
ಹೊನ್ನಾವರ: ವಾಟ್ಸಾಪ್ ಯುನಿರ್ವಸಿಟಿಯಲ್ಲಿ ಬಂದ ಸುದ್ದಿಗಳನ್ನು ಓದಿ ಗಾಂಧಿ ಬಗ್ಗೆ ನಕರಾತ್ಮಕತೆಯನ್ನು ಬೆಳಸಿಕೊಳ್ಳುವುದ ಬೇಡ ಎಂದು ಹೊನ್ನಾವರದಲ್ಲಿ ನಡೆದ ಗಾಂಧಿ ಜಯಂತಿ ನಿಮಿತ್ತ ಕಾರ್ಯಕ್ರಮದಲ್ಲಿ ಸ್ರೀ ರೋಗ ತಜ್ಞರಾದ ಡಾ| ಕೃಷ್ಣಾಜಿ ಅಭಿಪ್ರಾಯಪಟ್ಟರು.
ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ಹೂ ಸಮರ್ಪಿಸಿ ಆಸ್ಪತ್ರೆ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ನಾವು ಮಾಡುವ ಸ್ವಚ್ಛತಾ ಕಾರ್ಯಕ್ರಮ ಗಾಂಧಿ ಜಯಂತಿಗೆ ಮಾತ್ರ ಸೀಮಿತವಾಗುತ್ತಿದೆ. ಎಲ್ಲಾ ರೀತಿಯ ಆಧುನಿಕ ವ್ಯವಸ್ಥೆ ಹೊಂದಿದಾಗಲೂ ನಮ್ಮ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ವಿಪಲರಾಗಿದ್ದೆವೆ. ಗಾಂಧೀಜಿ ಅವರ ಮುಖ್ಯ ಗುರಿ ಸಚ್ಛತೆಸಾಕಾರಗೊಳಿಸಲು ಇವತ್ತಿಗೂ ಆಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ನಡುವಳಿಕೆಗಳಲ್ಲಿ ಗಾಂಧಿಯವರ ಸ್ವಚ್ಛತಾ ಮನೋಭಾವ ಬರಬೇಕಾಗಿದೆ. ಸ್ವಚ್ಛತೆ ಎನ್ನುವುದು ಕೇವಲ ಒಂದು ವರ್ಗದವರಿಗೆ ಮಾತ್ರ ಸೀಮಿತ ಎನ್ನುವ ಮನೋಭಾವನೆಯಿಂದ ಹೊರಬರಬೇಕಾಗಿದೆ. ನಮ್ಮ ಮನೆ ಮಾತ್ರವಲ್ಲ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಸ್ವಚ್ಛತೆ ಬಗೆಗಿನ ಇವತ್ತಿನ ವ್ಯವಸ್ಥೆ, ಜನರ ಮನೋಭಾವ ಬದಲಾಗಬೇಕಿದೆ. ಸ್ವಚ್ಛತೆ ಕುರಿತು ಜನರಲ್ಲಿ ಅರಿವು ಬರಬೇಕಾಗಿದೆ. ಇವತ್ತು ಪ್ರಪಂಚದಲ್ಲಿ ಹಿಂಸೆ ಇಲ್ಲದ ಭೂಭಾಗ ಕಾಣಸಿಗದಿರುವ ಸಂದರ್ಭದಲ್ಲಿ ಗಾಂಧಿಯ ಅಹಿಂಸಾ ಪ್ರತಿಪಾದನೆ ಹೆಚ್ಚು ಪ್ರಸ್ತುತವಾಗಿದೆ. ಗಾಂಧಿಜಿಯ ಧಾರ್ಮಿಕ ಮನೋಭಾವ ವ್ಯಕ್ತಿತ್ವದ ಮುಂದೆ ನಮ್ಮ ಧಾರ್ಮಿಕ ವ್ಯಕ್ತಿತ್ವ ತುಂಬಾ ಕಡಿಮೆ. ಇವತ್ತು ಗಾಂಧಿಜಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಅವರ ಬಗ್ಗೆ ನಕರಾತ್ಮಕ ಮಾತುಗಳನ್ನಾಡುತ್ತಾರೆ. ವಾಟ್ಸಾಪ್‌ಗಳಲ್ಲಿ ಬಂದ ಸುದ್ದಿಗಳನ್ನು ಗಾಂಧಿ ವ್ಯಕ್ತಿತ್ವದ ಬಗ್ಗೆ ಮಾತನಾಡುವುದು ತಪ್ಪು. ಅವರ ಆತ್ಮ ಚರಿತ್ರೆಗಳನ್ನು ಓದಿ ಸರಿಯಾಗಿ ವಿಮರ್ಶಿಸಿ ನಂತರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಉತ್ತಮ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ|| ಗುರುದತ್ತ ಕುಲಕರ್ಣಿ, ಡಾ|| ಜೈಮನಿ, ಪ್ರಯೋಗಶಾಲಾ ತಂತ್ರಜ್ಞರಾದ ಉಮೇಶ ಕೆ, ಕಛೇರಿ ಸಿಬ್ಬಂಧಿಗಳಾದ ವೆಂಕಟೇಶ ಜಾಡಮಾಲಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂಧಿವರ್ಗ, ಶುಶ್ರೂಷಾಧಿಕಾರಿಗಳು ಉಪಸ್ಥಿತರಿದ್ದರು.
More Stories
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ
ಮುರುಡೇಶ್ವರಲ್ಲಿ ನಾಲ್ವರು ಪ್ರವಾಸಿಗರ ಜೀವ ರಕ್ಷಣೆ – ಜೀವರಕ್ಷಕ ದಳದ ಸಾಹಸಕ್ಕೆ ಮೆಚ್ಚುಗೆ