October 5, 2025

ಉಚಿತ ತರಬೇತಿಯನ್ನು ಉದ್ಘಾಟಿಸಿದ ಡಯಟ್ ಪ್ರಾಚಾರ್ಯರಾದ ಶ್ರೀ ಎನ್.ಆರ್.ಹೆಗಡೆ.

ಹೊನ್ನಾವರ : ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ಎಂಟು ದಿನಗಳ ಎನ್.ಎಮ್.ಎಮ್.ಎಸ್ ಪರೀಕ್ಷಾ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ದಿನಾಂಕ 22.9.2025 ರಂದು ಹಮ್ಮಿಕೊಳ್ಳಲಾಯಿತು.
ಡಯಟ್ ಕುಮಟಾದ ಪ್ರಾಚಾರ್ಯರಾದ ಶ್ರೀ ಎನ್. ಆರ್. ಹೆಗಡೆಯವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ 20 ವರ್ಷಗಳಿಂದ “ಸಮರ್ಪಣಾ” ತರಬೇತಿ ಕೇಂದ್ರದ ಮೂಲಕ ರಜಾ ದಿನಗಳಲ್ಲಿ ವೈಯಕ್ತಿಕ ಕೆಲಸಗಳಲ್ಲಿ ತೊಡಗಿಕೊಳ್ಳುವ ಬದಲು, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಸೇರಿಸಿ, ಸಂಪನ್ಮೂಲ ವ್ಯಕ್ತಿಗಳನ್ನು ಕ್ರೋಢೀಕರಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದಕ್ಕೆ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. “ಅಧ್ಯಯನ ಪ್ರವೃತ್ತಿಯೇ ಯಶಸ್ಸಿಗೆ ಮಾರ್ಗ ” ಸಮಯ ಪರಿಪಾಲನೆ, ಶ್ರದ್ಧೆ, ನಿಷ್ಠೆಯಿಂದ ಪಾಠ ಪ್ರವಚನವನ್ನು ಕೇಳಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ಉತ್ತೀರ್ಣರಾದ ಐದು ವಿದ್ಯಾರ್ಥಿಗಳನ್ನು ಸಮರ್ಪಣಾ ವೇದಿಕೆಯ ಪರವಾಗಿ ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು.

    2025 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ  ಪ್ರಶಸ್ತಿಗೆ ಪುರಸ್ಕೃತರಾದ ಶ್ರೀ ಪಿ. ಆರ್.ನಾಯ್ಕ ರವರನ್ನು      ಶ್ರೀಚೆನ್ನಕೇಶವ ಪ್ರೌಢಶಾಲೆಯ ಪರವಾಗಿ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದದವರು  ಸನ್ಮಾನಿಸಿ ಗೌರವಿಸಿದರು. ಸನ್ಮಾನಿತರು ಮಾತನಾಡಿ ಸ್ಪರ್ಧಾ ಜಗತ್ತಿಗೆ ಬೆಳೆಯಲು ಅಧ್ಯಯನ ಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ, ಸತತ ಪರಿಶ್ರಮ, ಗುರಿ ಇಟ್ಟುಕೊಂಡಾಗ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ಮುಖ್ಯಾಧ್ಯಾಪಕರಾದ ಶ್ರೀಎಲ್.ಎಂ.ಹೆಗಡೆಯವರ ಕಾರ್ಯವೈಖರಿ ಹಾಗೂ ಸಮರ್ಪಣಾ ತರಬೇತಿ ಕೇಂದ್ರದ ಕಾರ್ಯವನ್ನು ಶ್ಲಾಘಿಸಿದರು.   

