October 5, 2025

ಭಟ್ಕಳದಲ್ಲಿ ಜಾನುವಾರು ಕಟಾವು ಪ್ರಕರಣ – ಇಬ್ಬರು ಅರೆಸ್ಟ್

ಭಟ್ಕಳ: ನಗರದ ಮುಗ್ಗುಂ ಕಾಲೋನಿ ಗುಡ್ಡೆ ಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಟಾವು ಮಾಡಿ, ರ‍್ಮ-ಎಲುಬು ಸೇರಿದಂತೆ ಬಿಡಿಭಾಗಗಳನ್ನು ಅರಣ್ಯದಲ್ಲಿ ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಸೆ.೧೧ರಂದು ಉಪವಲಯ ಅರಣ್ಯಾಧಿಕಾರಿ ಮಾರುತಿ ಸೊರಗಾಂವಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರ‍್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ–೨೦೨೦ರ ಕಲಂ ೪, ೧೨ ಸೇರಿದಂತೆ ಹಲವು ವಿಧಿಗಳಡಿ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.

ಈ ಹಿನ್ನೆಲೆಯಲ್ಲಿ ಸೆ.೧೭ರಂದು ಡಿವೈಎಸ್ಪಿ ಮಹೇಶ್ ಎಂ.ಕೆ. ಮರ‍್ಗರ‍್ಶನದಲ್ಲಿ, ಪಿಐ ದಿವಾಕರ ಪಿ.ಎಮ್. ನೇತೃತ್ವದ ತಂಡವು ಆರೋಪಿಗಳಾದ ಮೊಹಮ್ಮದ್ ಸಮಾನ್ (ಮುಗ್ಗುಂ ಕಾಲೋನಿ) ಹಾಗೂ ಮೊಹಮ್ಮದ್ ರಾಹೀನ್ (ಚೌಥನಿ, ಭಟ್ಕಳ) ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೃತ್ಯಕ್ಕೆ ಬಳಸಿದ ವಾಹನವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕರ‍್ಯಾಚರಣೆಯಲ್ಲಿ ಪಿಎಸ್ಐ ನವೀನ್ ನಾಯ್ಕ, ತಿಮ್ಮಪ್ಪ ಎಸ್. ಸೇರಿದಂತೆ ಸಿಬ್ಬಂದಿಯವರಾದ ದಿನೇಶ ನಾಯಕ, ದೇವು ನಾಯ್ಕ, ದೀಪಕ ನಾಯ್ಕ, ವಿನಾಯಕ ಪಾಟೀಲ್, ಕಾಶಿನಾಥ ಕೊಟಗೊಣಸಿ, ಸುರೇಶ ಮರಾಠಿ, ಕಿರಣ ಪಾಟೀಲ್ ಹಾಗೂ ರೇವಣಸಿದ್ದಪ್ಪ ಮಾಗಿ ರವರು ಪಾಲ್ಗೊಂಡಿದ್ದರು. ಜಿಲ್ಲಾ ಪೊಲೀಸ್‌ ಕಛೇರಿಯ ತಾಂತ್ರಿಕ ವಿಭಾಗದ ಉದಯ ಗುನಗಾ ಮತ್ತು ಬಬನ ಕದಂ ಸಹ ಕರ‍್ಯಾಚರಣೆಗೆ ಬೆಂಬಲ ನೀಡಿದರು.

About The Author

error: Content is protected !!