October 5, 2025

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಪೋಷಣ ಮಾಶಾಸನ ಕಾರ್ಯಕ್ರಮದ ಅಂಗವಾಗಿ ಸಮವಸ್ತ್ರ ವಿತರಣೆ ಕಾರ್ಯಕ್ರಮ

ಹೊನ್ನಾವರ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಪೋಷಣ ಮಾಶಾಸನ ಕಾರ್ಯಕ್ರಮದ ಅಂಗವಾಗಿ ಮುಗ್ವಾ ಗ್ರಾ.ಪಂ. ವ್ಯಾಪ್ತಿಯ 13 ಅಂಗನವಾಡಿಗಳ 190 ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಸುಬ್ರಹ್ಮಣ್ಯದ ಪಾಠಶಾಲಾ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ  ಮುಗ್ವಾ ಗ್ರಾ.ಪಂ.ಅಧ್ಯಕ್ಷ ಐ.ವಿ.ನಾಯ್ಕ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ಪೌಷ್ಟಿಕಾಂಶದ ಆಹಾರ ಸೇವಿಸಬೇಕು. ಮಕ್ಕಳು ಹಾಗೂ ಮಹಿಳೆಯರ ಆರೋಗ್ಯ ವೃದ್ದಿಸಲು ಅಂಗನವಾಡಿ ಕಾರ್ಯಕರ್ತೆಯರ ಶ್ರಮವು  ಬಹುಮುಖ್ಯವಾಗಿದೆ. ಮಕ್ಕಳಿಗೆ ಸಮವಸ್ತ್ರ ವಿತರಿಸಿದ ಎಂ.ಪಿ.ಭಟ್ ಕಾರ್ಯವು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಲಾಖೆಯ ಯೋಜನಾಧಿಕಾರಿ ವನಿತಾ ದೇಶಭಂಡಾರಿ ಮಾತನಾಡಿ ಸಪ್ಟೆಂಬರ್ ತಿಂಗಳಿನಲ್ಲಿ ಅಂಗನವಾಡಿ ಮತ್ತು ಗ್ರಾ.ಪಂ. ಮಟ್ಟದಲ್ಲಿ ಪೋಷಣಾ ಅಭಿಯಾನ ಯಶ್ವಸಿಯಾಗಿ ಅನುಷ್ಟಾನ ಮಾಡಲಾಗುತ್ತದೆ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲಬಾರದು ಎಂದು ಈ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನವು ವರ್ಷವಿಡೀ ಮನೆಯಲ್ಲಿ ಅನುಷ್ಟಾನ  ಮಾಡುವಂತೆ  ಮಹಿಳೆಯರಿಗೆ ಪ್ರೇರೆಪಿಸುವುದು ಇದರ ಉದ್ದೇಶ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ದಾನಿಗಳ ಸಹಕಾರಕ್ಕೆ ಅಭಿನಂದಿಸಿದರು. 

 ಆರೋಗ್ಯ ಇಲಾಖೆಯ ಸಿಬ್ಬಂದಿ ಚಿದಾನಂದ ಮಾತನಾಡಿ ಬಾಲ್ಯದಲ್ಲಿರುವಾಗ ಉತ್ತಮ ಆಹಾರ ಸೇವಿಸುವ ನಾವೆಲ್ಲರು ದೊಡ್ಡವರಾದಂತೆ ಕಳಪೆ ಗುಣಮಟ್ಟದ ಆಹಾರ ಸೇವಿಸಿ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಕಾರ್ಯಕ್ರಮ ಆಯೋಜಿಸುತ್ತಿದ್ದು, ಉತ್ತಮ ಆಹಾರ ಸೇವಿಸುವ ಮೂಲಕ  ಅನಾರೋಗ್ಯ ಉಂಟಾಗದAತೆ ನೋಡಿಕೊಳ್ಳಬೇಕು ಎಂದರು.

 ಸಮವಸ್ತ್ರ ವಿತರಿಸಿದ ದಾನಿಗಳಾದ ಮಂಜುನಾಥ ಭಟ್ ಮಾತನಾಡಿ ನನ್ನಿಂದಾಗುವ ಚಿಕ್ಕ ಸಹಾಯ ಮಾಡಿದ್ದು, ನಿಮ್ಮ ಪ್ರೀತಿ ನೋಡಿದಾಗ ಇನ್ನು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಲು ಇದು ಪ್ರೇರಣೆಯಾಗುತ್ತಿದೆ ಎಂದರು. 

ತಾಲೂಕ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕೃಷ್ಣ ನಾಯ್ಕ, ಗ್ರಾ.ಪಂ. ಸದಸ್ಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರು ಆಶಾ ಕಾರ್ಯಕರ್ತೆಯರು ಪಾಲಕರು ಇದ್ದರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!