ಹೊನ್ನಾವರ: ರಾಷ್ಟ್ರೀಯ ಸ್ವಯ ಸೇವಕ ಸಂಘ ನೂರು ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಹಿಂದೂ ಸಮ್ಮೇಳನಗಳು ಎಲ್ಲ ಮಂಡಲಗಳಲ್ಲಿ ನಡೆಯುತ್ತಿವೆ. ಫೆಬ್ರವರಿ 21 ರಂದು ಕವಲಕ್ಕಿಯಲ್ಲಿ ಹಡಿನಬಾಳ ಮಂಡಲದ ಹಿಂದೂ ಸಮ್ಮೇಳನ, ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸಂಸ್ಥಾನ ಮನ್ನೆಲೆಮಾವಿನ ಮಠದ ಶ್ರೀಗಳಾದ ಶ್ರೀ ಶ್ರೀ ಮಾಧವಾನಂದ ಭಾರತಿ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ನಡೆದಿತ್ತು. ಅಚ್ಚುಕಟ್ಟಾಗಿ ನಡೆದಿದ್ದ ಸಮ್ಮೇಳನ ಈಗ ಸಮಾಜಮುಖಿ ಕಾರ್ಯಕ್ಕಾಗಿ ಮಾದರಿಯೆನಿಸಿಕೊಂಡಿದೆ. ಸಮ್ಮೇಳನದ ಖರ್ಚು- ವೆಚ್ಚಗಳಿಗೆಂದು ಹಡಿನಬಾಳ ಮಂಡಲದ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಹಣದಲ್ಲಿ ಉಳಿದ 50,000 ರೂಪಾಯಿ ಹಣವನ್ನು, ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಎರಡು ವರ್ಷದ ಬಾಲಕಿ ಹಾಡಗೇರಿಯ ಛಾಯಾ ಇವಳ ಚಿಕಿತ್ಸೆಗಾಗಿ ಹಡಿನಬಾಳ ಮಂಡಲದ ಸಮಸ್ತ ಹಿಂದುಗಳ ಪರವಾಗಿ ನೀಡಲಾಯಿತು.

ಛಾಯಾಳ ಪಾಲಕರು ಹಡಿನಬಾಳ ಗ್ರಾಮದ ಹಾಡಗೇರಿಯವರಾಗಿದ್ದು ತಂದೆ ರಿಕ್ಷಾ ಚಾಲಕರಾಗಿದ್ದು ಈಗ ಯಾವುದೇ ಆರ್ಥಿಕ ಮೂಲ ಇರುವುದಿಲ್ಲ.
ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚ 30 ಲಕ್ಷ ರೂ. ಮೀರಬಹುದು ಎಂದು ವೈದ್ಯರು ಹೇಳಿರುತ್ತಾರೆ. ಈಗಾಗಲೇ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಆಘಾತ ಅನುಭವಿಸಿರುವ ಪಾಲಕರೊಟ್ಟಿಗೆ ಕೈಲಾದ ಸಹಾಯ ಮಾಡುವ ಮೂಲಕ ಸಮಾಜ ನಿಲ್ಲಬೇಕು ಎಂದು ಸಮಿತಿಯವರು ಮನವಿ ಮಾಡಿಕೊಂಡಿರುತ್ತಾರೆ.
ಮಗುವಿನ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡುವವರು ಯೂನಿಯನ್ ಬ್ಯಾಂಕ್ ಖಾತೆ ಸಂ. 520101199358571
ಹೆಸರು ಬಾಬು ನಾರಾಯಣ ನಾಯ್ಕ
ಐ.ಎಫ್.ಸಿ. ಸಂಖ್ಯೆ: UBIN0903469 ಹೆಚ್ಚಿನ ಮಾಹಿತಿಗಾಗಿ 6361434523 ಸಂಪರ್ಕಿಸಬಹುದು.
ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಬೆಂಗಳೂರು ಖಗೋಳ ಸಂಘ ಮತ್ತು ಹೊನ್ನಾವರ ಫೌಂಡೇಶನ್ನಿಂದ ‘ತಾರಾ ವೀಕ್ಷಣೆ’ ಕಾರ್ಯಕ್ರಮ
ಬೇಸಿಗೆಯ ಆರಂಭದಲ್ಲೆ ಕುಡಿಯುವ ನೀರಿಗಾಗಿ ಪರದಾಟ
ಭಟ್ಕಳದ ಕರಿಕಲ್ಲಿನಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಹಾಗೂ ರಾಮತಾರಕ ಮಹಾಯಜ್ಞ