March 1, 2026

ಸರ್ಕಾರಿ ಜಮೀನು ಬೇನಾಮಿ= ಸಾಮಾಜಿಕ ಹೋರಾಟಗಾರ ಮಾಸ್ತಪ್ಪ ನಾಯ್ಕ ಬಲಸೆ ಗಂಭೀರ ಆರೋಪ

ಹೊನ್ನಾವರ; ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳನ್ನು ಅಧಿಕಾರಿಗಳಿಗೆ ಆಮಿಷ ಒಡ್ಡಿ ಕಬಳಿಸುವ ಮೂಲಕ ಜನಪ್ರತಿನಿಧಿಗಳು ತಮ್ಮ ಆಪ್ತರ ಹೆಸರಿನಲ್ಲಿ ಬೇನಾಮಿ ಮಾಡಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಮಾಸ್ತಪ್ಪ ನಾಯ್ಕ ಬಲಸೆ ಗಂಭೀರ ಆರೋಪ ಮಾಡಿದ್ದಾರೆ
ಪಟ್ಟಣದ ಖಾಸಗಿ ಹೊಟೇಲನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ನಾಲ್ಕು ಎಕರೆ ಭೂಮಿಯ ಮಾರುಕಟ್ಟೆಯ ಬೆಲೆ ಐವತ್ತು ಕೋಟಿ ರೂಗಳಷ್ಟು ಆಗಬಹುದು ಎಂದರು.‌

ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಭಾವಿ ರಾಜಕಾರಣಿಯೊಬ್ಬರು ಹೊನ್ನಾವರ ಪಟ್ಟಣದ ಪ್ರಭಾತನಗರದಲ್ಲಿರುವ ಬಹುಕೋಟಿ ರೂ. ಬೆಲೆಬಾಳುವ ನಾಲ್ಕು ಎಕರೆ ಸರಕಾರಿ ಭೂಮಿಯನ್ನು ಬೇರೆ ನಾಲ್ಕು ಜನರ ಹೆಸರಿನಲ್ಲಿ ಮಾಡಿಕೊಂಡು ಪ್ರಭಾತನಗರದ ಸರ್ವೆ ನಂಬರ್ 238 ಹಾಗೂ 239ರಲ್ಲಿ ನಾಲ್ಕು ಎಕರೆ ಸರಕಾರಿ ಭೂಮಿಯನ್ನು ಕಬಳಿಸಲಾಗಿದೆ ಎಂದು ಅವರು ಆರೋಪಿಸಿದರು.


1974 ರಲ್ಲಿ ಮತ್ತು 2004 ರಲ್ಲಿ ಎರಡು ಸಲವೂ ಈ ಭೂಮಿ ಸರಕಾರಕ್ಕೆ ಸೇರಿದ್ದು ಎಂದು ಈ ಹಿಂದೇಯೆರ ಆದೇಶವಾಗಿದೆ. ಈ ಭೂಮಿಯನ್ನು 12 ಜನವರಿ 2026ರಂದು ಭೂ ನ್ಯಾಯ ಮಂಡಳಿಯಲ್ಲಿ ನಾಲ್ಕು ಜನರ ಹೆಸರಿಗೆ ಮಂಜೂರಾತಿ ಮಾಡಿ ಆದೇಶ ಮಾಡಲಾಗಿದೆ. ಪ್ರಭಾವಿ ರಾಜಕಾರಣಿಗಳು ಅಧಿಕಾರಿಗಳ ಮೇಲೆ ತಮ್ಮ ಪ್ರಭಾವ ಬಳಸಿ ನಾಲ್ಕು ಜನರ ಹೆಸರಿಗೆ ಮಂಜೂರಾತಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.


ಇದು ರದ್ದಾಗಿ ವಾಪಸ್ ಸರಕಾರಿ ಭೂಮಿಯಾಗಬೇಕು. ಸಾರ್ವಜನಿಕ ಉಪಯೋಗಕ್ಕೆ ಬಳಕೆಯಾಗಬೇಕು. ಈ ಅಕ್ರಮ ಮಂಜೂರಾತಿ ವಿರುದ್ದ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು. ಬಡವರಿಗೆ ಕೃಷಿ ಮಾಡಿಕೊಂಡ ಭೂಮಿಯನ್ನು ಮಂಜೂರಾತಿ ಕೊಡುತ್ತಿಲ್ಲ. ಆದರೆ ರಾಜಕಾರಣದ ಪ್ರಭಾವಕ್ಕೆ ಒಳಗಾಗಿ ಅಕ್ರಮ ಮಂಜೂರಾತಿ ನೀಡುತ್ತಾರೆ ಎಂದು ಆಪಾದಿಸಿದರು. ಆದೇಶದ ಪ್ರತಿಯನ್ನು ಈ ಸಂದರ್ಭದಲ್ಲಿ ಅವರು ಪ್ರದರ್ಶಿಸಿದರು.
ಪತ್ರಿಕಾಗೊಷ್ಠಿಯಲ್ಲಿ ದಿನೇಶ ಮಡಿವಾಳ, ಬಾಸ್ಕರ ದೇವಾಡಿಗ, ಯೋಗೇಶ ಶೆಟ್ಟಿ, ನವೀನ ನಾಯ್ಕ, ವಿಶ್ವ ನಾಯ್ಕ, ಪ್ರದೀಪ ಮಡಿವಾಳ , ವಾಸು ಗೊಂಡ , ಮಾಸು ನಾಯ್ಕ, ರಾಜೇಶ ಬಳ್ಕೂರು, ಹರೀಶ ಗೌಡ ಉಪಸ್ಥಿತರಿದ್ದರು.                   ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!