October 6, 2025

ಶಾಲೆ ಆವರಣವನ್ನೇ ಶುಚಿಗೊಳಿಸಿದ “ಯುವ ಶಕ್ತಿ” ಸ್ವಚ್ಛತಾ ಅಭಿಯಾನದಲ್ಲಿ ಕಟ್ಟೆವೀರ ಯುವ ಶಕ್ತಿ ಸಂಘ

ಭಟ್ಕಳ: ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಮುಟ್ಟಳ್ಳಿ ಶಾಲೆಯಲ್ಲಿ ಕಟ್ಟೆವೀರ ಯುವ ಶಕ್ತಿ ಸಂಘ ಮುಟ್ಟಳ್ಳಿ ಭಾನುವಾರ ಸ್ವಚ್ಛತಾ ಅಭಿಯಾನ ನಡೆಸಿ, ಶಾಲೆಯ ಆವರಣವನ್ನು ಹಸಿ ಹುಲ್ಲು, ಕಸ-ಕಡಿಗಳಿಂದ ಸ್ವಚ್ಛಗೊಳಿಸಿದರು.

ಪ್ರತಿಯೊಬ್ಬರ ಕರ್ತವ್ಯ: ಸ್ವಚ್ಛತೆ
ಸಂಘಟನೆಯ ಯುವಕರು ಕಾರ್ಯಕ್ರಮದಲ್ಲಿ ಸ್ವಚ್ಛತೆ ಕಾಪಾಡಿದರೆ ಆರೋಗ್ಯ ಸುಸ್ಥಿರವಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕರ್ತವ್ಯ ಎಂಬ ಸಂದೇಶವನ್ನೂ ಹಂಚಿಕೊ0ಡರು.
ಈ ಸಂದರ್ಭದಲ್ಲಿ ಯುವ ಶಕ್ತಿ ಸಂಘದ ಅಧ್ಯಕ್ಷ ಚಂದ್ರು ನಾಯ್ಕ, ಉಪಾಧ್ಯಕ್ಷ ದೇವೇಂದ್ರ ನಾಯ್ಕ, ಕಾರ್ಯದರ್ಶಿ ಯೋಗೇಶ್ ನಾಯ್ಕ ಮತ್ತು ಸದಸ್ಯರಾದ ಶೇಷಗಿರಿ ನಾಯ್ಕ, ಅನಂತ ನಾಯ್ಕ, ವೆಂಕಟರಮಣ ನಾಯ್ಕ, ಗೋವಿಂದ ನಾಯ್ಕ,ಮಂಜುನಾಥ ಡಿ. ನಾಯ್ಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

About The Author

error: Content is protected !!