          ಡಯಟ್ ಕುಮಟಾದ  ಉಪ ಪ್ರಾಂಶುಪಾಲರು, ಶಾಲೆಯ ಪೂರ್ವ ವಿದ್ಯಾರ್ಥಿಗಳಾದ ಶ್ರೀ ಜಿ.ಎಸ್.ಭಟ್ಟರವರು ಮಾತನಾಡಿ, ಈ ತರಬೇತಿಯಲ್ಲಿ ಕಲಿತ ಅಂಶಗಳನ್ನು ಸದುಪಯೋಗಪಡಿಸಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಓದುತ್ತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಎನ್.ಎಂ.ಎA.ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕೆAದು ಹಾರೈಸಿದರು.
   ಎನ್.ಎಂ.ಎA.ಎಸ್. ನೋಡಲ್ ಅಧಿಕಾರಿಗಳು ಡಯಟ್ ಕುಮಟಾದ  ಉಪನ್ಯಾಸಕರಾದ ಶ್ರೀಮತಿ ಅಂಜನಾ ನಾಯ್ಕ ಮಾತನಾಡಿ, ಹೊನ್ನಾವರ ತಾಲೂಕಿನ ವಿದ್ಯಾರ್ಥಿಗಳು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಎನ್.ಎಂ.ಎA.ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಿರುವುದಕ್ಕೆ ಸಮರ್ಪಣಾ ತರಬೇತಿ ಕೇಂದ್ರದ ಕೊಡುಗೆಯನ್ನು  ಶ್ಲಾಘಿಸಿದರು.  
  ಸಮೂಹ ಸಂಪನ್ಮೂಲ ಕೇಂದ್ರ ಹೊನ್ನಾವರದ ಸಮನ್ವಯ ಅಧಿಕಾರಿಗಳಾದ ಶ್ರೀ ಎಮ್.ಆರ್.ಭಟ್ಟ ರವರು ಮಾತನಾಡಿ"ಲರ್ನಿಂಗ್ ವಿತ್ ಅರ್ನಿಂಗ್ " ಇರುವ ಪರೀಕ್ಷೆ ಇದಾಗಿದ್ದು ವಿದ್ಯಾರ್ಥಿಗಳಿಗೆ ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಿದೆ. ಎಂದು ಹೇಳುತ್ತಾ  ಸ್ವಯಂ ಪ್ರೇರಣೆಯಿಂದ   ತರಗತಿಯನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು.  
  ಉಪನ್ಯಾಸಕರು, ಸಂಪನ್ಮೂಲ ವ್ಯಕ್ತಿಗಳು,  ಶ್ರೀ ಆನಂದ ನಾಯ್ಕರವರು ಮಾತನಾಡಿ ವಿದ್ಯಾರ್ಥಿಗಳು ಜ್ಞಾನವನ್ನು ಸರಿಯಾದ ದಾರಿಯಲ್ಲಿ ಬಳಸಿಕೊಂಡು ಯಶಸ್ಸನ್ನು ಗಳಿಸಿ ಎಂದು ಹಾರೈಸಿದರು. 
    ಕಾರ್ಯಕ್ರಮದ ಅಧ್ಯಕ್ಷರು ಶಾಲೆಯ ಮುಖ್ಯ ಅಧ್ಯಾಪಕರು ಶ್ರೀ ಎಲ್.ಎಂ.ಹೆಗಡೆಯವರು ಮಾತನಾಡಿ, ಈ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದರಿಂದ ಹಣ ಸಿಗುವುದರ ಜೊತೆಗೆ ಜೀವನದ ಹಲವು ಮಜಲುಗಳಲ್ಲಿ ಬರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗಿದೆ. ನಂಬಿಕೆ ಮತ್ತು ವಿಶ್ವಾಸದಿಂದ ಕಾರ್ಯ ಸಾಧಿಸಬೇಕೆಂದು ತಿಳಿಸಿ,  ಸಮರ್ಪಣಾ ತರಬೇತಿ ಕೇಂದ್ರದಲ್ಲಿ ಉಚಿತವಾಗಿ ತರಬೇತಿ ನೀಡುತ್ತಿರುವ ಸಂಪನ್ಮೂಲ ವ್ಯಕ್ತಿಗಳನ್ನು ಗೌರವವಾಗಿ ಸಂಭೋಧಿಸಿ ಅಭಿನಂದನೆ ಸಲ್ಲಿಸಿದರು.    
  ಸಮರ್ಪಣಾ ತರಬೇತಿ ಕೇಂದ್ರದ ಸಂಚಾಲಕರಾದ ಶ್ರೀ ಶ್ರೀಕಾಂತ್ ಹಿಟ್ನಳ್ಳಿ ಅವರು ಸ್ವಾಗತಿಸಿದರು. ಕುಮಾರಿ ಕವಿತಾ ನಾಯ್ಕ ವಂದಿಸಿದರು. ಶ್ರೀಮತಿ ಸೀಮಾ ಭಟ್ಟ ಹಾಗೂ ಶ್ರೀಮತಿ ಮುಕ್ತಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.ತಾಲೂಕಿನ ವಿವಿಧ ಶಾಲೆಗಳಿಂದ ಸುಮಾರು 107  ವಿದ್ಯಾರ್ಥಿಗಳು ತರಬೇತಿಯಲ್ಲಿ ನೋಂದಾಯಿಸಿ ಪಾಲ್ಗೊಂಡಿದ್ದರು.

About The Author

error: Content is protected !!