ಗೋಕರ್ಣ : ಶುದ್ಧ ಹಸ್ತದ ಉದಾರತೆಯ ಅಪರೂಪದ ಜನನಾಯಕನಾಗಿ ಸಾರ್ವಜನಿಕ ವಲಯದಲ್ಲಿ ವಿಶೇಷ ಮನ್ನಣೆಗೆ ಪಾತ್ರರಾಗಿದ್ದ ಸಜ್ಜನಿಕೆಯ ಅಪರೂಪದ ವ್ಯಕ್ತಿತ್ವದ ತೊರ್ಕೆಯ ಆನಂದ ನಾಗಪ್ಪ ಕವರಿಯವರನ್ನು ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಮಾನಪಲಕದೊಂದಿಗೆ ಆಪ್ತವಾಗಿ ನಾಡವರ ಸಂಘದ ಶ್ರೀ ರಾಮಕೃಷ್ಣ ಮಂದಿರದಲ್ಲಿ ಮಾನಿಸಲಾಯಿತು.

ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದ ಸಂಸ್ಥಾಪಕ ಗೌರವಾಧ್ಯಕ್ಷರಾದ ಸಂಸ್ಕೃತ ಅಧ್ಯಾಪಕರಾಗಿರುವ ಮಂಜುನಾಥ ಗಾಂವಕರ್ ಬರ್ಗಿಯವರು ಮಾತನ್ನಾಡಿ, ತೊರ್ಕೆ ಆನಂದಣ್ಣನ ಮಹಾಕಾಯದೊಳಗಿನ ಅಪರೂಪದ ಮನುಷ್ಯನಲ್ಲಿಯ ತಾಯ್ತಂದೆಯರಲ್ಲಿನ ಗೌರವ, ಕೌಟುಂಬಿಕವಾದ ಶ್ರದ್ಧೆ, ಹುಟ್ಟೂರಿನ ಕುರಿತಾದ ಸೆಳೆತ, ದೇವರು – ದೈವದಲ್ಲಿನ ಭಕ್ತಿ, ಸಮಾಜಮುಖಿಯಾದ ಮಿಡಿತ, ನಾಡು-ನುಡಿ-ಕಲೆ-ಸಂಸ್ಕೃತಿ- ಯಕ್ಷಗಾನ-ಸಂಸ್ಕೃತ ಇತ್ಯಾದಿಗಳ ಬಗೆಗಿನ ಅಪಾರವಾದ ಅಭಿಮಾನ ಮತ್ತು ಸಮರ್ಪಣೆಯ ಸಜ್ಜನಿಕೆಯು ಅಭಿನಂದನೀಯವನ್ನಾಗಿಸಿದೆ ಎಂದರು.
ಈ ಸಂದರ್ಭದಲ್ಲಿ ಸವ್ಯಸಾಚಿ ಮುಖಂಡ ಪ್ರದೀಪ ನಾಯಕ್ ದೇವರಬಾವಿ, ಕನ್ನಡ ಭಾರತೀ ಪ್ರಪಂಚದ ಸಂಚಾಲಕರಾದ ನಾರಾಯಣ ನಾಗು ನಾಯಕ, ತಾಲ್ಲೂಕಾ ಪಂಚಾಯತದ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಜೇಂದ್ರ ಲಕ್ಷ್ಮೀನಾರಾಯಣ ಭಟ್ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ ನಂದನ ನಾರಾಯಣ ನಾಯಕ ಮೊದಲಾದವರಿದ್ದರು.

More Stories
ಮನೆ- ಮನವನ್ನು ಬೆಳಗಲು ಮನೆಗೊಂದು ಗ್ರಂಥಾಲಯ ಅವಶ್ಯ. -ಡಾ. ಮಾನಸ
ಬರ್ಗಿಯಲ್ಲಿ ಮನ್ನಣೆಯ ಮಣೆಯೇರಿದ ಗಾಯತ್ರಿ ಗೌಡ
ಡಾಕ್ಟರ್ ಮಾಮನೆಂದು ಇನ್ನು ಯಾರನ್ನು ಕರೆಯಲಿ? . ಅವರಿಗೆ ಅವರೇ ಸಾಟಿಯಾಗಿದ್ದರು.