ಬೆಂಗಳೂರು : ಇಲ್ಲಿನ ಭಾರತ ಸಂಸ್ಕೃತಿ ಪ್ರತಿಷ್ಠಾನವು ಆಯೋಜಿಸಿದ “ರಾಜ್ಯಮಟ್ಟದ ರಾಮಾಯಣ ಪರೀಕ್ಷೆ” ಯಲ್ಲಿ ಕುಮಟಾ ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಕಾವ್ಯ ಅರುಣ ಗಾವಡಿ 100ಕ್ಕೆ 100 , ಕಾಂಚನಾ ಕಮಲಾಕರ ಗಾವಡಿ 96, ಆಶಿತಾ ರಾಜು ಅರ್ವಣಕರ್ 95 , ರಮ್ಯಾ ಉಮೇಶ ಪಟಗಾರ 94 ಹಾಗೂ ಗೌತಮಿ ನಾರಾಯಣ ಹರಿಕಂತ್ರ 93 ಅಂಕಗಳನ್ನು ಪಡೆದು ಮೊದಲೈದು ಸ್ಥಾನಗಳನ್ನು ಹೊಂದಿ ಸಾಧನೆಯನ್ನು ಮೆರೆದಿದ್ದಾರೆ.
ಬರ್ಗಿ ಪ್ರೌಢ ಶಾಲೆಯ 33 ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದು, 15 ವಿದ್ಯಾರ್ಥಿಗಳು 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ಪರೀಕ್ಷೆಯನ್ನು ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ ಭಾರತ ಸಂಸ್ಕೃತಿ ಪ್ರತಿಷ್ಠಾನದ ಪ್ರಮಾಣ ಪತ್ರಗಗನ್ನು ನೀಡಲಾಗಿದ್ದು, ಮೊದಲೆರಡು ಸ್ಥಾನಗಳನ್ನು ಪಡೆದ ಕಾವ್ಯ – ಕಾಂಚನಾರಿಗೆ ಫಲಕವು ಲಭಿಸಿದೆ.
ರಾಂಕ್ ವಿಜೇತ ವಿದ್ಯಾರ್ಥಿಗಳನ್ನು ಮತ್ತು ಪರೀಕ್ಷೆಯನ್ನು ಸಂಘಟಿಸಿದ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವ್ಕರ್ ಬರ್ಗಿಯವರನ್ನು ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಶ್ರೀ ಘಟಬೀರ ಪ್ರಸಾದಿತ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ನಾಗರಾಜ ಕೃಷ್ಣ ನಾಯ್ಕರವರು ಅಭಿನಂದಿಸಿದ್ದಾರೆ.
ಎಪ್ರಿಲ್ 11ರಂದು 11:00 ಗಂಟೆಗೆ ಬರ್ಗಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠವು ಕರ್ನಾಟಕ ಸಂಸ್ಕೃತ ಪರಿಷತ್ತಿನ ಸಹಯೋಗದೊಂದಿಗೆ ಆಯೋಜಿಸಿದ ” ಬರ್ಗಿ ಸಂಸ್ಕೃತೋತ್ಸವ ” ಕಾರ್ಯಕ್ರಮದಲ್ಲಿ ರಾಂಕ್ ವಿಜೇತರನ್ನು ಮತ್ತು 90 ಮತ್ತು 90 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದವರನ್ನು ಗೌರವಿಸಲಾಗುವುದೆಂದು ”ಕನ್ನಡ ಭಾರತೀ ಪ್ರಪಂಚ” ದ ಸಂಚಾಲಕರಾದ “ನಾಗನೆಲೆ” ಯ ನಾರಾಯಣ ನಾಗು ನಾಯಕರು ತಿಳಿಸಿದ್ದಾರೆ.

More Stories
ಮನೆ- ಮನವನ್ನು ಬೆಳಗಲು ಮನೆಗೊಂದು ಗ್ರಂಥಾಲಯ ಅವಶ್ಯ. -ಡಾ. ಮಾನಸ
ಬರ್ಗಿಯಲ್ಲಿ ಮನ್ನಣೆಯ ಮಣೆಯೇರಿದ ಗಾಯತ್ರಿ ಗೌಡ
ಡಾಕ್ಟರ್ ಮಾಮನೆಂದು ಇನ್ನು ಯಾರನ್ನು ಕರೆಯಲಿ? . ಅವರಿಗೆ ಅವರೇ ಸಾಟಿಯಾಗಿದ್ದರು.