ಕಾರ್ಕಳ, : ಕಳೆದ ಎರಡೂವರೆ ವರ್ಷದ ಹಿಂದೆ ರಾಜ್ಯ ದಲ್ಲಿ ಕಾಂಗ್ರೆಸ್ ಆಡಳಿತ ಬಂದ ನಂತರ ಜನಸಾಮಾನ್ಯರ ಜೀವನ ಅಸ್ತ ವಸ್ಥ ವಾಗಿದೆ.
ಇದನ್ನು ಖಂಡಿಸಿ ನಾವು ಇದೇ ತಿಂಗಳ 14ರಂದು ಸ್ಥಳೀಯ ಮಟ್ಟದ ಜನಸಾಮಾನ್ಯರಿಗೆ ಆಗುವ ಸಮಸ್ಯೆಗಳನ್ನು ತಿಳಿಸಲು ಸಂಜೆ ಪುರಸಭೆ ವ್ಯಾಪ್ತಿಯಲ್ಲಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿ ಖಂಡಿಸಿ ಕಾರ್ಕಳ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಮಾಡುವುದಾಗಿ ಬಿಜೆಪಿ ಕ್ಷೇತ್ರಧ್ಯಕ್ಷ ನವೀನ್ ನಾಯಕ್ ಕಾರ್ಕಳಪತ್ರಿಕ ಭವನದಲ್ಲಿ ಜರುಗಿದ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೆಂಪುಕಲ್ಲು ಮರಳು ಸಾಗಾಟಕ್ಕೆ ಸರಿಯಾದ ನೀತಿ ಇಲ್ಲದೆ ಪೂರೈಕೆಯಲ್ಲಿ ವ್ಯತಾಯ.
ದುಡಿಯುವ ವರ್ಗಕ್ಕೆ ಕೆಲಸವಿಲ್ಲದೆ ಬದುಕು ದುಸ್ತರ.ಈ ಸ್ವತ್ತು ಖಾತೆ 9/11 ಏಕ ವಿನ್ಯಾಸ ಅನುಮೋದನೆ ಸಮಸ್ಯೆಗಳು ಅಕ್ರಮ ಸಕ್ರಮ ಅರ್ಜಿಗಳ ತಿರಸ್ಕಾರ,94 c ಹಕ್ಕು ಪತ್ರ ನೀಡುವಲ್ಲಿ ಅನಗತ್ಯ ವಿಳಂಬಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳಿಗ್ಗಿಲ್ಲ ಅವಕಾಶ.
ಮೂರು ವರ್ಷಗಳಲ್ಲಿ ಆಶ್ರಯ ಮನೆಗಳ ಮಂಜುರಾತಿ ಇಲ್ಲ, ವಿಧವಾ ವೇತನ ವೃದ್ಯಾಪ ವೇತನ ಸಂಧ್ಯಾ ಸುರಕ್ಷಾ ಪಿಂಚಣಿ ರದ್ದತಿ ಅಘೋಷಿತ ಲೋಡ್ ಶೆಡ್ಡಿಂಗ್, ನಿರಂತರ ವಿದ್ಯುತ್ ದರ ಏರಿಕೆ,ರಾಜ್ಯ ಬಜೆಟ್ ನಲ್ಲಿ ಕರಾವಳಿಯನ್ನು ಸಂಪೂರ್ಣ ನಿರ್ಲಕ್ಷ ಅಭಿವೃದ್ಧಿಗೆ ಅನುದಾನವಿಲ್ಲ ಯೋಜನೆಗಳ ಅನುಷ್ಠಾನವಿಲ್ಲ ಮುಸ್ಲಿಂ ಓಲೈಕೆ ಹಾಗೂ ದ್ವೇಷ ರಾಜಕಾರಣ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳ ದಾಖಲೆ ಅಧಿಕಾರ ಹಂಚಿಕೆ ನೆಪದಲ್ಲಿ ಹಳಿತಪ್ಪಿದ ಆಡಳಿತ ರಾಜ್ಯದಂತ ಹದೆಗೆಟ್ಟ ಸುವ್ಯವಸ್ಥೆ, scp. Tsp. ಅನುದಾನ ದುರ್ಬಳಕೆ ಸಮುದಾಯದ ಅನ್ಯಾಯ ಗ್ರಾಮ ಪಂಚಾಯತಿಯಿಂದ ವಿಧಾನಸೌಧದ ವರೆಗೆ ಭ್ರಷ್ಟಾಚಾರ ಹಾಗೂ ದರ್ಪದ ಆಡಳಿತ ಇದನ್ನೆಲ್ಲ ವಿರೋಧಿಸಿ ಬೃಹತ್
ಪ್ರತಿಭಟನೆಯನ್ನು ಮಾಡುವುದಾಗಿ ಹೇಳಿದರು.
ನಿಟ್ಟೆಯಲ್ಲಿ ಸುಮಾರು 15 ಎಕರೆ ಸ್ಥಳವನ್ನು ಜವಳಿ ಪಾರ್ಟಿಗೆ ಗುರುತಿಸಲಾಗಿದೆ. ಜವಳಿ ಪಾರ್ಕ್ ನಿರ್ಮಿಸಲು ಎರಡು ಸಲ ಟೆಂಡರ್ ಅನ್ನು ಕರೆಯಲಾಗಿದೆ. ಈ ಜವಳಿ ಪಾರ್ಕ್ ರಾಜ್ಯ ಸರ್ಕಾರದ ಮಟ್ಟದಲ್ಲಿ ಆಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮೋರ್ಚನಾಯಕ ವಿಕ್ಯಾತ್ ಶೆಟ್ಟಿ,ರಾಕೇಶ್ ಶೆಟ್ಟಿ ಬಿಜೆಪಿ ಯುವ ಮೋರ್ಚ ಕಾರ್ಕಳ ತಾಲೂಕು
ಸತೀಶ್ ಪೂಜಾರಿ ಪ್ರಧಾನ ಕಾರ್ಯದರ್ಶಿ, ರವೀಂದ್ರ ಮೋಯ್ಲಿ ಬಿಜೆಪಿ ವಕ್ತಾರಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

More Stories
ಶ್ರೀ ವೆಂಕಟರಮಣ ಮಹಿಳಾ ಕಾಲೇಜ್ ನಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ
ದಿ. ನಾಸಿರ್ ಹುಸೇನ್ ರಿಗೆ ನುಡಿ ನಮನ
ಕೇಂದ್ರ ಸರಕಾರದ 4 ಲೇಬರ್ ಕೋಡ್ ವಿರೋಧಿಸಿ ರಾಜ್ಯ ಸರಕಾರ ಮತ್ತು ಕಾರ್ಮಿಕ ಸಚಿವಾಲಯಕ್ಕೆ ಅಕ್ಷೇಪಣೆ ಪತ್ರ ಸಲ್ಲಿಕೆ—- ಸಿಐಟಿಯು