October 5, 2025

ಗ್ರಾಮದ ಯುವ ಸಮುದಾಯ ಭೃಷ್ಠಾಚಾರದ ವಿರುದ್ದ ಧ್ವನಿ

ಹೊನ್ನಾವರ: ತಾಲೂಕಿನ ಹಡಿನಬಾಳ ಸರ್ಕಾರಿ ಪ್ರೌಡಶಾಲಾ ಸಭಾಭವನದಲ್ಲಿ ಗ್ರಾಮ ಪಂಚಾಯತಿಯ ಮಟ್ಟದಲ್ಲಿ ನಡೆದ ವಿವಿಧ ಕಾಮಗಾರಿಯ ಬಗ್ಗೆ ಗ್ರಾಮದ ಯುವ ಸಮುದಾಯ ಪ್ರಶ್ನೆ ಮಾಡಿ ಜನಪ್ರತಿನಿಧಿಗಳು, ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿಸಿದ ಘಟನೆ ವರದಿಯಾಗಿದೆ. ಹಲವು ಕಾಮಗಾರಿಗಳಿಗೆ ಸಭೆಯಲ್ಲಿ ಜನಪ್ರತಿನಿಧಿ, ಅಧಿಕಾರಿಗಳು ಉತ್ತರಿಸಲು ಪರದಾಟ ನಡೆಸಿದರು. ಗ್ರಾಮಸ್ಥರ ನಿರ್ಧಾರಕ್ಕೆ ಬದ್ದರಾಗಿರುದಾಗಿ ತಿಳಿಸಿ ಹಲವು ಮಹತ್ತರ ನಿರ್ಣಯಕ್ಕೆ ಗ್ರಾಮಸಭೆ ಸಾಕ್ಷಿಯಾಯಿತು. ಗ್ರಾ.ಪಂ.ಜನಪ್ರತಿನಿಧಿಗಳ ಕಾರ್ಯವೈಖರಿಗೆ ಅಸಮಧಾನ ವ್ಯಕ್ತಪಡಿಸುತ್ತಾ ತರಾಟೆಗೆ ತೆಗೆದುಕೊಂಡರು.


ಸಾಮಾನ್ಯವಾಗಿ ಗ್ರಾಮಸಭೆ ಅರ್ಧ ದಿನ ಚರ್ಚೆ ವಿಸ್ತ್ರೀತವಾದರೆ ಒಂದೆ ದಿನದಲ್ಲಿ ಮುಗಿಯಲಿದೆ. ಆದರೆ ಹಡಿನಬಾಳ ಗ್ರಾಮ ಸಭೆ ಈ ಬಾರಿ ನಾಲ್ಕು ದಿನವು ನಡೆಯುತ್ತಿರುವುದು ವಿಶೇಷವಾಗಿದೆ. ಸೆ. 11 ರಂದು ನಡೆದ ಗ್ರಾಮ ಸಭೆ ರಾತ್ರಿಯಾದರು ಮುಗಿಯದೆ ಇದ್ದಾಗ, ಸೆ. 23 ಕ್ಕೆ ಮುಂದೂಡಲಾಗಿತ್ತು. ಆ ದಿನವು ಮುಗಿಯದೆ, 24 ಕ್ಕೆ ಮುಂದೂಡಲಾಗಿತ್ತು. 24 ರ ರಾತ್ರಿಯಾದರು ಮುಗಿಯದೆ 25 ಕ್ಕೆ ನಡೆದಿರುವುದು ವಿಶೇಷವಾಗಿದೆ. ಒಂದು ವರ್ಷದಲ್ಲಿ ಎರಡು ಬಾರಿ ನಡೆಯುವ ಗ್ರಾಮ ಸಭೆ ಈ ಬಾರಿ ಹಡಿನಬಾಳ ಗ್ರಾಮ ಪಂಚಾಯತಿಯಲ್ಲಿ ನಾಲ್ಕು ದಿನವಾದರೂ ಮುಗಿಯದ ಗ್ರಾಮ ಸಭೆಯಾಗಿ ಭೃಷ್ಠಾಚಾರದ ಚರ್ಚೆಗೆ ಸಾಕ್ಷಿಯಾಯಿತು.


