿಧ ಶಿವ ಸಾನಿಧ್ಯವಿರುವ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ ಶೃದ್ದಾಭಕ್ತಿಯಿಂದ ನೇರವೇರಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶಿವ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಆಯಾ ದೇವಸ್ಥಾನದಲ್ಲಿ ಆಗಮಿಸುವ ಭಕ್ತರಿಗೆ ವಿಶೇಷ ಸೇವೆ ಸಲ್ಲಿಸಲು ಹಾಗೂ ಸರತಿ ಸಾಲಿನಲ್ಲಿ ಸುಗಮವಾಗಿ ಸಾಗಲು ಆಡಳಿತ ಮಂಡಳಿಯವರು ವ್ಯವಸ್ಥೆ ಕಲ್ಪಿಸಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