ಕೃಷ್ಣರಾಜಪೇಟೆ : ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾಗಿ ವರ್ಗಾವಣೆಗೊಂಡು ಆಗಮಿಸಿರುವ, ದಕ್ಷ ಪೊಲೀಸ್ ಅಧಿಕಾರಿ ಸುನಿಲ್ ಕುಮಾರ್ ಅವರನ್ನು ಕೆ.ಆರ್.ಪೇಟೆ ಪಟ್ಟಣದ ಡಾಬಾ ಹೋಟೆಲ್ ಗಳ ಮಾಲೀಕರು ಸರಳ ಸಮಾರಂಭದಲ್ಲಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. ಕೃಷ್ಣರಾಜಪೇಟೆ ಪಟ್ಟಣದ ಡಾಬಾ ಹೋಟೆಲ್ ಗಳ ಮಾಲೀಕರಾದ ಕೋಮನಹಳ್ಳಿ ಮಂಜುನಾಥ, ಹೆಮ್ಮನಹಳ್ಳಿ ಕುಮಾರ್, ಸಾಧುಗೋನಹಳ್ಳಿ ನಟೇಶ್ ಕುಮಾರ್, ಕೆ.ಆರ್. ಪೇಟೆ ಕಬಾಬ್ ರಘು ಸೇರಿದಂತೆ ವಿವಿಧ ಡಾಬಾಗಳ ಮಾಲೀಕರು ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಬಾ ಮತ್ತು ಹೋಟೆಲ್ ಗಳ ಮಾಲೀಕರು ಕಾನೂನು ಸುವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸಬೇಕು, ರಾತ್ರಿ 11:00ಯ ವೇಳೆಗೆ ಕಡ್ಡಾಯವಾಗಿ ಡಾಬಾ ಗಳನ್ನು ಬಂದ್ ಮಾಡಬೇಕು. ಅಪರಿಚಿತ ಅನುಮಾನಾಸ್ಪದ ವ್ಯಕ್ತಿಗಳು ಡಾಬಾದಲ್ಲಿ ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ನಾಗರಿಕ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಸುನಿಲ್ ಕುಮಾರ್ ಮನವಿ ಮಾಡಿದರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಬಡ ರೈತನ ಮಗ, ವಕೀಲ ಕಾಮನಹಳ್ಳಿ ಬೋರೇಗೌಡರ ಜೀವನ ಸಾಧನೆಗೆ ಗವಿಮಠ ಶ್ರೀಗಳ ಮೆಚ್ಚುಗೆ..
ಮಾರ್ಚ್ 11ರಿಂದ ಕರ್ನಾಟಕ ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಮುಷ್ಕರ..
ಸೊಳ್ಳೇಪುರ ಹಾಲು ಉತ್ಪಾದಕ ಸಹಕಾರ ಸಂಘ ಕಾಂಗ್ರೆಸ್ ವಷಕ್ಕೆ