March 31, 2026

ಜಿಲ್ಲಾ ಗವರ್ನರ್‌ ಅಧಿಕೃತ ಭೇಟಿ

ಕುಮಟಾದ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳಿಗೆ ಪ್ರಶಂಸೆ


ಕುಮಟಾ: ಲಯನ್ಸ್ ಅಂತಾರಾಷ್ಟ್ರೀಯ ಸಂಘಟನೆಯ ಜಿಲ್ಲಾ 317 ಬಿ ಯ ಜಿಲ್ಲಾ ಗವರ್ನರ್ PMJF ಲಯನ್ ಜೈಮೋಲ್ ಜೆ. ನಾಯ್ಕ್ ಅವರು ಲಯನ್ಸ್ ಕ್ಲಬ್ ಕುಮಟಾ ಕ್ಕೆ ಅಧಿಕೃತ ಭೇಟಿ ನೀಡಿ ಸಂಸ್ಥೆ ವತಿಯಿಂದ ನಡೆಯುತ್ತಿರುವ ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಮಟಾದ ಲಯನ್ಸ್ ಸೇವಾ ಭವನದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕುಮಟಾ ಅಧ್ಯಕ್ಷ ಲಯನ್ ಡಾ. ನಾಗರಾಜ್ ಭಟ್ ವಹಿಸಿದ್ದರು. ಜಿಲ್ಲಾ ಗವರ್ನರ್ ಅವರು ತಮ್ಮ ಭಾಷಣದಲ್ಲಿ ಲಯನ್ಸ್ ಸಂಘದ ಧ್ಯೇಯವಾದ “We Serve” ಎಂಬ ಸೇವಾ ಮನೋಭಾವದೊಂದಿಗೆ ಸದಸ್ಯರು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿರುವುದನ್ನು ಶ್ಲಾಘಿಸಿದರು.


ಈ ಸಂದರ್ಭದಲ್ಲಿ Lions Club of Kumta ವತಿಯಿಂದ ಶಾರದಾ ನಿಲಯ ಶಾಲೆಗೆ ನೀರು ಶುದ್ಧೀಕರಣ ಯಂತ್ರ (Water Filter) ಹಾಗೂ ಚಿತ್ರಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೀಲಿಂಗ್ ಫ್ಯಾನ್ ದೇಣಿಗೆಯಾಗಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಶಾಂತಿ ಮತ್ತು ಸಹಭಾವನೆ ಬೆಳೆಸುವ ಉದ್ದೇಶದಿಂದ ಆಯೋಜಿಸಿದ Peace Poster Contest ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯದರ್ಶಿ ಶ್ರೀಗಣೇಶ ನಾಯಕ ವರದಿ ವಾಚಿಸಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಮಾಜಿ ಗವರ್ನರ್ ಡಾ. ಗಿರೀಶ್ ಕುಚಿನಾಡ್, ಜಿಲ್ಲಾ ಕಾರ್ಯದರ್ಶಿ ಡಾ. ಕೀರ್ತಿ ನಾಯಕ, ರೀಜನಲ್ ಚೇರ್‌ಪರ್ಸನ್ ರಾಜೇಶ್ ಸಾಲೆಹಿತ್ತಲ, ಝೋನ್ ಚೇರ್‌ಪರ್ಸನ್ ಮಂಗಳ ನಾಯಕ, ಖಜಾಂಚಿ ಎಂ.ಎಂ. ಹೆಗಡೆ, ಕಾರ್ಯಕ್ರಮದ ಸಂಯೋಜಕ ಎಂ.ಕೆ. ಶಾನಭಾಗ ಸೇರಿದಂತೆ ಕ್ಲಬ್ ಸದಸ್ಯರು, ಇತರ ಕ್ಲಬ್ ನ ಪದಾಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.ಕಾರ್ಯಕ್ರಮಕ್ಕೂ ಮೊದಲು, ಗವರ್ನರ್ ಲಯನ್ಸ್ ಸಂಸ್ಥೆಯ ಲಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಯಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು

About The Author

error: Content is protected !!