September 11, 2025

ಸಚಿವ ಮಂಕಾಳ ಎಸ್. ವೈದ್ಯ ಅಧ್ಯಕ್ಷತೆ ಯಲ್ಲಿ ನಡೆದ ಕೆ.ಡಿ.ಪಿ. ಸಭೆ; ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ

ಭಟ್ಕಳ : ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರ ಅಧ್ಯಕ್ಷತೆಯಲ್ಲಿ ಭಟ್ಕಳ ತಾಲೂಕು ಪಂಚಾಯತ ಸಭಾಗ್ರಹದಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಸಭೆ (20 ಅಂಶಗಳ) ಪ್ರಗತಿ ಪರಿಶೀಲನಾ ಸಭೆಯು ನಡೆಯಿತು. ಸಭೆಯಲ್ಲಿ ಆರೋಗ್ಯ, ಶಿಕ್ಷಣ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಕಂದಾಯ ಇಲಾಖೆಯನ್ನು ಉದ್ದೇಶಿಸಿ ಮಾತನಾಡದ ಸಚಿವರು ಕಂದಾಯ ಇಲಾಖೆಯಲ್ಲಿ ನೀವೇ ಎಜೆಂಟರನ್ನು ರೆಡಿ ಮಾಡುತ್ತಿದೀರಾ. ನಿಮಗೆ ಉದಾಹರಣೆ ಕೊಡುತ್ತೇನೆ ಒಂದೂ ಹೋಟೆಲ್ ಓಪನ್ ಇದ್ದು, ಅದಕ್ಕೆ ಸಂಬAದಿಸಿದ ಲೈಸನ್ಸ್ ಮಾಡಿಕೊಡುವುದಿಲ್ಲ ಎಂದರೆ ಅದಕ್ಕೆ ಜವಾಬ್ದಾರಿ ಯಾರು. ಕಂದಾಯ ಇಲಾಖೆಯಷ್ಟು ಕೆಟ್ಟ ಇಲಾಖೆ ಭಟ್ಕಳದಲ್ಲಿ ಯಾವುದು ಇಲ್ಲ. ಗನ್ ರಿನೀವಲ್ ಹಾಗೂ ಇನ್ನಿತರ ಯಾವುದೇ ಕೆಲಸ ಮಾಡಿಕೊಳ್ಳಲು ಎಜೆಂಟರನ್ನು ಹುಡುಕಿಕೊಂಡೆ ನಿಮ್ಮ ಇಲಾಖೆಗೆ ಬರಬೇಕಾದ ಪರಿಸ್ಥಿತಿ ಬಂದಿದೆ. ಬಡವರು ಯಾರೇ ಬರಲಿ ಆರ್ ಟಿ ಸಿ, ಎನ್.ಎ, ಯಾವುದೇ ರೀತಿಯ ಕೆಲಸ ಇರಲಿ ಅವರು ಎಜೆಂಟರನ್ನು ಹುಡುಕಿಕೊಂಡೆ ಕೆಲಸ ಮಾಡಿಕೊಳ್ಳುವ ಪರಿಸ್ಥಿತಿ ತಂದಿಟ್ಟಿದ್ದೀರಿ ಎಂದು ಕಿಡಿಕಾರಿದರು

ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಸಭೆಗೆ ಹಾಜರಿದ್ದ ತಾಲೂಕಾ ವೈದ್ಯಾಧಿಕಾರಿ ಡಾ. ಅರುಣ ಕುಮಾರಗೆ ಅವರೊಂದಿಗೆ ಚರ್ಚೆ ಮಾಡಿದ ಸಚಿವರು ಆಸ್ಪತ್ರೆಗೆ ಎಲ್ಲರು ಬರ್ತಾರೆ ಎಲ್ಲರು ಹೋಗ್ತಾರೆ ಏನು ಮಾಡೋಕೆ ಆಗಲ್ಲ. ಈಗ ವಾಟ್ಸಾಪ್, ಫೇಸ್ಬುಕ್ ನಲ್ಲಿ ಬರ್ತಿರೋ ಡಾಕ್ಟರ್ ಗಳನ್ನು ನಾನು ಶಾಸಕನಾಗಿದ್ದ ವೇಳೆ ತಂದಿದ್ದು. ಯಾರು ಕೂಡ ವಾಟ್ಸಾಪ್, ಫೇಸ್ಬುಕ್ ನೋಡಿಕೊಂಡು ಬಂದವರಲ್ಲ. ನೀವು ಯಾವುದಕ್ಕೂ ಟೆನ್ಷನ್ ಅಗಬೇಡಿ. ಏನೇ ಇದ್ದರೂ ನೇರವಾಗಿ ಮಾತನಾಡಿ. ಆಸ್ಪತ್ರೆಗೆ ಬಡವರು ಬರ್ತಾರೆ ಅವರಿಗೆ ಒಳ್ಳೆಯ ಸೇವೆ ನೀಡಿ, ಅದು ಪುಣ್ಯದ ಕೆಲಸ ಎಂದ ಅವರು ಕಿರಿಕಿರಿ ಮಾಡಲು ಒಂದು ತಂಡ ಇರುತ್ತೆ, ಅದಕ್ಕೆ ಏನು ಮಾಡಲು ಬರುವುದಿಲ್ಲ. ನಾನು ಕೆಲಸ ಮಾಡ ಬಾರದು ಎಂದು ಒಂದು ತಂಡವಿದೆ. ಅವರು ಏನೆಲ್ಲ ಹೇಳುತ್ತಾ ಹೋಗುತ್ತಾರೆ. ಆದರೆ ನಾನು ಕೆಲಸ ಮಾಡುತ್ತಾ ಹೋಗುತ್ತೇನೆ. ನೀವು ಯಾವುದಕ್ಕೂ ಒತ್ತಡಕ್ಕೆ ಒಳಗಾಗ ಬೇಡಿ . ಎಲ್ಲಾ ವೈದರು ಬರ್ತಾರೆ, ಎಲ್ಲವನ್ನು ಬರ್ತಿ ಮಾಡಿಕೊಡುತ್ತೇನೆ .
ಆಸ್ಪತ್ರೆಯಲ್ಲಿನ ಆರೋಗ್ಯ ಸಮಿತಿಗೆ ಅಧ್ಯಕ್ಷನಿದ್ದೇನೆ ಏನೇ ಸಹಾಯ ಬೇಕಾಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ, ಪ್ರತಿ ತಿಂಗಳು ಮೀಟಿಂಗ್ ಕರೆದು ಗೊಂದಲಕ್ಕೆ ತೆರೆ ಎಳೆಯಿರಿ ಎಂದರು.

ಶಿಕ್ಷಣ ಇಲಾಖೆ
ದಸರಾ ರಜೆಯಲ್ಲಿ ವಿಶೇಷ ತರಗತಿ ತೆಗೆದುಕೊಂಡು ಪಠ್ಯ ಕ್ರಮಗಳನ್ನು ಮುಗಿಸಲಿದ್ದೇವೆ. 70 ಅತಿಥಿ ಶಿಕ್ಷಕರ ಜೊತೆಗೆ 12 ಶಿಕ್ಷಕರನ್ನು ಧರ್ಮಸ್ಥಳ ಸಂಘದ ಸಹಕಾರದಿಂದ ನೋಡಿಕೊಳ್ಳುತ್ತಿದ್ದೇವೆ.ಕಳೆದ 9 ವರ್ಷಗಳಿಂದ ಪದೋನ್ನತಿ ಆಗದೆ ಹಾಗೇ ಇರುವವರನ್ನು ಪದೋನ್ನತಿಗೊಳಿಸಲು ಸಹಕರಿಸಿದ ಸಚಿವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಭಿನಂದಿಸಿದರು.

