March 29, 2026

ಗೋ ಕಳ್ಳರ ಮೇಲೆ ಗೂಂಡಾ ಖಾಯ್ದೆ ಹಾಕಿ

ಹೊನ್ನಾವರ : ತಾಲೂಕಿನಲ್ಲಿ ನಿರಂತರವಾಗಿ ಗೋ ಹತ್ಯೆ, ಕಳ್ಳತನ ನಡೆಯುತ್ತಿದೆ. ಗೋ ಕಳ್ಳರ ಮೇಲೆ ಗೂಂಡಾ ಖಾಯ್ದೆ ಹಾಕಿ ಗಡಿಪಾರು ಮಾಡಬೇಕು ಎಂದು ಹಿಂದು ಜಾಗರಣ ವೇದಿಕೆಯ ಪ್ರಮುಖ ಸಂಜು ಶೇಟ್ ಆಗ್ರಹಿಸಿದರು.
ಅವರು ಹಿಂದು ಜಾಗರಣ ವೇದಿಕೆ ವತಿಯಿಂದ ತಾಲೂಕಿನ ವಂದೂರು ಜಡ್ಡಿಗದ್ದೆಯಲ್ಲಿ ನಡೆದ ಗೋ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆ ಮಾಡುವಂತೆ ಪೊಲೀಸ್ ಇಲಾಖೆಗೆ ಮನವಿ ನೀಡಿ ಮಾತನಾಡಿದರು.

ಪಟ್ಟಣದ ಬಂದರು ಪ್ರದೇಶ, ಸೆಂಟ್ ಥಾಮಸ್ ಮೈದಾನ ಸಮೀಪ ನಿರಂತರವಾಗಿ ಗೋ ಕಳ್ಳತನ ಆಗುತ್ತಿದೆ. ತಡೆಯಲು ಹೋದರೆ ತಲವಾರ್ ತೆಗೆದು ಹೆದರಿಸಿ ಗೋ ಕಳ್ಳತನ ಮಾಡುತ್ತಾರೆ. ಇದು ಹಿಂದು ಸಮಾಜಕ್ಕೆ, ಗೋ ಭಕ್ತರಿಗೆ ಅಘಾತ ಉಂಟುಮಾಡಿದೆ. ಗೋ ಕಳ್ಳರಿಂದ ಭಯಾನಕ ವಾತಾವರಣ ಸೃಷ್ಟಿಯಾಗಿದೆ. ಗೋ ಕಳುವು ವಿರೋಧ ಮಾಡಿದರೆ, ತಕ್ಷಣ ತಲವಾರ್ ತೆಗೆದು ಹೆದರಿಸಿದ ಉದಾಹರಣೆಗಳಿವೆ. ಹೊನ್ನಾವರ ತಾಲೂಕು ಕರಾವಳಿ ಜಿಲ್ಲೆ ಅತೀ ಸೂಕ್ಷ್ಮ ಪ್ರದೇಶವಾಗಿದೆ. ಇತ್ತೀಚಿಗೆ ಸಾಲಕೋಡ ಕೊಂಡಾಕುಳಿ ಗರ್ಭದ ಗೋ ಹತ್ಯೆ ಸೇರಿ ಅನೇಕ ಪ್ರಕರಣ ನಡೆದಿದೆ ಎಂದರು.

ವಂದೂರು ಜಡ್ಡಿಗದ್ದೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಗೋ ಹತ್ಯೆ ಮಾಡಿ ಮಾಂಸ ತೆಗೆದುಕೊಂಡು ಹೋಗಿ, ಕಳೆಬರಹ ಬಿಟ್ಟು ಹೋಗಿದ್ದಾರೆ. ಈ ಆರೋಪಿಗಳ ಪತ್ತೆ ಮಾಡಿ ಸೂಕ್ತ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು. ಗೂಂಡಾ ಖಾಯ್ದೆ ಹಾಕಿ ಗಡಿಪಾರು ಮಾಡಬೇಕು. ಗೋ ಭಕ್ತರ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ. ಗೋ ಕಳುವು ಮಾಡುವವರು ಸಮಾಜದ ಮದ್ಯದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಅಂತವರ ಹೆಡೆಮುರಿ ಕಟ್ಟುವ ಕೆಲಸ ಆಗಬೇಕು. ಆಗದೆ ಇದ್ದಲ್ಲಿ ಬೀದಿಗೆ ಇಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಹಿಂದು ಸಮಾಜಕ್ಕೆ ಇದೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತಿರಿ ಎನ್ನುವ ಭರವಸೆ ಇದೆ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಭಟ್ಕಳ ಡಿ. ವೈ. ಎಸ್ ಪಿ. ಬಿ ಗಿರೀಶ ಗೋ ಪ್ರಕರಣ ವಿಚಾರ ಬಂದಾಗ ಇತ್ತೀಚಿನ ದಿನದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದೇವೆ. ಮುಂದಿನ ದಿನದಲ್ಲೂ ನೀವು ಪೊಲೀಸ್ ಇಲಾಖೆ ಮೇಲೆ ಇಟ್ಟಿರುವ ಭರವಸೆ ಹುಸಿ ಆಗಲು ಬಿಡುವುದಿಲ್ಲ. ಆರೋಪಿಗಳ ಪತ್ತೆ ಮಾಡೆ ಮಾಡ್ತೇವೆ. ಯಾರು ಸಾಮಿಲು ಇದ್ದಾರೆ ಎಂದು ವಿಚಾರಣೆ ಮಾಡುತ್ತೇವೆ. ಗಡಿ ಪಾರು ಅಥವಾ ಬೇರೆ ಯಾವ ರೀತಿ ಮಾಡಬೇಕು ಹೇಳಿ ಕಾನೂನಿನಲ್ಲಿ ಅವಕಾಶ ಇದೆ ಹಾಗೆ ಮಾಡುತ್ತೇವೆ. ಜನರು ಸಹಕಾರ ಕೊಡಬೇಕು. ಗ್ರಾ. ಪಂ. ಆಯ್ದ ಪ್ರಮುಖ ಸ್ಥಳದಲ್ಲಿ ಸಿ. ಸಿ. ಕ್ಯಾಮರಾ ಅಳವಡಿಸಿ ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ನಗರ ಸಂಚಾಲಕ ಅರ್ಜುನ ರಾಯ್ಕರ್, ಸಹ ಸಂಚಾಲಕ ರಾಹುಲ್ ತಾಂಡೇಲ್, ಜಿಲ್ಲಾ ಸಂಯೋಜಕ ಸುಬ್ರಹ್ಮಣ್ಯ ಉಡದಂಗಿ, ಸಂಘಟನೆಯ ಪ್ರಮುಖರಾದ ವಿಜಯ ಕಾಮತ್, ಶಿವರಾಜ ಮೇಸ್ತ, ಯೋಗೀಶ ಮೇಸ್ತ, ಗೋವಿಂದ ಗೌಡ, ಮಂಜು ಶೆಟ್ಟಿ, ಉಮೇಶ ಸಾರಂಗ, ಹರಿಶ್ಚಂದ್ರ ನಾಯ್ಕ ಮಾವಿನಕುರ್ವಾ, ವಿವೇಕ ಗೌಡ, ಮಣಿಕಂಠ ಶೆಟ್ಟಿ, ವಿನೋದ ಗೌಡ ಬಂಗಾರಮಕ್ಕಿ ಮತ್ತಿತರರು ಇದ್ದರು.

About The Author

error: Content is protected !!