ಹೊನ್ನಾವರ: ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಕುದ್ರಿಗಿ ಗ್ರಾಮದ ಸ೦ಶಿ ತೂಗು ಸೇತುವೆಯನ್ನು ವೀಕ್ಷಿಸಿದರು.
೨೦೧೬ರಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದ ನಿವೇದಿತಾ ಆಳ್ವಾ ಅವರ ಸಮಯದಲ್ಲಿ ನಿರ್ಮಾಣವಾದ ಈ ತೂಗು ಸೇತುವೆ ಶರಾವತಿ ಎಡ ದಂಡೆಯ ಸುಮಾರು ೬ ಗ್ರಾ.ಪಂ ಗಳನ್ನು ಹೊನ್ನಾವರಕ್ಕೆ ಸಂಪರ್ಕಿಸುವ ಸೇತುವೆಯಾಗಿ ಬಹು ಜನ ಉಪಯೋಗಿ ಸೇತುವೆಯಾದ್ದರಿಂದ ಅದಕ್ಕೆ ಪೂರಕವಾಗಿ ಇನ್ನೊಂದು ಸೇತುವೆಯನ್ನು ನಿರ್ಮಿಸಲು ವಿವಿಧ ಈ ಸಂದರ್ಭದಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ತೂಗು ಸೇತುವೆ ಪಕ್ಕದಲ್ಲಿಯೇ ಇನ್ನೊಂದು ಸೇತುವೆಯನ್ನು ವಾಹನಗಳ ಓಡಾಡಲು ಅನುಕೂಲವಾಗುವಂತೆ ನಿರ್ಮಿಸಲು ಕ್ರಮ ಜರುಗಿಸುತ್ತೇವೆ. ಸರಿ ಸುಮಾರು ಸೇತುವೆ ನಿರ್ಮಾಣಕ್ಕೆ ೫೦ ಕೋಟಿಗೂ ಮೀರಿ ವೆಚ್ಚವಾಗಬಹುದು. ಈ ಕುರಿತು ಮಾಹಿತಿ ಪಡೆದು ಚರ್ಚಿಸಿ ಕ್ರಮ ಜರುಗಿಸುವುದಾಗಿ ಭರವಸೆ ನಿಡದರು.

ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ವೈಧ್ಯ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಸಾಯಿ ಗಾಂವಕರ್, ಮಾಜಿ ಗ್ರಾ.ಪಂ ಅಧ್ಯಕ್ಷ್ಷ ಫೈಸಲ್ ಮಸ್ತಾನ್, ಯೋಗೆಶ್ ರಾಯ್ಕರ್, ಈಶ್ವರ ನೀಲಯ್ಯ ನಾಯ್ಕ, ಗೋವಿಂದ ನಾಯ್ಕ, ಚಂದ್ರಕಾಂತ ಕೋಚರೇಕರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ


More Stories
ಹೊನ್ನಾವರದಲ್ಲಿ ಸಂಭ್ರಮದ “ಪತ್ರಿಕಾ ದಿನಾಚರಣೆ”: ಸಾಧಕರಿಗೆ ಸನ್ಮಾನ; ಮಾಧ್ಯಮದ ಸವಾಲುಗಳ ಕುರಿತು ಗಂಭೀರ ಚಿಂತನೆ
ಹೊನ್ನಾವರದ ಯುವಕನ ಜಾಗತಿಕ ಸಾಧನೆ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಮಿಂಚಿ NVIDIA ಕಂಪನಿಯಲ್ಲಿ ವಾರ್ಷಿಕ ₹2.60 ಕೋಟಿ ಪ್ಯಾಕೇಜ್ ಪಡೆದ ಪೃಥ್ವಿರಾಜ್!
ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಸಿಬ್ಬಂದಿ ಕೊರತೆ: ಸುರಕ್ಷತೆ ಬಗ್ಗೆ ದೇವರಾಜ ಅರಸು ವಿಚಾರ ವೇದಿಕೆ ತೀವ್ರ ಕಳವಳ