ಸಾರಿಗೆ ಇಲಾಖೆ
ತಾಲೂಕಿನಲ್ಲಿ 69 ಬಸ್‌ಗಳಿದ್ದು ಉತ್ತಮ ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ 16 ಹೊಸ ಬಸ್ ಗಳನ್ನು ನೀಡಲಾಗಿದೆ. 27 ಜನರ ವರ್ಗಾವಣೆಯಿಂದ ಹೊಸ ಶಿಬ್ಬಂದಿಗಳು ಆ ಜಾಗಕ್ಕೆ ಬರದೇ ಇರುವುದರಿಂದ ಸಮಸ್ಯೆ ಆಗುತ್ತಿರುವುದನ್ನು ಸಚಿವರ ಗಮನಕ್ಕೆ ತಂದಾಗ ವರ್ಗಾವಣೆ ಆದ ಜಾಗಕ್ಕೆ ಹೊಸ ಶಿಬ್ಬಂದಿಗಳು ಬರುವ ತನಕ ಇಲ್ಲಿನ ಶಿಬ್ಬಂದಿಗಳನ್ನು ಯಾಕೆ ವರ್ಗಾವಣೆ ಮಾಡಿದ್ದೀರಿ ಎಂದರು.
ರಾತ್ರಿ ಹೊನ್ನಾವರಕ್ಕೆ ಪ್ರಯಾಣಿಸುವ ಪ್ರಯಾಣಿಕರು ಹೆದ್ದಾರಿಯಲ್ಲಿ ಕಾಯುತ್ತಿರುವುದು ಗಮನಕ್ಕೆ ಬಂದಿದ್ದು ರಾತ್ರಿ 8:00 ಘಂಟೆಗೆ ಇನ್ನೊಂದು ಬಸ್ ಬಿಡುವುದರಿಂದ ಬಸ್ತಿ, ಬೈಲೂರ, ಅನಂತವಾಡಿ , ಮಂಕಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು. ಈ ಮೊದಲು ಪ್ರತಿ 15 ನಿಮಿಷಕ್ಕೆ ಒಂದರAತೆ ಬಸ್ ಬಿಡಲಾಗುತ್ತಿದ್ದು, ಅದನ್ನು ಪುನ: ಬಿಡುವಂತೆ ಸಭೆಯಲ್ಲಿ ತಿಳಿಸಿದರು.

ಭಟ್ಕಳದಲ್ಲಿ ಹೊಸ ನ್ಯಾಯಾಲಯ ಕಟ್ಟಡಕ್ಕೆ 12 ಕೋಟಿ ಹಾಗೂ ನ್ಯಾಯಾಧೀಶರ ವಸತಿ ಕಟ್ಟಡಕ್ಕೆ 2ಕೋಟಿ ಮಂಜುರಿ ಮಾಡಲಾಗಿದ್ದು, ಸದ್ಯದಲ್ಲೇ ಹಸ್ತಾಂತರಿಸಲಾಗುವುದು ಎಂದರು.
ಮುರ್ಡೇಶ್ವರ ಕೊಡ್ಸುಳ ಶಾಲೆಗೆ ಒಬ್ಬರು ದಾನಿಗಳು ಒಂದೂ ಕೋಟಿ ಮೌಲ್ಯದ ಕಟ್ಟಡ ನಿರ್ಮಿಸಲು ಮುಂದಾಗಿದ್ದು, ಅವರಿಗೆ ಬೇಕಾದ ಅಗತ್ಯ ಸಹಾಯ- ಸಹಕಾರ ನೀಡಿ ಎಂದು ಶಿಕ್ಷಣ ಇಲಾಖೆಗೆ ತಿಳಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ, ಜನ ಸಾಮಾನ್ಯರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು ಸಚಿವರು ಸೂಚನೆ ನೀಡಿದರು.

About The Author

error: Content is protected !!