ಕೃಷ್ಣರಾಜಪೇಟೆ: ಒಬ್ಬ ಸಾಮಾನ್ಯ ಬಡ ರೈತ ಕುಟುಂಬದಲ್ಲಿ ಜನಿಸಿದ ಬೋರೇಗೌಡ ಅವರು ಸತತ ಪರಿಶ್ರಮದಿಂದ ವಕೀಲ ವೃತ್ತಿ ನಡೆಸಿ ಶ್ರೀಗುರು ಸದನ ಎಂಬ ಭವ್ಯ ಬಂಗಲೆಯನ್ನು ಕಟ್ಟಿಸಿ, ನಾಗರೀಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಕಾಪನಹಳ್ಳಿ ಗವಿಮಠ ಸುಕ್ಷೇತ್ರದ ಪೀಠಾಧಿಪತಿ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ ಹೇಳಿದರು. ಅವರು ಕೃಷ್ಣರಾಜಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿ ವಕೀಲ ಕಾಮನಹಳ್ಳಿ ಬೋರೇಗೌಡ ಅವರು ನೂತನವಾಗಿ ನಿರ್ಮಿಸಿದ ಶ್ರೀಗುರು ಸದನ, ಶ್ರೀ ಭೈರವೇಶ್ವರ ನಿಲಯದ ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಒಬ್ಬ ಸಾಮಾನ್ಯ ರೈತನ ಮಗನಾಗಿ ಬಡತನದ ಬೇಗೆಯಲ್ಲಿ ನೊಂದು ಬೆಂದು ಕೂಲಿ ಕಂಬಳವನ್ನು ಮಾಡಿ, ಛಲ ಬಿಡದ ತ್ರಿವಿಕ್ರಮನಂತೆ ಕಷ್ಟಪಟ್ಟು ವಕೀಲ ಪರೀಕ್ಷೆ ಪಾಸು ಮಾಡಿ, ತಾಲೂಕಿನ ಖ್ಯಾತ ವಕೀಲರಾಗಿ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಬೋರೇಗೌಡ ಅವರು ಬಡತನವೆಂಬ ಪೆಡಂ ಭೂತವನ್ನು ತನ್ನ ಇಚ್ಛಾಶಕ್ತಿಯ ಮೂಲಕ ಹೊಡೆದೋಡಿಸಿ ತಮ್ಮ ಶ್ರಮದ ದುಡಿಮೆಯ ಮೂಲಕ ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿ ಭವ್ಯವಾದ ಬಂಗಲೆ ಶ್ರೀಗುರು ಸದನ, ಭೈರವೇಶ್ವರ ನಿಲಯವನ್ನು ನಿರ್ಮಿಸಿ ಗುಡಿಸಲು ಕೊಟ್ಟಿಗೆ ಮನೆಯ ಜೀವನಕ್ಕೆ ವಿದಾಯ ಹೇಳಿರುವುದು ನಮ್ಮೆಲ್ಲರಿಗೂ ಮಾದರಿಯಾಗಿದೆ. ಬಡತನದಲ್ಲಿ ಹುಟ್ಟಿದರೂ ತನ್ನ ಶ್ರಮದ ದುಡಿಮೆಯ ಮೂಲಕ ಬಡತನಕ್ಕೆ ವಿದಾಯ ಹೇಳಿ, ಸ್ಥಿತಿವಂತನಾಗಿ ಸಮಾಜದಲ್ಲಿನ ನೋಂದವರು ಹಾಗೂ ಬಡ ಜನರಿಗೆ ಕೈಲಾದ ಸಹಾಯವನ್ನು ಮಾಡಿ ತಾನು ವಾಸ ಮಾಡಲು ಭವ್ಯವಾದ ಮನೆ “ಶ್ರೀಗುರು ಸದನ, ಶ್ರೀಭೈರವೇಶ್ವರ ನಿಲಯ”ವನ್ನು ಕಟ್ಟಿಕೊಂಡಿರುವ ಬೋರೇಗೌಡರು ಯುವ ಜನರಿಗೆ ಆದರ್ಶವಾಗಿದ್ದಾರೆ. ಬಡತನದಲ್ಲಿ ಹುಟ್ಟಿ, ಯಾವುದೇ ಸಾಧನೆ ಮಾಡದೆ ಸತ್ತರೆ ನಾವು ಬಡತನಕ್ಕೆ ಮಾಡುವ ಅಪಮಾನವಾಗಿದೆ. ಸಮಾಜದಲ್ಲಿ ನೊಂದ ಬಡಜನರು ಹಾಗೂ ತುಳಿತಕ್ಕೊಳಗಾದವರಿಗೆ ಸಾಮಾಜಿಕ ನ್ಯಾಯವನ್ನು ನೀಡುವ ಕಾಯಕವನ್ನು ವಕೀಲ ವೃತ್ತಿಯ ಮೂಲಕ ಮಾಡುತ್ತ, ಎಲ್ಲರಿಗೂ ಆದರ್ಶವಾಗಿರುವ ಬೋರೇಗೌಡರ ಜೀವನ ಹಾಗೂ ಜೀವನದ ಆದರ್ಶಗಳು ಯುವ ಜನರಿಗೆ ಮಾದರಿಯಾಗಿವೆ ಎಂದು ಅಭಿಮಾನದಿಂದ ತಿಳಿಸಿ ಬೋರೇಗೌಡ ದಂಪತಿಗಳಿಗೆ ಶುಭ ಹಾರೈಸಿದರು.
ಮಹಾರಾಷ್ಟ್ರದ ಕೊಲ್ಲಾಪುರದ ಅವಧೂತ ಮಹಾರಾಜ ಜೀ, ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ನಾಗಮಂಗಲ ಲಕ್ಷ್ಮೀನಾರಾಯಣ, ಸಮಾಜ ಸೇವಕ ಹಾಗೂ ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ಪುರಸಭೆ ಸದಸ್ಯ ಶಾಮಿಯಾನ ತಿಮ್ಮೇಗೌಡ, ಕೃಷ್ಣರಾಜಪೇಟೆ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳಾದ ಬಿ.ಸಿ. ದಿನೇಶ್, ಶ್ರೀನಿವಾಸ ಕೇಸರಿ, ಬಳ್ಳೇಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚೌಡೇನಹಳ್ಳಿ ನಾಗರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಪದ್ಮೇಶ್ ಸೇರಿದಂತೆ ನೂರಾರು ವಕೀಲರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ತನ್ನ ಶ್ರಮದ ದುಡಿಮೆಯ ಮೂಲಕ ಧನವಂತರಾಗಿರುವ ಬಡ ಬೋರೇಗೌಡರಿಗೆ ಶುಭ ಹಾರೈಸಿದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್ ಅವರಿಗೆ ಹೃದಯಸ್ಪರ್ಶಿ ಸನ್ಮಾನ..ಅಭಿನಂದನೆ..
ಮಾರ್ಚ್ 11ರಿಂದ ಕರ್ನಾಟಕ ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಮುಷ್ಕರ..
ಸೊಳ್ಳೇಪುರ ಹಾಲು ಉತ್ಪಾದಕ ಸಹಕಾರ ಸಂಘ ಕಾಂಗ್ರೆಸ್ ವಷಕ್ಕೆ