ಹೊನ್ನಾವರ: ಹಿಂದು ಸಮ್ಮೇಳನ ಸಮಿತಿಯ ಹೊನ್ನಾವರ ನಗರ ಘಟಕದ ಆಶ್ರಯದಲ್ಲಿ ಹಿಂದೂ ಸಮ್ಮೇಳನ ಫೆ. 18 ರಂದು ಪಟ್ಟಣದ ಸೇಂಟ್ ಥಾಮಸ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ನಗರ ಮಂಡಲ ಅಧ್ಯಕ್ಷ ಮಹೇಶ ಕಲ್ಯಾಪುರ ತಿಳಿಸಿದರು.
ಸಂಘಕ್ಕೆ 100 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ದೇಶದಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ವಿಶೇಷವಾಗಿ ಒಂದು ಲಕ್ಷಕ್ಕೂ ಅಧಿಕ ಸಮ್ಮೇಳನ ನಡೆಯುತ್ತಿದೆ. ಹಿಂದುಗಳಲ್ಲಿ ಒಗ್ಗಟ್ಟು ಮೂಡಿಸಿ ಸಂಘಟನೆ ಬಲಗೊಳ್ಳಲು ಈ ಕಾರ್ಯಕ್ರಮ ನಡೆಯುತ್ತಿದೆ. ಫೆ.18 ರಂದು ಮಧ್ಯಾಹ್ನ 3-30 ಗಂಟೆಗೆ ಶರಾವತಿ ವೃತ್ತದಿಂದ ಬಜಾರ ಮೂಲಕ ಸೆಂಟ್ ಥಾಮಸ್ ಮೈದಾನದರೆಗೆ ಶೋಭಯಾತ್ರೆ ನಡೆಯಲಿದೆ. 4-30 ಗಂಟೆಗೆ ಸೇಂಟ್ ಥಾಮಸ್ ಸ್ಕೂಲ್ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕರ್ಕಿಯ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಮಹಾಸ್ವಾಮಿಯವರು ಮತ್ತು ಶಿವಮೊಗ್ಗ ಕೂಡಲಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮಿಜಿಯವರು ಸಾನಿಧ್ಯ ವಹಿಸಲಿದ್ದಾರೆ. ವಿಶ್ವ ಹಿಂದು ಪರಿಷತ್ತಿನ ಕೇಂದ್ರಿಯ ಮಂತ್ರಿ ಗೋಪಾಲ ಜಿ. ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸಮಿತಿ ಸಂಚಾಲಕ ವಿಶ್ವನಾಥ ನಾಯಕ ಮಾತನಾಡಿ ಪೂರ್ಣಕುಂಭ ಸ್ವಾಗತ, ಜಾನಪದ ತಂಡಗಳು, ಸ್ತಭ್ದ ಚಿತ್ರ ಪ್ರದರ್ಶನ ಶೋಭಯಾತ್ರೆಯಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮ ನಂತರ ಜಗದೀಶ ಪುತ್ತೂರು ತಂಡದಿAದ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲಘು ಉಪಾಹಾರ, ರಾತ್ರಿ ಭೋಜನ ವ್ಯವಸ್ಥೆಯಿದೆ ಎಂದರು.
ಸಮಿತಿಯ ಸದಸ್ಯ ಸಂಜಯ ಶೇಟ್ ಮಾತನಾಡಿ, ಸಮ್ಮೇಳನದ ಕುರಿತು ಜಾಗೃತಿ ಮೂಡಿಸಲು ಫೆ. 17ರಂದು ಮಧ್ಯಾಹ್ನ 4:30 ಗಂಟೆಗೆ ಬೈಕ್ ಜಾಥಾ ಶ್ರೀ ದಂಡಿನದುರ್ಗಾ ದೇವಾಲಯದಿಂದ ಆರಂಭಗೊAಡು ಪಟ್ಟಣದ ವಿವಿಧೆಡೆ ಸಂಚರಿಸಲಿದ್ದು, ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೊತ್ಸಾಹಿಸುವಂತೆ ಮನವಿ ಮಾಡಿದರು. ಸುದ್ದಿಗೊಷ್ಠಿಯಲ್ಲಿ ರಾಜು ಭಂಡಾರಿ, ದಿನೇಶ ಶೇಟ್, ಉದಯ ಶೇಟ್, ರಾಘವೇಂದ್ರ ಶೇಟ್, ದೀಪಕ ಮೇಸ್ತ ಇದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಗುಣವಂತೆ ಶ್ರೀ ಶಂಭು ಶಂಭುಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ಸಭೆ ವೈಭವ
ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಶಿವಾಲಯ ಲೋಕಾರ್ಪಣೆ
ಸಿ.ಎ ಕನಸು ಹೊತ್ತ ಗ್ರಾಮೀಣ ಪ್ರತಿಭೆ ಚಿನ್ನಯಿ ಶೆಟ್ಟಿ, ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