ಹೊನ್ನಾವರ : ಸ್ವಚ್ಛತಾ ಕಾರ್ಯಕರ್ತರು ನಮ್ಮ ಸಮಾಜಕ್ಕೆ ಹೀರೋಗಳು ಎಂದು ಪ.ಪಂ.ಅಧ್ಯಕ್ಷ ವಿಜಯ ಕಾಮತ್ ಪೌರಕಾರ್ಮಿಕರ ಕಾರ್ಯವೈಖರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯತ ಸಭಾಭವನದಲ್ಲಿ ನಡೆದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದ ಅವರು ಪಟ್ಟಣದ ಸ್ವಚ್ಚತೆಗಾಗಿ ಸೈನಿಕರಂತೆ ಪೌರ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರ ಕೆಲಸವನ್ನು ಗೌರವಿಸುವುದು ಮತ್ತು ಅವರ ಶ್ರಮಕ್ಕೆ ಬೆಲೆ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನಕ್ಕೆ ಇವರು ಶ್ರಮಿಸುತ್ತಿದ್ದಾರೆ ಎಂದರು.
ಪ.ಪಂ. ಮುಖ್ಯಾಧಿಕಾರಿ ಯೇಸು ಬೆಂಗಳೂರು ಮಾತನಾಡಿ ಪಟ್ಟಣದ ಸ್ವಚ್ಛತೆಗೆ ಪೌರಕಾರ್ಮಿಕರ ಪಾತ್ರ ಮುಖ್ಯವಾಗಿದೆ. ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಾಸ್ಕ್, ಹ್ಯಾಂಡ್ ಗ್ಲೋಸ್ ಬಳಸಬೇಕು, ಆರೋಗ್ಯ ಕೇಡದಂತೆ ನೋಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ನಿವೃತ್ತ ಪೌರ ಕಾರ್ಮಿಕರಾಗಿದ್ದ ಕಮಲ ಹಿರೇಣಯ್ಯ ಹರಿಜನ ಕಾರ್ಯಕ್ರಮ ಉದ್ಘಾಟಿಸಿರುದು ವಿಶೇಷವಾಗಿತ್ತು. ಪ. ಪಂ. ಉಪಾಧ್ಯಕ್ಷ ಸುರೇಶ ಹೊನ್ನಾವರ ಮಾತನಾಡಿ ನಾಲ್ಕು ದಿನ ಅವರು ಕೆಲಸ ಮಾಡದೆ ಇದ್ದರೆ, ಪಟ್ಟಣ ಪೂರ್ತಿ ಕಸ ತುಂಬಿ, ವಾಸನೆ ಎದ್ದಿರುತ್ತದೆ. ಅವರಿಗೆ ನಾವು ಸಹಕರಿಸಬೇಕು. ಒಣ ಕಸ, ಹಸಿ ಕಸ ಬೆರ್ಪಡಿಸಿಕೊಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಹೈಕೋರ್ಟ್ ನ್ಯಾಯವಾದಿ ರವೀಂದ್ರ ಸುಬ್ಬ ಮಂಗಳ ಉಪನ್ಯಾಸ ನೀಡಿದರು. ಪ. ಪಂ. ಸದಸ್ಯರಾದ ನಾಗರಾಜ ಭಟ್ಟ, ಮೇಧಾ ನಾಯ್ಕ, ಭಾರತಿ ಬಂಡಾರಿ, ಮಾತನಾಡಿದರು. ಪೌರ ಕಾರ್ಮಿಕರಿಗೆ ಮತ್ತು ಮುಖ್ಯಾಧಿಕಾರಿಗೆ ಸನ್ಮಾನ ನಡೆಯಿತು. ಪೌರ ಕಾರ್ಮಿಕರ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು. ಚಾಲಕ ಚಿದಾನಂದ ನಾಯ್ಕ ಯಕ್ಷಗಾನ ನ್ರತ್ಯ ಪ್ರದರ್ಶನ ಮಾಡಿದರು. ಪೌರ ಕಾರ್ಮಿಕರ ನಿತ್ಯದ ಕೆಲಸದ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್ ಮೇಸ್ತ, ಸದಸ್ಯರಾದ ಶಿವರಾಜ್ ಮೇಸ್ತ, ಸುಬ್ರಾಯ ಗೌಡ, ಸುಭಾಸ್ ಹರಿಜನ್ ಇನ್ನಿತರ ಪ. ಪಂ. ಸದಸ್ಯರು, ಮಾಜಿ ತಾ. ಪಂ. ಸದಸ್ಯ ಭಾಷಾ ಪಟೇಲ್, ತುಳಸಿದಾಸ್ ಪಾವಸ್ಕರ ಇತರರು ಇದ್ದರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”