
ಗುಂಡ್ಲುಪೇಟೆ ಪಟ್ಟಣದ 21ನೇ ವಾರ್ಡಿನಲ್ಲಿ ನಡೆದ ರಾಷ್ಟ್ರೀಯ ಪೋಷಣ ಮಾಸಾಚರಣೆ ಅಭಿಯಾನಕಾರ್ಯಕ್ರಮವನ್ನು ಶ್ರೀ ಬಸವರಾಜ ತಳವಾರ ನ್ಯಾಯಾಧೀಶರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನಂತರ ಮಾತನಾಡಿದ ಅವರು ಘನ ಸರ್ಕಾರ ಯೋಜನೆಯನ್ನು ಮಹಿಳೆಯರ ಅನುಕೂಲಕ್ಕಾಗಿ ನಡೆಸಿಕೊಂಡು ಬಂದಿದೆ ಮತ್ತು ಮಹಿಳೆಯರು ಇದರ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಲ್ಲದೆ ಎಲ್ಲಾ ಮಹಿಳೆಯರು ಕಾನೂನಿನ ಅರಿವನ್ನು ತಿಳಿದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ಅಣ್ಣಯ್ಯ ಸ್ವಾಮಿ, ಕಾನೂನು ವಾಸಮಿತಿಕಾರ್ಯದರ್ಶಿಗಳಾದ ದೀಪು, ಎಂ ಟಿ,ಅಪರ ನ್ಯಾಯಾಧೀಶರಾದ ಗಿರೀಶ್, ಆರ್ ಬಿ, ಕೈಲಾಶ್ ಸತ್ಯಾರ್ಥಿ ನಾರಾಯಣಸ್ವಾಮಿ, ಸಿ.ಡಿ. ಪಿ. ಓ. ಹೇಮಾವತಿ,ಡಾಕ್ಟರ್ ಅಲಿoಪಾಷಾ, ಸರಸ್ವತಿ, ವಕೀಲರಾದ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮೋಹನ್ ಕುಮಾರ್, ತಾಲೂಕು ಸಂಯೋಜನೆ ಅಧಿಕಾರಿ ಸಂತೋಷ್ ಶೆಟ್ಟರಾಹುಂಡಿ, ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಸಿಬ್ಬಂದಿ ವರ್ಗದವರು ಸಾರ್ವಜನಿಕರು ಮಕ್ಕಳು ಉಪಸ್ಥಿತರಿದ್ದರು.
ಭಾವನಾ ಟಿವಿಗಾಗಿ ಸದಾನಂದ ಕನ್ನೆಗಾಲ ಗುಂಡ್ಲುಪೇಟೆ
More Stories
ಗುಂಡ್ಲುಪೇಟೆ ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ ನೂತನ ಕಟ್ಟಡ ಉದ್ಘಾಟನೆ.