ಹೊನ್ನಾವರ: ಪಟ್ಟಣದ ಬಸ್ ನಿಲ್ದಾಣ ಸಮೀಪದ ಜೇನು ಸೊಸೈಟಿ ಬಿಲ್ಡಿಂಗನಲ್ಲಿರುವ ಯು.ಕೆ.ಸೌಹಾರ್ದ ಸೊಸೈಟಿ ಲಿಮಿಟೆಡ್ ಯಲ್ಲಾಪುರ ಇದರ ಹೊನ್ನಾವರ ಶಾಖೆಯಲ್ಲಿ ರವಿವಾರ ಮಧ್ಯಾಹ್ನ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಹಾನಿ ಸಂಭವಿಸಿದೆ.
ಬ್ಯಾಂಕನಲ್ಲಿ ಅಳವಡಿಸಿದ ಸಿಸಿ ಕ್ಯಾಮರಾ ವೈಯರನಲ್ಲಿ ಬೆಂಕಿ ಕಂಡಾಗ ದಟ್ಟದಾದ ಹೊಗೆ ಆವರಿಸಿದೆ. ಸ್ಥಳಿಯರು ಬೆಂಕಿಯನ್ನು ಗಮನಿಸಿ ಪೊಲೀಸರು ಹಾಗೂ ಅಗ್ನಿಶಾಮಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಬೆಂಕಿ ನಂದಿಸುವ ಮೂಲಕ ಬೆಂಕಿ ಕೆನ್ನಾಲಿಗೆ ಉಳಿದ ಅಂಗಡಿಗಳಿಗೆ ವ್ಯಾಪಿಸಿದಂತೆ ನೋಡಿಕೊಂಡರು. ಬ್ಯಾಂಕ್ ಒಳಗಿನ ಕಾಗದಪತ್ರಗಳು ಪೀಠೋಪಕರಣಗಳಿಗೆ ಹಾನಿ ಉಂಟಾಗಿರುದಾಗಿ ತಿಳಿದುಬಂದಿದೆ. ರವಿವಾರ ರಜೆ ಇದ್ದ ಕಾರಣ ಸಾರ್ವಜನಿಕರು ಆಗಮಿಸದೇ ಇರುವುದರಿಂದ ದೊಡ್ಡ ಅನಾಹುತ ತಪ್ಪಿದೆ.

More Stories
ಕಾಸರಕೋಡ್ ಬೀಚಿನಲ್ಲಿ 102 ಕಡಲಾಮೆ ಮರಿ ಜನ್ಮ
ಉತ್ತಮ ಆರೋಗ್ಯ ಸುಸ್ಥಿರ ಸಂಪತ್ತು” ಆರೋಗ್ಯ ಮತ್ತು ಹೂಡಿಕೆ ಜಾಗೃತಿ ಕಾರ್ಯಕ್ರಮ
ಎ.ಸಿ.ಪಿ ಪಾಂಡುರಂಗ ಭಂಡಾರಿ ಇವರಿಗೆ ಮುಖ್ಯಮಂತ್ರಿಗಳ ಪೊಲೀಸ್ ಪದಕ.