ಗ್ರಾಮ ಪಂಚಾಯತ ಕಂಪೌAಡ್ ಒಳಗೆ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಬಾರದು, ಅಲ್ಲಿ ಕಟ್ಟುತ್ತಿರುವ ವಿಲೇವಾರಿ ಘಟಕಕ್ಕೆ ಎಷ್ಟು ಹಣ ಹಾಕಿದ್ದೀರಿ, ಕಸ ವಿಲೇವಾರಿ ಘಟಕ ಹೊರಗಡೆ ಇರಬೇಕು, ಇಲ್ಲಿಂದ ಸ್ಥಳಂತರ ಮಾಡಿ ಬೇರೆ ಜಾಗದಲ್ಲಿ ಮಾಡಿ, ಗಾಂಧಿ ಜಯಂತಿ ದಿನ ಕಸ ವಿಲೇವಾರಿ ಘಟಕ ಉದ್ಘಾಟನೆ ಮಾಡಲು ನಾವು ಕೊಡುವುದಿಲ್ಲ ಎಂದು ಪಟ್ಟು ಹಿಡಿದಾಗ ಅನಿವಾರ್ಯವಾಗಿ ಮುಂದುವ ನಿರ್ಧಾರಕ್ಕೆ ಬಂದರು.
ಕಸ ವಿಲೇವಾರಿ ವಾಹನ ಖರೀದಿಸಿ ಮೂರು ವರ್ಷ ಆಗಿದೆ. ಐದು ಬಾರಿ ಪ್ರೀ ಸರ್ವಿಸ್ ಇದ್ದರೂ ಯಾಕೆ ಮಾಡಿಸಿಲ್ಲ. ಇನ್ಶೂರೆನ್ಸ್ ಯಾಕೆ ಮಾಡಿಸಿಲ್ಲ. ಸರ್ವಿಸ್ ಮಾಡಿಸದೆ ಖರ್ಚು ಹಾಕಿ ಹಣ ಹೊಡೆದಿದ್ದೀರಿ, ಸ್ವಚ್ಛ ಭಾರತ್ ಅಭಿಯಾನ ಯೋಜನೆಯಲ್ಲಿ 400 ಜನರ ಹೆಸರು ಇದೆ. ಹೇಗೆ ಅವರ ಹೆಸರು ಸೇರ್ಪಡೆ ಆಗಿದೆ. ಅವರಿಗೆ ಏನು ಸೌಲಭ್ಯ ಕೊಟ್ಟಿದ್ದೀರಿ. ಸೊಶಿಯಲ್ ಆಡಿಟ್ ಗೆ 60 ಸಾವಿರ ಖರ್ಚು ಹಾಕಲಾಗಿದೆ. ಅವರು ಯಾಕೆ ಭ್ರಷ್ಟಾಚಾರ ಕಂಡುಹಿಡಿದಿಲ್ಲ. ಭ್ರಷ್ಟಾಚಾರ ಮುಚ್ಚಿ ಹಾಕಲು ಹಣ ನೀಡಿದ್ದೀರಾ? ಎಂದು ಸಾರ್ವಜನಿಕರು ಅಧಿಕಾರಿಗಳು ಜನಪ್ರತಿನಿಧಿಗಳ ಮುಂದೆ ಗ್ರಾಮಸ್ಥರು ಪ್ರಶ್ನೆಯ ಸುರಿಮಳೆಗೈದರು.


