

ಕಾರ್ಕಳ : ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಹಾಗೂ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಇದರ ಜಂಟಿ ಆಶ್ರಯದಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಜರಗಿತು.

ಸಂಪನ್ಮೂಲ ವ್ಯಕ್ತಿ ಗಳಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾರ್ಕಳ ಇದರ ಸಂಚಾಲಕಿ ರಾಜಯೋಗಿನಿ ಬ್ರಹ್ಮ ಕುಮಾರಿ ವಿಜಯಲಕ್ಷ್ಮಿ ಯವರು ತಮ್ಮ ಮಾತಿನಲ್ಲಿ ಮಹಿಳಾ ಸಬಲೀಕರಣ ಪುರಷರ ವಿರುದ್ಧ ಸ್ಪರ್ಧೆಯಲ್ಲ, ಮಹಿಳೆಯರು ತಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸಬೇಕು, ತಮ್ಮ ಅಂತರಿಕ ಸೌಂದರ್ಯ ವ್ಯಕ್ತಿತ್ವ ಬೆಳವಣಿಗೆ ಯತ್ತ ಗಮನ ಹರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗೀತಾ ಜಿ ವಹಿಸಿದ್ದರು. ಮಹಿಳಾ ಸಬಲೀಕರಣದ ನಿರ್ದೇಶಕಿ ವಿನುತಾ ಕಾಮತ್ ಸ್ವಾಗತಿಸಿ ದರು. ಕುಮಾರಿ ಸುಚಿತ್ರ ವಂದಿಸಿದರು. ಕುಮಾರಿ ಮಂಜುಳಾ ಕಾರ್ಯಕ್ರಮ ನಿರ್ದೇಸಿದರು.

ವರದಿ : ಅರುಣ ಭಟ್ ಕಾರ್ಕಳ


About The Author




More Stories
ಅಧಿಕಾರಿಗಳು ಬುದ್ಧಿವಂತಿಕೆಯಿಂದ ಮಾತ್ರವಲ್ಲ, ಹೃದಯವಂತಿಕೆಯಿಂದಲೂ ಕೆಲಸ ಮಾಡಲಿ: ಸಚಿವ ಯು.ಟಿ. ಖಾದರ್
ಕಾರ್ಕಳದಲ್ಲಿ ರಸ್ತೆ ದುಸ್ಥಿತಿ ವಿರುದ್ಧ ಕಾಂಗ್ರೆಸ್ನ 20 ಕಿ.ಮೀ. ಬೃಹತ್ ಜಾಥಾ! ಬಿಜೆಪಿ ವಿರುದ್ಧ ಆಕ್ರೋಶ
ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದಲ್ಲಿ ವೈಭವದ ಜಾತ್ರಾ ಮಹೋತ್ಸವ – ವ್ಯಾಘ್ರ ಚಾಮುಂಡಿ ದೈವದ ಭಂಡಾರ ಮೆರವಣಿಗೆ