ಇನ್ನು ಗ್ರಾ.ಪಂ.ಹಣಕಾಸು ಯೋಜನೆಯಡಿ ಹಡಿನಬಾಳ ಪ್ರೌಢ ಶಾಲೆಯ ಅಡಿಗೆ ಕೋಣೆಗೆ ದುರಸ್ಥಿಗೆ ಮೂರು ಬಾರಿ ಬಿಲ್ ಹಾಕಲಾಗಿದೆ. ಮತ್ತೊಂದು ಕಡೆ ಕೆಲಸ ಮಾಡದೆ ಬಿಲ್ ಮಾಡಲಾಗಿದೆ. ದಾಖಲೆಯಲ್ಲಿ ಖರ್ಚು ಬಿದ್ದಿದೆ, ಕಾಮಗಾರಿ ಮಾತ್ರ ಮಾಡಿಲ್ಲ, ಇದು ಯಾವ ರೀತಿ ಭ್ರಷ್ಟಾಚಾರ, ಗ್ರಾ. ಪಂ. ವ್ಯಾಪ್ತಿಯಲ್ಲಿ ಒಂದೆ ಕಾಮಗಾರಿ ಎರಡು ಬಿಲ್ ಆಗಿರುವುದು ಇದೆ. ಒಂದೆ ಕಾಮಗಾರಿಗೆ ಬೇರೆ ಬೇರೆ ಅನುದಾನ ಹಾಕಿ ಬಿಲ್ ಮಾಡಿರುತ್ತಾರೆ ಎಂದು ದಾಖಲೆ ಸಮೇತ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಬಗ್ಗೆ ಸಹಿ ಮಾಡಿದ ಜನಪ್ರತಿನಿಧಿಗಳ ನಡೆಗೆ ತೀವ್ರ ಆಕ್ಷೇಪವಾಯಿತು.
ಸೋಲಾರ್ ಒಂದಕ್ಕೆ 40 ಸಾವಿರಕ್ಕೆ ಖರ್ಚು ಹಾಕಿದ್ದಾರೆ. ರಿಪೇರಿಗೆ 10 ರಿಂದ 15 ಸಾವಿರ ಖರ್ಚು ಹಾಕಿದ್ದಾರೆ. ಕೋಟೇಷನ್ ತೆಗೆದುಕೊಳ್ಳದೆ ಖರೀದಿ ಮಾಡಿದ್ದಾರೆ. ಬೇರೆ ಗ್ರಾ. ಪಂ ನಲ್ಲಿ ಒಂದು ಬೆಲೆ ಇಲ್ಲಿ ಮತ್ತೊಂದು ಬೆಲೆ, ಇದರ ತನಿಖೆ ಆಗಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು. ಸೋಲಾರ್ ಬೆಲೆ ಪರಿಶೀಲನೆ ಮಾಡಿಲ್ಲ ಎಂದು ಗ್ರಾ. ಪಂ. ಉಪಾಧ್ಯಕ್ಷರು ಒಪ್ಪಿಕೊಂಡರು. ಗ್ರಾಮ ಪಂಚಾಯ ವ್ಯವಸ್ಥೆ ಗೊತ್ತಿಲ್ಲದೆ ಯಾಕೆ ಮೆಂಬರ್ ಆಗಬೇಕು ಎಂದು ಗ್ರಾಮಸ್ಥರು ಕೇಳಿದಾಗ, ಅವರಿಗೆ ಅವಮಾನ ಮಾಡಬೇಡಿ ಎಂದು ಅಧಿಕಾರಿ ಹೇಳಿದರು. ಹಾಗಿದ್ದರೆ ಅವರು ಭ್ರಷ್ಟಾಚಾರ ಮಾಡಿದ್ದು ಸರಿಯೇ ಎಂದು ಮರು ಪ್ರಶ್ನೆ ಮಾಡಿದರು. ನಮ್ಮನ್ನು ಕಟ್ಟಿ ಹಾಕುವ ಕೆಲಸ ಮಾಡಬೇಡಿ, ಭ್ರಷ್ಟಾಚಾರದ ತನಿಖೆ ಆಗಲಿ ಎಂದಾಗ ನೋಡಲ್ ಅಧಿಕಾರಿ ಲಿಖಿತವಾಗಿ ಬರೆದು ಕೊಡಿ ತನಿಖೆ ಮಾಡುತ್ತೇವೆ ಎಂದರು, ಆಗ ಗ್ರಾಮಸ್ಥರು ನಮಗೂ ನೀವು ಲಿಖಿತವಾಗಿ ಬರೆದು ಕೊಡಿ ಎಂದು ನೋಡೆಲ್ ಅಧಿಕಾರಿಗೆ ಪಟ್ಟು ಹಿಡಿದರು.


ಗ್ರಾಮ ಪಂಚಾಯತದಲ್ಲಿ ಪೂರ್ಣ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಹಲವು ಕಾಮಗಾರಿಗೆ ಡಬಲ್ ಬಿಲ್ ಬಿದ್ದಿದೆ. ನಿಯಮವನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದ ಹಾಗೆ ಆಡಳಿತ ನಡೆಸಿದ್ದಾರೆ. ಲೋಕಾಯುಕ್ತ ತನಿಖೆ ನಡೆಸುವಂತೆ ಆಗ್ರಹಿಸಿದರು.


ನೋಡಲ್ ಅಧಿಕಾರಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಚೇತನಕುಮಾರ ಆಗಮಿಸಿ ಅನುದಾನ ಬಿಡುಗಡೆ ಹಾಗೂ ಆಡಿಟ್ ಕ್ರಮದ ಕುರಿತು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದರು. ಗ್ರಾ.ಪಂ.ಮಟ್ಟದ ಕಾಮಗಾರಿಯಲ್ಲಿ ಲೋಪ ಅಥವಾ ಹಣಕಾಸಿನ ಅವ್ಯವಹಾರದ ಬಗ್ಗೆ ಲಿಖಿತವಾಗಿ ದೂರು ಬಂದಲ್ಲಿ ತನಿಖೆ ನಡೆಸುದಾಗಿ ಸಭೆಯ ಗಮನಕ್ಕೆ ತಂದರು. ಪ್ರತಿ ವರ್ಷವು ಆಡಿಟ್ ನಡೆದು ವರದಿಯನ್ನು ನೀಡುತ್ತಾರೆ ಎಂದು ಸಮಜಾಯಿಸಿ ನೀಡಿದರು
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!